ಕನ್ನಡ ನಾಡು ನುಡಿ ಸಂರಕ್ಷಣೆಗೆ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ ಕರವೇ ತಾಲೂಕು ಅಧ್ಯಕ್ಷ ಮಂಜುನಾಥ್ ಅಭಿಪ್ರಾಯ

ನಾಯಕನಹಟ್ಟಿ:: ಕನ್ನಡ ನಾಡು ನುಡಿ ಸಂರಕ್ಷಣೆಗೆ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದ್ದು ಪ್ರತಿ ಮನೆಗಳಲ್ಲಿ ಕನ್ನಡ ಭಾಷೆ ರಾರಾಜಿಸಬೇಕು ಎಂದು. ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.

ಅವರು ಸೋಮವಾರ ಪಟ್ಟಣದ ಪಾದಗಟ್ಟೆಯ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾಯಕನಹಟ್ಟಿ ಹೋಬಳಿ ಘಟಕ ಪ್ರವೀಣ್ ಕುಮಾರ್ ಶೆಟ್ಟಿ ಬಣದ ವತಿಯಿಂದ ಎರಡನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ್ದಾರೆ. ಕನ್ನಡ ನಾಡು ನುಡಿ ನೆಲ ಜಲ ಗಡಿ ವಿಚಾರ ಬಂದಾಗ ಕರ್ನಾಟಕ ರಕ್ಷಣಾ ವೇದಿಕೆ ನಾಡಿನ ಜನತೆಯ ಜೊತೆಗೆ ಸದಾ ನಿಲ್ಲುತ್ತದೆ ನಾಡಿನ ಜನತೆಯ ಇತರೆ ಭಾಷೆಗಳನ್ನು ಒಪ್ಪಿಕೊಳ್ಳಬೇಕು ಹೊರತು ಅಪ್ಪಿಕೊಳ್ಳಬಾರದು ನಮ್ಮ ನಾಯಕನಹಟ್ಟಿ ಹೋಬಳಿಯಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಹೊತ್ತನ್ನು ನೀಡಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ನೀರಾವರಿ ಹೋರಾಟ ಸಮಿತಿಯ ಹೋಬಳಿ ಅಧ್ಯಕ್ಷ ಜಿ ಬಿ ಮುದಿಯಪ್ಪ ಮಾತನಾಡಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಿದ್ದಾರೆ ಇಂತಹ ಯುವಕರಿಗೆ ನಮ್ಮ ಹೋಬಳಿಯಲ್ಲಿ ಪ್ರೋತ್ಸಾಹವನ್ನು ನೀಡಬೇಕು ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರ ಪಾತ್ರ ಮಹತ್ವ ಎಂದರು.

ಇನ್ನೂ ಸಭೆಯನ್ನು ಉದ್ದೇಶಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಹೋಬಳಿ ಘಟಕ ಅಧ್ಯಕ್ಷ ಪಿ ಮುತ್ತಯ್ಯ ಮಾತನಾಡಿ ನಮ್ಮ ನಾಯಕನಹಟ್ಟಿ ಹೋಬಳಿಯಲ್ಲಿ ಪ್ರತಿ ಮನೆಮನೆಗಳಲ್ಲಿ ಕನ್ನಡ ಭಾಷೆ ಆಸು ಹೂಕ್ಕಾಗಿ ನೆಲೆಸಬೇಕು ಆದಾಗ ಮಾತ್ರ ಕನ್ನಡ ಭಾಷೆ ಉಳಿಸಲು ಸಾಧ್ಯ ಎರಡನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಆಚರಿಸಲಾಗುತ್ತದೆ ಈ ದಿನ ಹೋಬಳಿಯ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಕನ್ನಡ ವಿಷಯದಲ್ಲಿ 90% ಅಂಕಗಳು ಗಳಿಸಿದ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧನೆ ಸನ್ಮಾನಿಸಲಾಗುತ್ತದೆ ಎಂದರು.

ನಂತರ ಗುಂತುಕೋಲಮ್ಮನಹಳ್ಳಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಎನ್ ತಿಪ್ಪೇಸ್ವಾಮಿ ಮಾತನಾಡಿ ಕನ್ನಡ ಭಾಷೆ ಕರ್ನಾಟಕ ಜನತೆಯ ಮಾತೃಭಾಷೆ ಕನ್ನಡ ಭಾಷೆಗೆ ಸುಮಾರು 2500 ವರ್ಷ ಇತಿಹಾಸವಿದೆ ಸಾಂಸ್ಕೃತಿಕ ಸ್ಥಾನಮಾನವಿದೆ 1957ರ ನವಂಬರ್ ಒಂದರಂದು ಮದ್ರಾಸ್ ಮುಂಬೈ ಹೈದರಾಬಾದ್ ಕನ್ನಡ ಮಾತನಾಡುವ ಪ್ರದೇಶಗಳನ್ನು ಮೀಲಿನಗೊಂಡು ಮೈಸೂರು ರಾಜ್ಯ ಉದಯವಾಯಿತು. ಮುಂದೆ 1973ರ ನವಂಬರ್ 1 ರಂದು ಮೈಸೂರು ಸಂಸ್ಥಾನಕ್ಕೆ ಕರ್ನಾಟಕ ಎಂಬ ಹೆಸರಿನ ನಾಮಕರಣವಾಯಿತು. ಭಾರತದ ಅತುನ್ನತ ಪ್ರಶಸ್ತಿ ಜ್ಞಾನಪೀಠ ಪ್ರಶಸ್ತಿ ಕನ್ನಡದ ಎಂಟು ಜನ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದರು. ಆದ್ದರಿಂದ ಪ್ರತಿಯೊಬ್ಬ ಕನ್ನಡಿಗರು ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಮುಂಚೂಣಿಯಲ್ಲಿ ಇರಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಹೋಬಳಿ ಘಟಕ ಅಧ್ಯಕ್ಷ ಪಿ ಮುತ್ತಯ್ಯ,
ಗೌರವ ಅಧ್ಯಕ್ಷ ವಿಶ್ವನಾಥ್, ನಗರ ಘಟಕ ಅಧ್ಯಕ್ಷ ಬಿ ತಿಪ್ಪೇಸ್ವಾಮಿ, ನಗರ ಘಟಕ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ರಾಂಪುರ ಗ್ರಾಮ ಪಂಚಾಯತಿ ಸದಸ್ಯ ತಿಪ್ಪೇಸ್ವಾಮಿ. ಕಂಪ್ಯೂಟರ್ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್. ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಪಂಚಾಕ್ಷರಿ ಸ್ವಾಮಿ, ಸಾಹಿತಿ ಜಾಗನೂರಹಟ್ಟಿ ಮಂಜುನಾಥ್, ಗುಂತ ಕೋಲಮ್ಮನಹಳ್ಳಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಕೆ ಟಿ ಮಲ್ಲಿಕಾರ್ಜುನ್, ಅಬ್ಬೇನಹಳ್ಳಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ ಶಂಕರಸ್ವಾಮಿ, ಅಬೇರಹಳ್ಳಿ ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಆರ್ ಬಸವರಾಜ್, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಳಗ ಹೋಬಳಿ ಘಟಕದ ಪದಾಧಿಕಾರಿಗಳಾದ.
ಉಪಾಧ್ಯಕ್ಷ ಮಂಜುನಾಥ್, ಮಧು, ಬೋರಯ್ಯ, ಯುವ ಘಟಕ ಅಧ್ಯಕ್ಷ ಎನ್ ಸುರೇಶ್, ಪ್ರಧಾನ ಕಾರ್ಯದರ್ಶಿ ಎಸ್ ಕಾಟಯ್ಯ, ಸಂಘಟನಾ ಕಾರ್ಯದರ್ಶಿ ಶಿವಮೂರ್ತಿ, ಸಹ ಕಾರ್ಯದರ್ಶಿ ಪ್ರಕಾಶ್, ಕಾರ್ಮಿಕ ಘಟಕದ ಅಧ್ಯಕ್ಷ ನವೀನ್, ನಗರ ಉಪಾಧ್ಯಕ್ಷ ಮಲ್ಲಿಕಾರ್ಜುನ್, ತಿಪ್ಪೇಸ್ವಾಮಿ, ಮನೋಜ್, ಹೊನ್ನೂರಪ್ಪ,
ಪಟ್ಟಣದ ಶ್ರೀ ರಾಜಾಹಟ್ಟಿ ಪ್ರೌಢಶಾಲೆಯ ಶಿಕ್ಷಕ ಕೆ ಎಂ ಮಲ್ಲಿಕಾರ್ಜುನ್, ಶಿಕ್ಷಕಿರಾದ ನಲಗೇತನಹಟ್ಟಿ ಪಿ ಒ ಲತಾಮ್ಮ, ಅರುಣಾಕ್ಷಿ ಕವಿತಾ ರೂಪಮ್ಮ ಸೇರಿದಂತೆ ಶಾಲೆಯ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಭಾಗವಹಿಸಿದ್ದರು

Namma Challakere Local News
error: Content is protected !!