ಕರ್ನಾಟಕ ರಾಜ್ಯದಾದ್ಯಂತ ಕಾಡುಗೊಲ್ಲರು ವಾಸವಿರುವ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ನ 20 ರ ಸೋಮವಾರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಚಳ್ಳಕೆರೆ ತಾಲೂಕು ಕಾಡುಗೊಲ್ಲರ ಸಂಘದ ಅಧ್ಯಕ್ಷ ಬೂದಿಹಳ್ಳಿರಾಜಣ್ಣ ಹೇಳಿದರು
ತಾಲೂಕು ಮತ್ತು ಪರಶುರಾಮಪುರ ಹೋಬಳಿ ವ್ಯಾಪ್ತಿಯ ಕಾಡುಗೊಲ್ಲರ ಹಟ್ಟಿಗಳಲ್ಲಿ ಶುಕ್ರವಾರ ನ 20 ರಂದು ಹಮ್ಮಿಕೊಂಡಿರುವ ಶಾಂತಿಯುತ ಪ್ರತಿಭಟನೆಯ ಕರಪತ್ರಗಳನ್ನು ಹಂಚಿ ಪ್ರಚಾರ ಕೈಗೊಂಡ ವೇಳೆ ಮಾತನಾಡಿದರು
ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಕೂಡಲೇ ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸಬೇಕು ಎಲ್ಲಾ ತಾಲೂಕು ತಹಸೀಲ್ದಾರರು ಕಾಡುಗೊಲ್ಲರಿಗೆ ಜಾತಿ ಪ್ರಮಾಣ ಪತ್ರದಲ್ಲಿ ಕಾಡುಗೊಲ್ಲ ಎಂದು ಸೀರಿಸಿ ಪ್ರಮಾಣ ಪತ್ರ ನೀಡಬೇಕು ಸರ್ಕಾರ ಕಾಡುಗೊಲ್ಲರು ವಾಸವಿರುವ ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಬೇಕು ಪಜಾತಿ ಪಪಂಗಡದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೀಡುವಂತೆ ಉಚಿತ ವಿದ್ಯಾರ್ಥಿ ನಿಲಯಗಳನ್ನು ತೆರೆಯಬೇಕು ಎಲ್ಲಾ ವಿದ್ಯಾರ್ಥಿನಿಲಯಗಳಲ್ಲಿ ಕಾಡುಗೊಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಶಾಂತಿಯುತ ಪ್ರತಿಭಟನೆಯನ್ನು ಆಯಾ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳ ಕಚೇರಿಯ ಎದುರು ಪ್ರತಿಭಟನೆ ಹಮ್ಮಿಕೊಂಡು ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಇಷ್ಟಕ್ಕೂ ಸರ್ಕಾರ ಸ್ಪಂದಿಸದೇ ಹೋದರೆ ರಾಜದಾನಿಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು
ಕಾಡುಗೊಲ್ಲರ ಮುಖಂಡ ಈ ಮಂಜುನಾಥ ಮಾತನಾಡಿ ಸರ್ಕಾರ ನಾಯಕ ಸಮುದಾಯದವರ ಆಚಾರ ವಿಚಾರ, ಜೀವನ ವಿದಾನವನ್ನೇ ಹೋಲುವ ಸಾಮ್ಯತೆ ಇರುವ ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸಲು ಈ ಹಿಂದೆ ಮಾನ್ಯ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು ಈಗ ಅವರೇ ಮುಖ್ಯಮತ್ರಿ ಇರುವುದರಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು
ಇದೇ ವೇಳೆ ಪಿಆರ್‌ಪುರ ಹೋಬಳಿಯ ಕರೀಕೆರೆ, ಉಪ್ಪಾರಹಟ್ಟಿ, ಮೀರಾಸಾಬಿಹಳ್ಳಿ, ಪಿಆರ್‌ಪುರ, ಭರಮಸಾಗರ, ಬೊಮ್ಮಸಂದ್ರ ಮತ್ತಿತರೆ ಹಳ್ಳಿಗಳ ಗೊಲ್ಲರಹಟ್ಟಿಗೆ ತಂಡಗಳಲ್ಲಿ ಭೇಟಿ ನೀಡಿ ಸಮುದಾಯದ ಜನರಿಗೆ ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸಿದರು
ಸಂದರ್ಭದಲ್ಲಿ ಕಾಡುಗೊಲ್ಲರ ಮುಖಂಡರಾದ ಬೂದಿಹಳ್ಳಿ ರಾಜಣ್ಣ, ತಿಪ್ಪೇಸ್ವಾಮಿ, ಮಹೇಶ, ವೀರೇಶ, ಸುರೇಶ, ಈ ಮಂಜುನಾಥ, ಮೂರ್ತಿ, ಚಿತ್ತಪ್ಪ, ತಿಮ್ಮಣ್ಣ, ಗೋವಿಂದರಾಜು, ಭಾಗ್ಯಮ್ಮ, ಸಿರಿಯಕ್ಕ, ಈರಕ್ಕ ಲಕ್ಷಿö್ಮÃದೇವಿ ವಿವಿಧ ಗ್ರಾಮಗಳ ಗೊಲ್ಲ ಸಮುದಾಯದ ಯುವಕರು ಗ್ರಾಮಸ್ಥರು ಇದ್ದರು
(ಪೋಟೋ ಪಿಆರ್‌ಪುರ ಗೊಲ್ಲ 18)
ಪರಶುರಾಮಪುರ ಸಮೀಪದ ಮೀರಾಸಾಬಿಹಳ್ಳಿ ವಿಡುಪನಕುಂಟೆ ಗ್ರಾಮಗಳಲ್ಲಿ ಶುಕ್ರವಾರ ಚಳ್ಳಕೆರೆ ತಾಲೂಕು ಕಾಡುಗೊಲ್ಲರ ಸಂಘದ ಪದಾಧಿಕಾರಿಗಳು ಕಾಡುಗೊಲ್ಲರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಯೋಜಿಸಿರುವ ಶಾಂತಿಯುತ ಪ್ರತಿಭಟನೆಯ ಕುರಿತು ಸಮುದಾಯದವರಿಗೆ ಅರಿವು ಮೂಡಿಸಿದರು ಕಾಡುಗೊಲ್ಲರ ಮುಖಂಡರಾದ ಬೂದಿಹಳ್ಳಿ ರಾಜಣ್ಣ, ತಿಪ್ಪೇಸ್ವಾಮಿ, ಮಹೇಶ, ವೀರೇಶ, ಸುರೇಶ, ಈ ಮಂಜುನಾಥ, ಮೂರ್ತಿ, ಚಿತ್ತಪ್ಪ, ತಿಮ್ಮಣ್ಣ, ಗೋವಿಂದರಾಜು, ಭಾಗ್ಯಮ್ಮ, ಸಿರಿಯಕ್ಕ, ಈರಕ್ಕ ಲಕ್ಷಿö್ಮÃದೇವಿ ವಿವಿಧ ಗ್ರಾಮಗಳ ಗೊಲ್ಲ ಸಮುದಾಯದ ಯುವಕರು ಗ್ರಾಮಸ್ಥರು ಇದ್ದರು