ಚಳ್ಳಕೆರೆ ನಗರದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೆಎಸ್.ನವೀನ್ ಮಾತನಾಡಿ, ಹಾಲು, ಉಣ್ಣೆ, ಬ್ಯಾಂಕ್, ಸೇರಿದಂತೆ ಎಲ್ಲಾ ವಲಯಗಳಲ್ಲಿ ಸಹಕಾರ ಕ್ಷೇತ್ರ ತನ್ನ ಚಾಪನ್ನು ಮೂಡಿಸುತ್ತಾ ಬರುತ್ತಿದೆ ಸ್ವತಂತ್ರ ಬಂದ ನಂತರ ಇಷ್ಟು ದೊಡ್ಡ ಮಟ್ಟಕ್ಕೆ ಸಹಕಾರಿ ಕ್ಷೇತ್ರ ಬೆಳೆಯುತ್ತಾ ಬಂದಿದ್ದರು ವ್ಯವಸ್ಥಿತವಾದ ರೂಪ ಕೊಡುವಲ್ಲಿ ಹಿಂದಿನ ಸರ್ಕಾರಗಳು ವಿಫಲವಾಗಿದ್ದವು. ಸಹಕಾರ ಕ್ಷೇತ್ರಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಪ್ರಥಮ ಬಾರಿಗೆ ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಸ್ಥಾಪಿಸಿದೆ ಅಲ್ಲದೆ ಸಹಕಾರ ಕ್ಷೇತ್ರದ ಅನುಕೂಲಕ್ಕಾಗಿ ಹಲವಾರು ಸುಧಾರಣ ಕಾಯ್ದೆಗಳನ್ನು ಜಾರಿಗೆ ತಂದು ಈ ಕ್ಷೇತ್ರಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದರು.

ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಜಿಪಿ ಯಶವಂತ ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ಬಯಲು ಸೀಮೆಯಲ್ಲಿ ಇಂತಹ ಒಂದು ಸಹಕಾರ ಸಂಘ ಉತ್ತಮವಾಗಿ ನಡೆಯಲು ಸಂಘದ ಅಧ್ಯಕ್ಷರು ಕಾರ್ಯದರ್ಶಿಗಳು ತಮ್ಮ ವೃತ್ತಿಪರತೆಯನ್ನು ತೋರಿದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಆದ್ದರಿಂದ ಗಡಿ ಭಾಗದ ಈ ಭಾಗದಲ್ಲಿ ಸಹಕಾರಿ ಸಂಸ್ಥೆಗಳು ಗಣಕಯಂತ್ರದ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಿದಾಗ ಜನರಲ್ಲಿ ನಂಬಿಕೆ ಉಂಟಾಗಿ ಈ ಕ್ಷೇತ್ರದ ಬಗ್ಗೆ ಜ್ಞಾನ ಬೆಳೆಸಿಕೊಳ್ಳಲು ಮುಂದಾಗುತ್ತಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಮಾತೃಶ್ರೀ ಎನ್ ಮಂಜುನಾಥ್, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಸಿ.ವೀರಭದ್ರ ಬಾಬು, ಆರ್ ರಾಮರೆಡ್ಡಿ, ವಿನೋದಸ್ವಾಮಿ, ಆರ್.ಮಲ್ಲೇಶಪ್ಪ, ಮಲ್ಲಿಕಾರ್ಜುನಪ್ಪ, ಆದಿ ಭಾಸ್ಕರಯ್ಯ ಶ್ರೇಷ್ಠಿ, ಜಿಂಕಲ್ ಬಸವರಾಜ್, ಶರಣಪ್ಪ, ಜಯಪ್ರಕಾಶ್, ಬಶೀರ್ ಖಾನ್ ದೀಪಕ್ ಸತೀಶ್ ರೆಡ್ಡಿ ನಯಾಜ್ ಎಸ್ ಜೆ ಕೃಷ್ಣಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Namma Challakere Local News

You missed

error: Content is protected !!