ಚಳ್ಳಕೆರೆ : ಗಡಿ ಭಾಗದ ಬಯಲು ಸೀಮೆಯಲ್ಲಿ ಕನ್ನಡ ಕಲರವ ಮೊಳಗಿಸಲು ಸಾಹಿತ್ಯ ಆಸಕ್ತಿಗಳು ಕಳೆದ ಹಲವು ದಶಕಗಳಿಂದ ಈ ನೆಲದಲ್ಲಿ ಕನ್ನಡತನವನ್ನು ಗಟ್ಟಿಗೊಳಿಸಿದ್ದಾರೆ ಎಂದು ತಾಲೂಕು ಕಸಾಪ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಆಚರಣೆ ಅಂಗವಾಗಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು. ಬುಡಕಟ್ಟು ಸಂಸ್ಕೃತಿಯ ಕಾಶಿ ಎಂದರೇ ಅದು ಚಳ್ಳಕೆರೆ ಕ್ಷೇತ್ರ, ಗ್ರಾಮೀಣ ಸಾಹಿತ್ಯ ಪರಿಷತ್ ಕಟ್ಟುವ ಮೂಲಕ ಈಡೀ ಗಡಿ ಭಾಗದಲ್ಲಿ ಸಾಹಿತ್ಯ ಚಿಲುಮೆ ಸಾರಿದ ತಿಪ್ಪಣ್ಣ ಮರಿಕುಂಟೆರವರ ಸಾಹಿತ್ಯದ ಗೀಳು ಇಂದು ಹೆಮ್ಮರವಾಗಿದೆ, ಅದರಂತೆ ಪ್ರತಿ ವರ್ಷದಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬೇಕು ಕನ್ನಡ ಮನಸ್ಸುಗಳನ್ನು ಒಗ್ಗೂಡಿಸಬೇಕು ಎಂಬ ಅಭಿಲಾಷೆ ಮೆರೆಗೆ ಇದೇ ನವೆಂಬರ್ 25 ರಂದು ನಗರದ ಬಿಎಂಜಿಎಚ್‌ಎಸ್ ಪ್ರೌಢಶಾಲಾ ಆವರಣದಲ್ಲಿ ನಡೆಸಲು ತಿರ್ಮಾನಿಸಲಾಗಿದೆ, ಇನ್ನೂ ಕಾರ್ಯಕ್ರಮದಲ್ಲಿ ಮಕ್ಕಳ ಪ್ರಬಂಧ ಸ್ಪರ್ಧೆ, ಭಾಷಣ, ನೃತ್ಯ, ಕಾರ್ಯಕ್ರಮಗಳು ಜೊತೆಗೆ, ಕನ್ನಡ ನಾಡು ನುಡಿ, ಹಾಗೂ ಸಂಸ್ಕೃತಿಯ ಬಗ್ಗೆ ವಿಷಯ ಮಂಡನೆಯಾಗುತ್ತಿದೆ,
ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹಾಗೂ ಜನಪ್ರತಿನಿಧಿಗಳೊಂದಿಗೆ ತಾಲೂಕು ಮಟ್ಟದ ಅಧಿಕಾರಿಗಳು ಶಿಷ್ಠಾಚಾರದೊಂದಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುತ್ತದೆ, ಇನ್ನೂ ಎಸ್‌ಎಸ್‌ಎಲ್‌ಸಿಯಲ್ಲಿ 125ಕ್ಕೆ 125ಅಂಕ ಪಡೆದ ಶ್ರೇಷ್ಠ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ, ಅಭಿನಂದನಾ ಸಮಾರಂಭ ಆಯೋಜಿಸಲಾಗಿರುತ್ತದೆ ಎಂದರು.
ಈದೇ ಸಂಧರ್ಭದಲ್ಲಿ ಕಸಪಾ ಪದಾಧಿಕಾರಿ ಚಿತ್ತಯ್ಯ, ಮೃಂತ್ಯುAಜಯ್, ಜಗದೀಶ್, ಇತರರು ಪಾಲ್ಗೊಂಡಿದ್ದರು.