ಚಳ್ಳಕೆರೆ : ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೈತರ ಹಾಕ್ಕೋತಾಯಗಳಾದ ಬೆಳೆವಿಮೆ ಪರಿಹಾರ ಮತ್ತು ಬೆಳೆ ನಷ್ಟ ಪರಿಹಾರ ರೈತರಿಗೆ ಕೈ ಸೇರಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರಾದ ರೆಡ್ಡಿಹಳ್ಳಿ ವೀರಣ್ಣ ಒತ್ತಾಯಿಸಿದರು.
ನಗರದ ತಾಲೂಕು ಕಛೇರಿಯಲ್ಲಿ ನೂರಾರು ರೈತರು ತಮ್ಮ ಹಕ್ಕೊತ್ತಾಯಗಳಿಗಾಗಿ ಘೊಷಣೆಗಳನ್ನು ಕೂಗಿ ಪ್ರತಿಭಟಿಸಿ ಮನವಿಯನ್ನು ತಹಶೀಲ್ದಾರ್ ರೇಹಾನ್ ಪಾಷರವರಿಗೆ ಸಲ್ಲಿಸಿದರು.
ಇನ್ನೂ ಚಳ್ಳಕೆರೆ ತಾಲೂಕು ಸುಮಾರು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿದ್ದು ಕಳೆದ ವರ್ಷ ಅತಿವೃಷ್ಟಿ ಅನಾವೃಷ್ಟಿಯಿಂದ ರೈತರಿಗೆ ತುಂಬಲಾರದ ನಷ್ಟವಾಗಿದೆ, ರೈತರಿಗೆ ಬೆಳೆವಿಮೆ ಬೆಳೆ ಪರಿಹಾರ ಕುಂಟಿತಗೊಳಿಸಿ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ
ಈ ಬಾರಿ ನಮ್ಮ ಜಿಲ್ಲೆಗೆ ಬರಗಾಲ ಘೋಷಣೆಯಾಗಿದೆ ಆದ್ದರಿಂದ ರೈತರ ಸಾಲ ಮನ್ನಾ ಮಾಡಬೇಕು ರೈತರ ಕೃಷಿ ಭೂಮಿಗೆ ತ್ರೀ ಫೇಸ್ ವಿದ್ಯುತ್ತನ್ನು ಎಂಟು ಗಂಟೆಗಳ ಕಾಲ ಉಚಿತವಾಗಿ ಕೊಡಬೇಕು, ಅಲ್ಲದೆ ಬರಗಾಲ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ನೀರು ಹಾಗೂ ಮೇವಿನ ಸೌಕರ್ಯ ಮಾಡಿಕೊಡಬೇಕು ಹಾಗೂ ಹೊಸದಾಗಿ ವಿದ್ಯುತ್ ಸಂಪರ್ಕ ಹೊಂದುವ ರೈತರಿಗೆ ಹಳೆಯ ರೀತಿಯ ಕ್ರಮ ಸಕ್ರಮದ ಅಡಿಯಲ್ಲಿ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂದರು.
ರಾಜ್ಯ ಸರ್ಕಾರ ರೈತರ ವಿರೋಧಿ ಕಾಯ್ದೆಗಳನ್ನು ರದ್ದು ಮಾಡಿ, ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಬರಗಾಲ ಇರುವುದರಿಂದ ಬೆಳೆ ನಷ್ಟ ಪರಿಹಾರ, ಹಾಗೂ ಬೆಳೆ ವಿಮೆ ಪರಿಹಾರ ಎಲ್ಲಾ ರೈತರಿಗೆ ಸಂಪೂರ್ಣ ಸಾಲಮನ್ನಾ ಹಾಗೂ ಜಾನುವಾರುಗಳಿಗೆ ಮೇವು ನೀರು ರೈತರಿಗೆ ಒದಗಿಸಿಕೊಡಬೇಕು ಎಂದು ತಾಲೂಕು ಉಪಾಧ್ಯಕ್ಷ ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು
ಕೃಷಿಕ ಈ ದೇಶದ ಸಂಪತ್ತು ಈ ಸಂಪತ್ತನ್ನು ಉಳಿಸಲು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಮುಂದಾಗಬೇಕಾಗಿದೆ, ಅಲ್ಲದೆ ಬಗರ್ ಹುಕುಂ ಸಾಗುವಳಿ ಮಾಡಿರುವ ಎಲ್ಲಾ ರೈತರಿಗೆ ಹಕ್ಕು ಪತ್ರ ವಿತರಿಸಬೇಕು ಎಂದು ಆಕ್ರೋಶ ಭರಿತರಾಗಿ ಮಾತನಾಡಿದರು,,,
ಇನ್ನು ಈ ಪ್ರತಿಭಟನಾ ವೇಳೆಯಲ್ಲಿ ತಾಲೂಕು ಉಪಾಧ್ಯಕ್ಷ ರಾಜಣ್ಣ, ಜಿಲ್ಲಾ ಉಪಾಧ್ಯಕ್ಷ ಹಿರೇಹಳ್ಳಿ ಯರಿಸ್ವಾಮಿ , ಸಹಕಾರಿದರ್ಶಿ ತಿಪ್ಪಾರೆಡ್ಡಿ ಮಲ್ಲಹಳ್ಳಿ, ಸದಸ್ಯರಾದ ರಾಜಣ್ಣ ,ಕೆಬಿ ಪಾಲಣ್ಣ, ಶಿವಣ್ಣ, ರತ್ನಮ್ಮ, ಜಯಮ್ಮ ,ಸುರೇಶ್, ಎಸ್ ಪುಟ್ಟಸ್ವಾಮಿ, ತಿಪ್ಪೇಸ್ವಾಮಿ, ಚಂದ್ರ ಶೇಖರಪ್ಪ, ಸೇರಿದಂತೆ ಅನೇಕ ರೈತ ಸಂಘದ ಮುಖಂಡರು ಹಾಜರಿದ್ದರು