ನಾಯಕನಹಟ್ಟಿ:: ನ.28. ಗ್ರಾಮೀಣ ಪ್ರದೇಶದ ಬಡ ಕೂಲಿ ಕಾರ್ಮಿಕರಿಗೆ ಇಂತಹ ಯೋಜನೆಯನ್ನು ಜಾರಿಗೆ ತಂದಿರುವುದು ತುಂಬಾ ಸಂತೋಷದ ವಿಷಯ ಎಂದು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಲಿ ಸದಸ್ಯ ಬಂಡೆ ಕಪಿಲೆ ಓಬಣ್ಣ ಹೇಳಿದ್ದಾರೆ.

ಅವರು ಮಂಗಳವಾರ ಓಬಯ್ಯನಹಟ್ಟಿ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಅಶ್ವಿನಿ ಆಸ್ಪತ್ರೆ ತುಮಕೂರು ಇವರು ಉಚಿತ ಆರೋಗ್ಯ ತಪಾಸಣೆಗೆ ಚಾಲನೆ ನೀಡಿ ಮಾತನಾಡಿದ್ದಾರೆ. ಸರ್ಕಾರ ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮಗಳು ಇನ್ನು ಹೆಚ್ಚಿನದಾಗಿ ಮಾಡಬೇಕು ನಮ್ಮ ಗ್ರಾಮದಲ್ಲಿ ಸುಮಾರು 700 ರಿಂದ 800 ಕಟ್ಟಡ ಕಾರ್ಮಿಕರಿದ್ದಾರೆ ಕಳೆದ ಎರಡು ದಿನದಿಂದ ನಮ್ಮ ಹೋಬಳಿ ವ್ಯಾಪ್ತಿಯಲ್ಲಿ ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಷಣೆ ನಡೆಸುತ್ತಿರುವುದು ಸಾಗರಿಯ ಕಟ್ಟಡ ಕಾರ್ಮಿಕರು ಸರ್ಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕಾರ್ಮಿಕರಲ್ಲಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಓಬಯ್ಯನಹಟ್ಟಿ ಗ್ರಾಮಸ್ಥರಾದ ಮಹದೇವಪ್ಪ, ನಾಗಭೂಷಣ್, ಸಣ್ಣ ಹುಚ್ಚಯ್ಯ, ಪರ್ವತ ಮಲ್ಲಯ್ಯ, ಸಣ್ಣ ಬೋರಯ್ಯ, ಕಾಟಮ್ಮ, ಆನಂದ್, ಡಿ ಎಚ್ ಪರಮೇಶ್ವರಪ್ಪ, ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಹೋಬಳಿ ಅಧ್ಯಕ್ಷ ಚನ್ನಬಸಯ್ಯನಹಟ್ಟಿ ಬಿ ತಿಪ್ಪೇಸ್ವಾಮಿ, ಖಜಾಂಚಿ ರೇಖಲಗೇರೆ ಟಿ. ಮಲ್ಲಿಕಾರ್ಜುನ್ , ಖಾನಹೊಸಳಿಯ ಕಾರ್ಮಿಕ ಮುಖಂಡರಾದ ಬಿ ರಾಘವೇಂದ್ರ ಕಲೀಲ್ ಖಾನ್, ಮತ್ತು ತುಮಕೂರು ಅಶ್ವಿನಿ ಆಸ್ಪತ್ರೆಯ ಸಿಬ್ಬಂದಿಗಳಾದ ಪ್ರತಾಪ್ ಚೇತನ್ ದಿನೇಶ್ ರೋಹಿತ್ ಡಾ. ಸಂಜಯ್, ಅರ್ಚನಾ, ಮಂಜು ,ಸಾವಿತ್ರಿ , ಸೇರಿದಂತೆ ಕಟ್ಟಡ ಕಾರ್ಮಿಕರು ಇದ್ದರು

About The Author

Namma Challakere Local News
error: Content is protected !!