ನ 18 ರಂದು ನಾಯಕನಹಟ್ಟಿ ಮತ್ತು ನೇರಲಗುಂಟೆ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯ
ನಾಯಕನಹಟ್ಟಿ:: ಹೋಬಳಿ ವ್ಯಕ್ತಿಗೆ ಬರುವ ನಾಯಕನಹಟ್ಟಿ ಹಾಗೂ ನೇರಲಗುಂಟೆ 66/11 ಕೆ ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ಮೂರನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಆಗುವುದರಿಂದ ನಾಯಕನಹಟ್ಟಿ ಮತ್ತು ನೇರಲಗುಂಟೆ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ . ವಿದ್ಯುತ್ ಸರಬರಾಜು ಅಡೆಚಣೆಯಾಗುವ ಸ್ಥಳಗಳು. ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ನೆಲಗೇತನಟ್ಟಿ ಗೌಡಗೆರೆ ಮಲ್ಲೂರಹಳ್ಳಿ ನೇರಲಗುಂಟೆ ಎನ್ ದೇವರಹಳ್ಳಿ, ಎನ್ ಮಹದೇವಪುರ, ತಿಮ್ಮಪ್ಪಯ್ಯನಹಳ್ಳಿ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳು
ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜು ಆಗುವುದಿಲ್ಲ ಆದ್ದರಿಂದ ಗ್ರಾಹಕರು ಹಾಗೂ ರೈತ ಬಾಂಧವರು ಸಹಕರಿಸಬೇಕೆಂದು ಬೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎನ್ ಜಿ ಮಮತಾ ಮತ್ತು ನಾಯಕನಹಟ್ಟಿ ಬೆಸ್ಕಾಂ ಶಾಖಾಧಿಕಾರಿ ಎನ್ ಬಿ ಬೋರಣ್ಣ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.