ಚಳ್ಳಕೆರೆ : ಹಾಡಹಗಲೆ ಕೊಲೆಗೆ ಯತ್ನ
ಚಳ್ಳಕೆರೆ ನಗರದ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಇಂದು ಸಮಯ 11 ಗಂಟೆ ಸುಮಾರಿಗೆ ಬಸ್ ಇಳಿದು ಬರುವ ಆಶಾ ಎಂಬುವವರಿಗೆ ಗಂಡನಾದ ಕುಮಾರ್ ರವರು ಮಚ್ಚಿನಿಂದ ಅಲ್ಲೆ ನಡೆಸಿದ್ದಾರೆ.
ತಾಲೂಕಿನ ಚೆನ್ನಮ್ಮನಾಗತಿಹಳ್ಳಿ ಗ್ರಾಮದ ಕುಮಾರ್(30) ವರ್ಷ ಎಂಬುವವರು ಕಳೆದ ಮೂರು ವರ್ಷದ ಹಿಂದೆ ವಿವಾಹ ವಾಗಿದ್ದರು ಆದರೆ ಎರಡು ವರ್ಷದ ದಾಂಪತ್ಯ ಜೀವನ ನಡೆಸಿದ ನಂತರ ದಾಂಪತ್ಯದಲ್ಲಿ ಹೊಡಕು ಮೂಡಿ ಹೆಂಡತಿ ಆಶಾ(25) ವಿವಾಹ ವಿಚ್ಚೇದನ ಕ್ಕೆ ಕೋರ್ಟ್ ಮೊರೆ ಹೊಗಿದ್ದರು ಎನ್ನಲಾಗಿದೆ.
ಆದರೆ ಇಂದು ಚಳ್ಳಕೆರೆ ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದ ಸಂಧರ್ಭದಲ್ಲಿ ಮುಂಜಾನೆ ಬಸ್ ನಿಲ್ದಾಣದಲ್ಲಿ ಕಾದು ಕುಳಿತಿದ್ದ ಗಂಡ ಕುಮಾರ್ ನಿಂದ ಈ ಕೃತ್ಯ ನಡೆದಿದೆ.
ಇನ್ನೂ ಮಚ್ಚಿನಿಂದ ಆಶಾ ತಲೆಗೆ ಹಾಗೂ ಕೈಗೆ ಘಾಯಗಳಾಗಿದ್ದು ಸಾವು ಬದುಕಿನ ಮಂದ್ಯೆ ಹೋರಾಟ ನಡೆಸುತ್ತಿದ್ದಾಳೆ, ಹೆಚ್ಚಿನ ಚಿಕಿತ್ಸೆಗೆ ಚಿತ್ರದುರ್ಗ ಜಿಲ್ಲಾಆಸ್ವತ್ರೆಗೆ ದಾಖಲುಮಾಡಿದೆ.
ಇನ್ನೂ ಆರೋಪಿ ಗಂಡನನ್ನು ಚಳ್ಳಕೆರೆ ಪೋಲಿಸ್ ರವರು ಕ್ಷಣ ಮಾತ್ರದಲ್ಲಿ ಪತ್ತೆ ಹಚ್ಚಿ ತಮ್ಮ ವಶಕ್ಕೆ ಪಡೆದಿದ್ದಾರೆ.
ಇನ್ನೂ ಹೆಚ್ಚಿನ ಮಾಹಿತಿ ತನಿಖೆನಂತರ ಹೊರಬಿಳಲಿದೆ.
ಇನ್ನೂ ನಗರದಲ್ಲಿ ಬೆಳಂ ಬೆಳಿಗ್ಗೆ ಈ ಘಟನೆಯಿಂದ ಭಯ ಭೀತರಾದ ಸಾರ್ವಜನಿಕರು ನೂರಾರು ಜನರು ಘಟನೆ ಸ್ಥಳದಲ್ಲಿ ನೆರೆದಿದ್ದರು.
ಸ್ಥಳಕ್ಕೆ ಡಿವೈಎಸ್ ಪಿ ರಾಜಣ್ಣ, ಸಿಪಿಐ ಕೆ.ಸಮೀವುಲ್ಲಾ, ದೇಸಾಯಿ, ಪಿಎಸ್ಐ ಶಿವರಾಜ್, ಹಾಗೂ ಸಿಬ್ಬಂದಿ ಸ್ಥಳದಲ್ಲಿ ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ