ಚಳ್ಳಕೆರೆ ; ಬೆಂಗಳೂರು ಮಾರ್ಗದ ಹೊಸಪೇಟೆ ರಾಷ್ಟಿçÃಯ ಹೆದ್ದಾರಿ ನಿರ್ಮಾಣ ಮಾಡಿರುವ ಕಾರಣ ತಳಕು ಹೋಬಳಿಯ ಗ್ರಾಮೀಣ ಪ್ರದೇಶದವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅತೀ ವೇಗವಾಗಿ ಸಂಚಾರಕ್ಕೆ ಅನುವು ಮಾಡಿಕೊಟ್ಟ ಸರಕಾರ ಒಂದುಕಡೆಗೆ ಗ್ರಾಮೀಣ ಪ್ರದೇಶದ ಜನರಿಗೆ ನೆರವಾಗದೆ ಮಾರಕವಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಹಾಗೂ ಸ್ಥಳೀಯ ರೈತ ಸಂಘಟನೆಗಳು ಇಂದು ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದವು.
ಗ್ರಾಮೀಣ ಪ್ರದೇಶದಿಂದ ದಿನನಿತ್ಯ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು, ರೈತರು, ಸಾರ್ವಜನಿಕರು ನಗರ ಪ್ರದೇಶದತ್ತ ಬರುವ ಅನಿವಾರ್ಯತೆ ಇದೆ ಆದರೆ ಸರಕಾರಿ ಬಸ್ ಕೆ.ಎಸ್.ಆರ್.ಟಿ.ಸಿ. ಹಾಗೂ ಇನ್ನು 3 ನಿಗಮದ ಸಾರಿಗೆ ವಾಹನಗಳು ಬಳ್ಳಾರಿಯಿಂದ ಬೆಂಗಳೂರು ಹಾಗೂ ಇತರೆ ಭಾಗಗಳಿಗೆ ಸಂಚರಿಸುತ್ತಿದ್ದು, ತಳಕು ಹಿರೇಹಳ್ಳಿ, ಬಿ.ಜಿ.ಕೆರೆ ಹಾನಗಲ್ ಗ್ರಾಮದ ಬಸ್ ನಿಲ್ದಾಣಗಳಿಗೆ ಬಾರದೇ ನೇರವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುತ್ತಾ ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು ಹಾಗೂ ರಾತ್ರಿ ವೇಳೆ ನಿಲ್ದಾಣಗಳಿಗೆ ಬಾರದೇ 2ಕಿ.ಮಿ. ದೂರದಲ್ಲಿರುವ ಹೆದ್ದಾರಿಯಲ್ಲಿಯೇ ಮಧ್ಯರಾತ್ರಿ ಪ್ರಯಾಣಿಕರನ್ನು ಇಳಿಸಿ ಹೋಗುತ್ತಿರುವುದನ್ನು ಶೋಚನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಕಿಡಿಕಾರಿದರು. ಆದ್ದರಿಂದ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿ ವಾಹನಗಳಿಗೆ ಸೂಕ್ತ ನಿದೇರ್ಶನ ನೀಡಬೇಕು ಎಂದು ಪ್ರತಿಭಟನೆ ನಡೆಸಿದರು.
ಇನ್ನೂ ತಳಕು, ಹಿರೇಹಳ್ಳಿ, ಚಿ.ಜಿ.ಕೆರೆ ಹಾನಗಲ್ ಬಸ್ ನಿಲ್ದಾಣಗಳಿಗೆ ಬಂದು ಹೋಗಬೇಕು, ರಾತ್ರಿವೇಳೆ ಹೆದ್ದಾರಿಯಲ್ಲಿ ಪ್ರಯಾಣಿಕರ ಕುಟುಂಬಗಳನ್ನು ಮದ್ಯ ದಾರಿಯಲ್ಲಿ ಇಳಿಸಿ ಹೋದರೆ ಅವರ ಕುಟುಂಬಕ್ಕೆ ಅಪಾಯವಾದರೆ, ಸಂಬAಧಪಟ್ಟ ಬಸ್ ಕಂಡಕ್ಟರ್ ಡ್ರೈವರ್‌ಗಳೇ ಹೊಣೆಯಾಗುತ್ತಾರೆ.
ಇನ್ನೂ ಹೊನ್ನೂರು ಮಾರಣ್ಣ ಮಾತನಾಡಿ, ರಿಯಾಯಿತಿ ಪಾಸ್ ಹೊಂದಿರುವ ವಿಕಲಚೇತನರು, ಹಿರಿಯ ನಾಗರೀಕರು, ವಿದ್ಯಾರ್ಥಿಗಳನ್ನು ಗೌರವದಿಂದ ಕಾಣಬೇಕು ಪಾಸ್ ಹೊಂದಿರುವವರಿಗೆ 100 ಕಿ.ಮೀ. ವ್ಯಾಪ್ತಿ ವಿಕಲಚೇತನರಿಗೆ ಅನುಮತಿ ಇರುತ್ತದೆ. ಯಾವುದೇ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಮೂತ್ರ ವಿಸರ್ಜನೆಗೆ ಹಣ ತೆಗೆದುಕೊಳ್ಳುವುದಿಲ್ಲ ಆದರೆ, ಬಳ್ಳಾರಿ ನಿಲ್ದಾಣದಲ್ಲಿ ಮಾತ್ರ ಹಣ ವಸೂಲಿ ಹೆಗ್ಗಿಲ್ಲದೆ ನಡೆಯುತ್ತದೆ. ಇಡೀ ವಿಭಾಗೀಯ ನಿಯಂತ್ರಣಾ ವ್ಯಾಪ್ತಿ ಅಧಿಕಾರಿಗಳಿಗೆ ಅವಮಾನ ತಕ್ಷಣ ನಿಲ್ಲಿಸಬೇಕು.
ಚಳ್ಳಕೆರೆ ನಿಲ್ದಾಣದಲ್ಲಿ ತಳಕು ಎಂದರೆ ಹೊರದಬ್ಬುತ್ತಾರೆ. ಬಳ್ಳಾರಿಯಿಂದ ಬರುವಾಗ ತಳಕು ಎಂದರೆ ಕೆಳಗಿಳಿಸುತ್ತಾರೆ ಬಸ್ ಕಂಡಕ್ಟರ್ ಪ್ರಯಾಣಿಕರಿಗೆ ಗದರಿಸಿ ಪೊಲೀಸ್ ಭಯ ತೋರಿಸುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇದೇ ಸಂಧರ್ಭದಲ್ಲಿ ಹೊನ್ನುರು ಮಾರಣ್ಣ, ವಲಸೆ ತಿಪ್ಪೆಸ್ವಾಮಿ, ಕ್ಯಾದಿಗುಂಟೆ ತಿಪ್ಪೆಸ್ವಾಮಿ, ಮಂಜುನಾಥ್, ಪಿಪಾನಾಯ್ಕ್, ರಾಜಣ್ಣ, ರುದ್ರಮುನಿ, ರವಿಕುಮಾರ್, ಮಂಜಣ್ಣ, ವಿರೇಶ್, ಶಿವಮೂರ್ತಿ, ಮಂಜುನಾಥ್,