ಚಳ್ಳಕೆರೆ : 536ನೇ ಕನಕ ಜಯಂತಿಯನ್ನು ಚಳ್ಳಕೆರೆ ತಾಲೂಕಿನ ಶ್ರೀ ರೇವಣಸಿದ್ದೇಶ್ವರ ವಿದ್ಯಾವರ್ಧಕ ಸಂಘದಿAದ ಈ ಬಾರಿ ಅದ್ದೂರಿಯಾಗಿ, ಅರ್ಥಗರ್ಭಿತವಾಗಿ ಆಚರಿಸಲು ಸಂಘದ ಪದಾಧಿಕಾರಿಗಳು ತಿರ್ಮಾನ ಮಾಡಿದ್ದೆವೆ ಎಂದು ರೇವಣಸಿದ್ದೇಶ್ವರ ಸಂಘದ ತಾಲೂಕು ಅಧ್ಯಕ್ಷ ಆರ್.ಮಲ್ಲೆಶಪ್ಪ ಹೇಳಿದರು.
ನಗರದ ಚಿತ್ರದುರ್ಗ ರಸ್ತೆಯ ಕುರುಬರ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಮೂರು ವರ್ಷಗಳಿಂದ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿಯಿಂದ ಸರಳವಾಗಿ ಆಚರಣೆ ಮಾಡಿಕೊಂಡು ಬಂದಿದ್ದೆವೆ, ಆದರೆ ಈ ಬಾರಿ ಅದ್ದೂರಿಯಾಗಿ ಆಚರಿಸಲು ತಾಲೂಕಿನ ಸಮಸ್ತ ಹಾಲುಮತಸ್ತದ ಪದಾಧಿಕಾರಿಗಳು ಕಂಕಣಬದ್ದರಾಗಿದ್ದಾರೆ.
ಇನ್ನೂ ಈ ಬಾರಿ ಚಿತ್ರದುರ್ಗ ರಸ್ತೆಯ ಕುರುಬರ ವಿದ್ಯಾರ್ಥಿ ನಿಲಯ ಮುಂಬಾಗದ ರಸ್ತೆಗೆ ಶ್ರೀ ಭಕ್ತ ಕನಕದಾಸ ವೃತ್ತ ಎಂದು ನಾಮಕರಣ ಮಾಡಲಾಗುವುದು, ಈ ವೃತ್ತ ನಾಮಕರಣ ಭೂಮಿ ಪೂಜೆಯನ್ನು ನ.30 ರಂದು ಬೆಳ್ಳಿಗ್ಗೆ 9ಕ್ಕೆ ನಾಮಕರಣ ಭೂಮಿ ಪೂಜೆ ನೆರೆವೆರಿಸಲಾಗುವುದು ತದನಂತರ ಮೆರವಣಿಗೆ ಮಾಡಲಾಗುವುದು, ನಂತರ ಸಭಾ ಕಾರ್ಯಕ್ರಮ ಮಾಡಲಾಗುವುದು ಎಂದರು.
ಇನ್ನೂ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇAದ್ರ ಮಾತನಾಡಿ, ಪ್ರತಿ ಬಾರಿಗಿಂತ ಈ ಬಾರಿ ವಿಶೇಷವಾಗಿ ಕನಕದಾಸರ ಕಿರ್ತನೆಗಳನ್ನು ಹಾಡುವ ಮೂಲಕ ಸಭೆಗೆ ಮೆರಗು ತರಲಾಗುವುದು, ಇನ್ನೂ ಅಂದಿನ ದಿನ ಮುಂಜಾನೆ ಕನಕದಾಸರ ವೃತ್ತದ ಭೂಮಿ ಪೂಜೆಯನ್ನು ಸಂಸದರಾದ ಎ.ನಾರಾಯಣಸ್ವಾಮಿ, ಜಿಲ್ಲಾ ಉಸ್ತೂವಾರಿ ಮಂತ್ರಿ ಡಿ.ಸುಧಾಕರ್, ಹಾಗೂ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ನೆರೆವೆರಿಸುವರು. ಆದ್ದರಿಂದ ತಾಲೂಕಿನ ಸಮಸ್ತ ಹಾಲುಮತಸ್ತ ಜನಾಂಗ ಹಾಗೂ ಎಲ್ಲಾ ಸಾರ್ವಜನಿಕರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೊರಿದ್ದರು.
ಪ್ರಾಂಶುಪಾಲರಾದ ಎಂ.ಶಿವಲಿAಗಪ್ಪ ಮಾತನಾಡಿ, ನಾಡು ಕಂಡ ಶ್ರೇಷ್ಠ ಸಂತರ ಸಾಲಿನಲ್ಲಿ ಇರುವ ಶ್ರೀ ಭಕ್ತ ಕನಕದಾಸರ ಜಯಂತಿಯನ್ನು ಬಹಳ ಅರ್ಥಗರ್ಭಿತವಾಗಿ ಆಚರಿಸಲು ಈಡೀ ತಾಲೂಕಿನ ಎಲ್ಲಾ ವರ್ಗದ ಜನರು ಉತ್ಸುಹಕರಾಗಿದ್ದಾರೆ ಇನ್ನೂ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹಿತಾಸಕ್ತಿಯಿಂದ ನಗರದಲ್ಲಿ ಶ್ರೀ ಭಕ್ತ ಕನಕದಾಸರ ವೃತ್ತ ನಾಮಕರಣವಾಗುವುತ್ತಿರುವುದು ನಮ್ಮೆಲರ ಹೆಮ್ಮೆಯಾಗಿದೆ ಆದ್ದರಿಂದ ತಾಲೂಕಿನ ಸಮಸ್ತ ಜನತೆ ಕಾರ್ಯಕ್ರಮಕ್ಕೆ ಆಗಮಿಸಲು ಕರೆ ನೀಡಿದ್ದೆವೆ ಎಂದರು.
ಈದೇ ಸಂಧರ್ಭದಲ್ಲಿ ರೇವಣಶಿದ್ದೇಶ್ವರ ಸಂಘದ ಅಧ್ಯಕ್ಷ ಆರ್.ಮಲ್ಲೆಶಪ್ಪ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇAದ್ರ, ಪ್ರಾಂಶುಪಾಲರಾದ ಎಂ.ಶಿವಲಿಗAಪ್ಪ, ವಿ.ಮಂಜುನಾಥ್, ಪೂಜಾರಿಪರಸಪ್ಪ, ಆರ್.ಸದಾಶಿವಪ್ಪ, ಎನ್.ಬಿ.ಹನುಮಂತರಾಯ, ಬಸವರಾಜ್, ರುದ್ರಮುನಿ, ಇತರ ಸಮಾಜದ ಮುಖಂಡರು ಹಾಜರಿದ್ದರು.