ಚಳ್ಳಕೆರೆ : ಕಳ್ಳರಿಗೆ ಚಳ್ಳೆ ಹಣ್ಣು ತಿನಿಸಿ ಕಳ್ಳರ ಕೈಯಿಂದ ತಪ್ಪಿಸಿಕೊಂಡು ಬಂದ ಯುವಕನ ಯಶೋಗಾಥೆಗೆ ಸಾರ್ವಜನಿಕರು ಪ್ರಶಂಶೆ ವ್ಯಕ್ತಪಡಿಸಿದ್ದಾರೆ.
ಹೌದು ಚಳ್ಳಕೆರೆ ತಾಲೂಕಿನ ಗ್ರಾಮದ ರೋಹಿತ್ ಎಂಬ ಬಾಲಕ ಚಳ್ಳಕರೆ ನಗರದ ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎಂದಿನಂತೆ ಗೋಪನಹಳ್ಳಿ ಗ್ರಾಮದಿಂದ ಮುಂಜಾನೆ ಖಾಸಗಿ ಬಸ್ಸಿಗೆ ಶಾಲೆಗೆ ಹೋಗಿದ್ದಾನೆ.
ನಗರದ ಪಾವಗಡ ರಸ್ತೆಯಲ್ಲಿ ಬಸ್ಸು ಇಳಿದು ಶಾಲೆಗೆ ಹೋಗುವಾಗ ಕಾರಿನಲ್ಲಿ ಬಂದ ಇಬ್ಬರು ಅನಾಮಿಕ ವ್ಯಕ್ತಿಗಳು ನಿಮ್ಮ ಶಾಲೆ ಕಡೆ ಹೋಗುತ್ತಿದ್ದೆವೆ ಅಲ್ಲಿ ಬಿಡುತ್ತೆವೆ ಎಂದು ಕಾರಿನಲ್ಲಿ ಕುರಿಸಿಕೊಂಡು ವಿದ್ಯಾರ್ಥಿಗೆ ನೀರು ಕುಡಿ ಎಂದು ಕುಡಿಸಿದ್ದಾರೆ.
ನೀರು ಕುಡಿದ ವಿದ್ಯಾರ್ಥಿ ಪ್ರಜ್ಞೆ ತಪ್ಪಿದ್ಪಾನೆ, ಕೆಲ ನಂತರ ಕಾರಿನಲ್ಲಿ ಪ್ರಯಾಣ ಮಾಡುವಾಗ ಎಚ್ಚರಗೊಂಡ ವಿದ್ಯಾರ್ಥಿ ಮೂತ್ರ ವಿಸರ್ಜೆನೆ ಮಾಡುತ್ತೇನೆ ಎಂದು ಹೇಳಿ ತಪ್ಪಿಸಿಕೊಂಡು ಲಾರಿ ಮೂಲಕ ದಾವಣಗೆರೆ ಬಡವಾಣೆ ಪೋಲಿಸ್ ಠಾಣೆಗೆ ಹೋಗಿ ಪೋಷಕರಿಗೆ ಕರೆ ಮಾಡಿಸಿದ್ದು ಪೋಷಕರು ದಾವಣಗೆರೆ ಠಾಣೆಗೆ ಹೋಗಿ ಮಗನನ್ನು ಕರೆತಲು ಹೋಗಿದ್ದಾರೆ ಎನ್ನಲಾಗಿದೆ.
ಹೆಚ್ಚಿನ ಮಾಹಿತಿ ತನಿಖೆ ನಂತರವೇ ಹೊರಬಿಳಬೇಕಿದೆ.
ಚಳ್ಳಕೆರೆ ನಗರದಲ್ಲಿ ಕೇವಲ ಮೊಬೈಲ್, ಹಣ, ಹಾಗು ಬೈಕ್ ಕಳ್ಳತನಗಳು ಮಾತ್ರ ಹಾಗುತ್ತಿದ್ದವು ಆದರೆ ಮಕ್ಕಳ ಕಳ್ಳರು ಇದ್ದರೆಂದು ಸಾರ್ವಜನಿಕರು ಭಯಬೀತರಾಗಿದ್ದಾರೆ.
ಇನ್ನೂ ಚಳ್ಳಕೆರೆ ನಗರ ಹೆಮ್ಮರವಾಗಿ ಬೆಳೆದರು ಈಡೀ ನಗರದದಲ್ಲಿ ಒಂದು ಕೂಡ ಸಿಸಿಟಿವಿ ಇಲ್ಲದೆ ಇರುವುದರಿಂದ ಕಳ್ಳರಿಗೆ ವರದಾನವಾಗಿದೆ.
ಇದನ್ನೆ ಬಂಡವಾಳವನ್ನಾಗಿ ಮಾಡಿಕೊಂಡ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.
ಇನ್ನಾದರೂ ಖಾಕಿ ಪಡೆ ಕಳ್ಳರನ್ನು ಮಟ್ಟ ಹಾಕಲು ಯಾವ ತಂತ್ರ ರೂಪಿಸುವುದೋ ಕಾದು ನೋಡಬೇಕಿದೆ.