ಚಳ್ಳಕೆರೆ : ರಾಜ್ಯದಲ್ಲಿ ಶಿಕ್ಷಣ ಇಲಾಖೆಗಳ ಧ್ವಂದ್ವ ನಿಲುವಿಗೆ ಶಿಕ್ಷಣ ಸಂಸ್ಥೆಗಳು ಇಂದು ಬಡವಾಗುತ್ತಿವೆ, ಬಡ ಮಕ್ಕಳಿಗೆ ಶಿಕ್ಷಣ ನೀಡುವ ವಿದ್ಯಾ ದೇಗುಲಗಳು ಇಂದು ಶಿಕ್ಷಣ ಇಲಾಖೆ ಅವೈಜ್ಞಾನಿಕ ನೀತಿಗಳಿಂದ ಕುಂಠಿತಗೊಳ್ಳುತ್ತಿವೆ ಎಂದು ರುಪ್ಸಾ ಸಂಘಟನೆಯ ರಾಜ್ಯಾಧ್ಯಕ್ಷ ಹಾಗೂ ಆಗ್ನೇಯ ಶಿಕ್ಷಕರ ಪದವೀದಾರರ ಕ್ಷೇತ್ರದ ಆಕಾಂಕ್ಷಿ ಲೋಕೇಶ್ ತಾಳಿಕಟ್ಟೆ ಶಿಕ್ಷಣ ಇಲಾಕೆ ವಿರುದ್ದ ಕಿಡಿಕಾರಿದ್ದಾರೆ.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಗ್ನೇಯ ಶಿಕ್ಷಕರ ಪದವೀದಾರರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪಂರ್ಧಿಸುವೆೆ ಎಂಬ ವಿಷಯದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಅನುದಾನ ರಹಿತ ಶಿಕ್ಷಕರ ಸಮಸ್ಯೆಗಳನ್ನು ಕೇಳುವಂತ ವ್ಯವದಾನ ಶಿಕ್ಷಣ ಇಲಾಖೆಗೆ ಇಲ್ಲವಾಗಿದೆ, ಇನ್ನೂ ವರ್ಷಕ್ಕೊಂದು ಬಾರಿ ನವೀಕರಣಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ, ಅದನ್ನು ಹತ್ತು ವರ್ಷಕ್ಕೊಂದು ಬಾರಿ ನವೀಕರಣಕ್ಕೆ ಹಸ್ತು ನೀಡಿದೆ.
ಕಳೆದ ನಾಲ್ಕು ವರ್ಷಗಳಿಂದ ಸರಕಾರದ ಹಂತದಲ್ಲಿ ಅನುದಾನ ರಹಿತ ಶಿಕ್ಷಕರ ಸಮಸ್ಯೆಗಳ ಬಗ್ಗೆ ಶಿಕ್ಷಣ ಸಂಸ್ಥೆಗಳ ಬಗ್ಗೆ ಗಮನ ಸೆಳೆಯುವಂತಹ ಕಾರ್ಯಕ್ಕೆ ಯಾರು ಕೂಡ ಹೋಗಿಲ್ಲದೆ ಇರುವುದು ವಿಪರ್ಯಾಸದ ಸಂಗತಿ. ಆದ್ದರಿಂದ ಮುಂಬರುವ ಆಗ್ನೇಯ ಶಿಕ್ಷಕರ ಪದವೀದಾರರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪಂರ್ಧಿಸುವೆ ನಿಮ್ಮ ಆರ್ಶಿವಾದ ನನ್ನ ಮೇಲೆ ಇದ್ದರೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ನಾನು ಹೊದಗಿಸುತ್ತೆನೆ ಎಂದರು.
ಇನ್ನೂ ತಾಲೂಕು ಅನುದಾನ ರಹಿತ ಖಾಸಗಿ ಸಂಸ್ಥೆಗಳ ತಾಲೂಕು ಅಧ್ಯಕ್ಷ ಯಾದಲಗಟ್ಟೆ ಜಗನ್ನಾಥ್ ಮಾತನಾಡಿ, ಶಿಕ್ಷಣ ಸಂಸ್ಥೆಗಳ, ಶಿಕ್ಷಕರ ಸಮಸ್ಯೆಗಳನ್ನು ಕುರಿತು ಚರ್ಚೆಸುವ ವಿಚಾರವಂತರು ಅನಿವಾರ್ಯ ಆದ್ದರಿಂದ ಆಗ್ನೇಯ ಶಿಕ್ಷಕರ ಪದವೀದಾರರ ಕ್ಷೇತ್ರದಲ್ಲಿ ಸ್ಪರ್ಧಿಸುವವರು ವಿಧಾನ ಸೌಧದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬAಧಿಸಿದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಖಾಸಗಿ ಸಂಸ್ಥೆಗಳ ಗಟ್ಟಿ ಧ್ವನಿಯಾಗಬೇಕು. ಅದರಂತೆ ಚಿತ್ರದುರ್ಗ, ದಾವಣಗೆರೆ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಸುಮಾರು 5 ಜಿಲ್ಲೆಗಳಲ್ಲಿ ಸುಮಾರು 1600ಶಿಕ್ಷಣ ಸಂಸ್ಥೆಗಳು ಇವೆ. ಇವೆಲ್ಲ ಸಂಸ್ಥೆಗಳಿಗೆ ಅಗ್ನಿ ಸುರಕ್ಷತೆ, ನವೀಕರಣ, ಕಟ್ಟಡ ಸುರಕ್ಷತೆ, ಹಾಗೂ ಶಿಕ್ಷಕರ ಬಗ್ಗೆ ಧ್ವನಿ ಎತ್ತುವ ಮೂಲಕ ಸರಕಾರದ ಹಂತದಲ್ಲಿ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವಂತಾಗಬೇಕು, 2018ರ ಹಿಂದೆ ಪ್ರಾರಂಭ ಮಾಡಿರುವ ಶಿಕ್ಷಣ ಸಂಸ್ಥೆಗಳಿಗೆ ಹೊಸ ನಿಯಮಗಳಲ್ಲಿ ಸಡಿಲಿಕೆ ನೀಡಬೇಕು ಎಂಬುದು ನ್ಯಾಯಾಲಾಯದ ಆದೇಶ ಕೂಡ ಇದೆ. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು 8ಸಾ. ಶಿಕ್ಷಕರ ಖಾಲಿ ಹುದ್ದೆ ಇವೆ, ಇನ್ನೂ ಕಳೆದ 25 ವರ್ಷದಿಂದ ಅನುದಾನಕ್ಕೆ ಶಿಕ್ಷಣ ಸಂಸ್ಥೆಗಳನ್ನು ಒಳಪಟ್ಟಡಿಸಿಲ್ಲ, ಹಳೆ ಪಿಂಚಣೆ ವ್ಯವಸ್ಥೆ ಜಾರಿ ಮಾಡಿಲ್ಲ, ಈಗೇ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಹಾಗೂ ರಾಜಾಕೀಯೇತರವಾಗಿ ಇರುವ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದರು.
ಖಾಸಗಿ ಸಂಸ್ಥೆಗಳ ಕಾರ್ಯದರ್ಶಿಯಾದ ಪಿ.ದಯಾನಂದ ಪ್ರಹ್ಲಾದ್ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ನಮ್ಮನ್ನು ಆಳುವ ಸರಕಾರಗಳು ಮಕ್ಕಳ ಪಠ್ಯ ಪರಿಷ್ಕರಣೆಯಲ್ಲಿ ರಾಜಕೀಯ ಮಾಡುವುದು ಕಾಣುತ್ತೇವೆ, ಆದರೆ ಮಕ್ಕಳಿಗೆ ತಕ್ಕ ಮೌಲ್ಯಯುತ ಶಿಕ್ಷಣ ದೊರಕಬೇಕಾದ ಅನಿವಾರ್ಯತೆ ಇಂದಿನ ದಿನಮಾನಗಳಲ್ಲಿ ಅವಶ್ಯಕತೆ ಇದೆ ಎಂದರು.
ಈದೇ ಸಂಧರ್ಭದಲ್ಲಿ ರುಪ್ಸಾ ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ತಾಲೂಕು ಅಧ್ಯಕ್ಷ ಯಾದಲಗಟ್ಟೆ ಜಗನಾಥ್, ಪಿ.ದಯಾನಂದ ಪ್ರಹ್ಲಾದ್, ಶುಬಾಷ್, ಚಂದ್ರಣ್ಣ, ರಾಮು, ರವಿ, ಶೇಕ್‌ಪೀರ್, ಗೌರಿಶ್ ಇತರರು ಪಾಲ್ಗೊಂಡಿದ್ದರು.