ರಾಮಾಂಜನೇಯ ಕೆ.ಚನ್ನಗಾನಹಳ್ಳಿ
ಚಳ್ಳಕೆರೆ : ಕುಡಿಯುವ ನೀರಿಗಾಗಿ ದಿನಬೆಳಗಾದರೆ ಅಲೆಯುವ ನಗರದ ಜನತೆಗೆ ಮುಕ್ತಿ ಸಿಕ್ಕಂತಾಗಿಲ್ಲ. ಹೌದು ಕಳೆದ ಒಂದು ವರ್ಷದಿಂದ ನಗರದ ವಿಠಲ ನಗರದ ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ವಾರ್ಡ್ ಜನತೆ ದಿನ ಬೆಳಗಾದರೆ ದಿಂಬಿಗೆ ಹಿಡಿದು ನಗರ ಪ್ರದಕ್ಷಣೆ ಹಾಕುತ್ತಿದ್ದಾರೆ ಇನ್ನೂ ನಗರದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಸ್ಥಾಪಿಸಿದ ಘಟಕ ನಿರ್ವಾಹಣೆ ಇಲ್ಲದೆ ಪಾಳು ಬಿದ್ದು ಮಿಷನರಿಗಳು ಕಳ್ಳತನವಾಗುತ್ತಿವೆ.
ಇನ್ನೂ ಬಯಲು ಆಂಜನೇಯ ಸ್ವಾಮಿ ದೇವಾಸ್ಥಾನ ಸಮೀಪ ಇರುವ ಶುದ್ದ ಕುಡಿಯುವ ನೀರಿನ ಘಟಕ, ಶಾಂತಿ ನಗರದಲ್ಲಿ ಇರುವ ಘಟಕಗಳು ದುರಸ್ತಿಯಲ್ಲಿವೆ ಎಂಬುದು ಕಂಡು ಬಂದಿದೆ.
ಸ್ಥಳಿಯ ನಗರಸಭೆ ಅಧಿಕಾರಿಗಳಿಗೆ ಮಾಹಿತಿ ಇದ್ದರು ಕೂಡ ಮೌನ ವಹಿಸಿರುವುದು ಇವರ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಚಳ್ಳಕೆರೆ ನಗರದಲ್ಲಿ ಒಟ್ಟಾರೆ 37 ಶುಧ್ದ ನೀರಿನ ಘಟನಗಳನ್ನು ಸ್ಥಾಪಿಸಿದೆ ಆದರೆ ನಿರ್ವಹಣೆ ಇಲ್ಲದೆ ದುರಸ್ತಿಗೆ ತಲುಪಿವೆ ಇನ್ನೂ ಹಲವು ನೆಪ ಮಾತ್ರಕ್ಕೆ ಕಾರ್ಯನಿರ್ವಹಿಸುತ್ತಿವೆ,
ನಗರದ ಜನತೆಗೆ ಶುಧ್ಧಕುಡಿಯುವ ನೀರು ಕೊಡುವ ಹಿತ ದೃಷ್ಠಯಿಂದ ಸರಕಾರ ನಗರಸಭೆಗೆ ವ್ಯಾಪ್ತಿಯಲ್ಲಿ ಸುಮಾರು 37ಶುಧ್ದ ಕುಡಿಯುವ ನೀರಿನ ಘಟಗಳನ್ನು ಸ್ಥಾಪನೆ ಮಾಡಲಾಗಿದೆ ಆದರೆ ಸರಿಯಾದ ನಿರ್ವಹಣೆ ನಿಲ್ಲದೆ ಹಳ್ಳ ಹಿಡಿದಿವೆ.
ಕಳಪೆ ಗುಣ ಮಟ್ಟದ ಶುಧ್ದ ಕುಡಿಯುವ ನೀರು :
ನಗರದಲ್ಲಿ ಸುಮಾರು 37ಶುಧ್ದ ಕುಡಿಯುವ ನೀರಿನ ಘಟಕಗಳಲಿ ಕೇವಲ 20 ಘಟಕಗಳಲ್ಲಿ ಮಾತ್ರ ಗುಣ ಮಟ್ಟದ ನೀರು ಬರುವುದು ಬಿಟ್ಟರೆ ಇತರೆ ಹಲವು ಘಟಕಗಳಲ್ಲಿ ಕಳಪೆ ಗುಣಮಟ್ಟದ ನೀರು ಸರಬಾರು ಹಾಗುತ್ತಿದೆ ಎಂಬುದು ಸಾರ್ವಜನಿಕರ ಮಾತಾಗಿದೆ, ಇನ್ನೂ ಇದರ ಬಗ್ಗೆ ನಗರಸಭೆ ಅಧಿಕಾರಿಗಳ ದಿವ್ಯ ನಿಲ್ಯಕ್ಷö್ಯವೂ ಕೂಡ ಇದೆ ಎಂಬುದು ಕಂಡು ಬರುತ್ತಿದೆ, ಇನ್ನೂ ಶುದ್ದ ಕುಡಿಯುವ ನೀರಿನ ಘಟಗಳಲ್ಲಿ ಸರಿಯಾದ ಡ್ರಮ್ಕ್ಲಿನಿಂಗ್, ಮೆಮರಿನ್, ಇತರೆ ಮಿಷನರಿಗಳನ್ನು ಕಾಲ ಕಾಲಕ್ಕೆ ಬದಲಾಯಿಸದೆ ಕೇವಲ ಇಪ್ಪತ್ತು ಲೀಟರ್ ನೀರಿಗೆ 5 ರೂಪಾಯಿ ವಸೂಲಿ ದಂದೆಗೆ ಹಿಳಿಯುವಂತೆ ನಗರಸಭೆ ಅಧಿಕಾರಿಗಳೆ ಟೆಂಡರ್ದಾರರಿಗೆ ಕುಮ್ಮಕ್ಕು ನೀಡಿದಂತೆ ಹಾಗಿದೆ ಎಂಬುದು ಸಾರ್ವಜನಿಕರ ಮಾತಾಗಿದೆ.
ನೆಪ ಮಾತ್ರಕ್ಕೆ ಟೆಂಡರ್ :
ಕಳೆದ ತಿಂಗಳಲ್ಲಿ ನಗರಸಭೆಯಿಂದ ಅಧಿಕೃತವಾಗಿ ಹೊಸದಾಗಿ ಟೆಂಡರ್ ಪಡೆದ ಕ್ವೆಸ್ಟ್ ಮಿನರಲ್ ಕಂಪನಿಯ ಗುತ್ತಿಗೆದಾರರು ಸುಮಾರು 37 ಶುಧ್ದ ಕುಡಿಯುವ ನೀರಿನ ಘಟಕಗಳಲ್ಲಿ ಕೇವಲ ಬೆಳಣಿಕೆಯಷ್ಟು ಮಾತ್ರ ಗುತ್ತಿಗೆ ಪಡೆದು ಉಳಿದ ಘಟಕಗಳನ್ನು ಕೈಬಿಟ್ಟಿದ್ದಾರೆ ಇನ್ನೂ ಪರೀಶೀಲಿಸಿದರೆ ಘಟಕಗಳು ತುಂಬಾ ದುರಸ್ತಿಯಲ್ಲಿ ಇವೆ ಇವುಗಳನ್ನು ರೀಪೆರಿ ಮಾಡಿಸಿಕೊಟ್ಟರೆ ಮಾತ್ರ ನಿರ್ವಹಣೆ ಮಾಡುತ್ತೆವೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಇನ್ನೂ ನೂತನವಾಗಿ ಟೆಂಡರ್ ಪಡೆದ ಗುತ್ತಿಗೆದಾರರು ಘಟಕದ ಸ್ಥಳದಲ್ಲಿ ಇರದೆ ಕೇವಲ ನೆಪ ಮಾತ್ರಕ್ಕೆ ಟೆಂಡರ್ ಪಡೆದು ಸೇವೆ ನೀಡುತ್ತೆವೆ ಎಂದು ಆದೇಶದಲ್ಲಿ ತಿಳಿಸಿ ಘಟಕಕ್ಕೆ ಬೀಗ ಜಡಿದುಕೊಂಡು ಹೋಗುತ್ತಾರೆ.
ಕುಡಿಯುವ ನೀರಿಗೆ ಎಟಿಎಂ ಕಾರ್ಡ್ ನೀಡಲು ಆಗ್ರಹ :
ದಿನ ಬೆಳಗಾದರೆ ಕುಡಿಯುವ ನೀರಿಗಾಗಿ ಆಗಮಿಸುವ ನಗರದ ಜನತೆಗೆ 5ರೂಪಾಯಿ ಕಾಯಿನ್ ಚಿಂತೆ ಹೌದು ಈ ಸಮಸ್ಯೆಯನ್ನು ತಪ್ಪಿಸಲು ಆಧುನಿಕತೆಯ ತಾಂತ್ರಿಕತೆಯುಳ್ಳ ಎಟಿಎಂ. ಕಾರ್ಡ್ ಸ್ವಪ್ ಕಾರ್ಡ್ ನೀಡುವಂತೆ ಜನಗರದ ಜನತೆ ಒತ್ತಾಯಿಸಿದ್ದಾರೆ.
ಹೇಳಿಕೆ : 1.
ಸ್ಥಳಿಯ ಶಾಸಕ ಟಿ.ರಘುಮೂರ್ತಿ ಪ್ರತಿ ಬಾರಿಯೂ ಜನ ಸಂಪರ್ಕ ಸಭೆಗಳಲ್ಲಿ ಮಾತನಾಡುತ್ತಾ ಸಾರ್ವಜನಿಕರಿಗೆ ಮೊದಲು ಆಧ್ಯತೆಯಾಗಿ ಕುಡಿಯುವ ನೀರು ಕೊಡಿ, ದುರಸ್ತಿಯಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಅಭಿವೃದ್ದಿ ಪಡಿಸಿ ನಗರದ ಜನತೆಗೆ ಮೊದಲ ಕಾರ್ಯವಾಗಿ ಕುಡಿಯಲು ನೀರು ಕೊಡಿ ಎಂದು ಸಭೆಯ ಪ್ರಮುಖ ಅಜೆಂಡವಾಗಿ ಹೇಳುತ್ತಾರೆ ಆದರೆ ಇದುವರೆಗೆ ಯಾವುದೇ ಅಧಿಕಾರಿಗಳೂ ಇದರ ಬಗ್ಗೆ ಗಮನಹರಿಸಿಲ್ಲ ಇನ್ನೂ ನೆಪ ಮಾತ್ರಕ್ಕೆ ಕೆಲಸಗಳು ಮಾತ್ರ ಹಾಗುತ್ತಿವೆ ನಿರೀಕ್ಷೆ ಮಟ್ಟದಲ್ಲಿ ನಗರಸಭೆಯಲ್ಲಿ ಸಫಲತೆ ಕಂಡಿಲ್ಲ.
–ತಿಪ್ಪೆಸ್ವಾಮಿ ಸ್ಥಳಿಯ ನಿವಾಸಿ
ಹೇಳಿಕೆ : 2.
ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 37ಶುದ್ದ ಕುಡಿಯುವ ನೀರಿನ ಘಟಕಗಳನ್ನು ಗುತ್ತಿಗೆದಾರರಿಗೆ ಟೆಂಟರ್ ನೀಡಿದೆ ಅವರೆ ನಿರ್ವಹಣೆ ಮಾಡುತ್ತಾರೆ ಕೆಲವು ತುಂಬಾ ದುರಸ್ತಿಯಲ್ಲಿವೆ ರಿಪೇರಿ ಮಾಡಿಸಿ ಇನ್ನೂ ಹದಿನೈದು ದಿನಗಳೊಳಗೆ ಸಾರ್ವಜನಿಕರಿಗೆ ಕುಡಿಯುವ ನೀರು ದೊರೆಯುಂತೆ ಮಾಡುತ್ತೆವೆ ಒಟ್ಟಾರೆ 31 ವಾರ್ಡ್ಗಳ 37 ಶುಧ್ದ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುವಂತೆ ಮಾಡಲಾಗುವುದು.
—ವಿನಯ್ ನಗರಸಭೆ ಇಂಜಿನಿಯಾರ್