ಚಿತ್ರದುರ್ಗ ಸುದ್ದಿ :

ಮನೆ ಮನೆ ಗ್ರಂಥಾಲಯ ಕಾರ್ಯಕ್ರಮಕ್ಕೆ ಚಾಲನೆ – ಇತಿಹಾಸ ಸಂಶೋಧಕ ಡಾ.ಬಿ ರಾಜಶೇಖರಪ್ಪ

ಕನ್ನಡ ಮತ್ತು ಪುಸ್ತಕ ಪ್ರಾಧಿಕಾರ ಚಿತ್ರದುರ್ಗ ಮತ್ತು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮನೆ ಮನೆ ಗ್ರಂಥಾಲಯ ಕಾರ್ಯಕ್ರಮ.
ಈ ಕಾರ್ಯಕ್ರಮವನ್ನು ಸಹ್ಯಾದ್ರಿ ಬಡಾವಣೆ ನಿವಾಸಿಗಳಾದ ಶ್ರೀಮತಿ ಶಾರದಜೈರಾಂ.ಬಿ ಮತ್ತು ಜೈರಾಂ.ಎನ್ ದಂಪತಿಗಳ ಮನೆಯಲ್ಲಿ ಇತ್ತೀಚಿಗೆ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ದೇಶಿಸಿ ಡಾ.ರಾಜಶೇಖರಪ್ಪನವರು ಗ್ರಂಥಾಲಯದ ಉಗಮ, ಬೆಳೆದು ಬಂದ ಹಾದಿ, ಗ್ರಂಥಗಳನ್ನು ಓದುವುದರ ಮಹತ್ವ, ಹಾಗೇಯೇ ಗ್ರಂಥಾಲಯ ಪಿತಾಮಹ ಆದ ಡಾ.ಎಸ್.ಆರ್.ರಂಗನಾಥ್ ರವರ ಕೊಡುಗೆಯನ್ನು ತಮ್ಮ ಉದ್ಘಾಟನಾ ಭಾಷಣದಲ್ಲಿ ಸ್ಮರಿಸಿದರು.

ಕವಿಗಳಾದ ಬೆಳಕು ಪ್ರಿಯ ಮಾತನಾಡಿ ಪುಸ್ತಕಗಳ ಓದಿನ ವ್ಯಾಮೋಹ ರವಿ ಬೆಳಗೆರೆ ಪುಸ್ತಕದಿಂದ ಆರಂಭವಾಗಿ ನಂತರ ಎಲ್ಲಾ ಲೇಖಕರ ಪುಸ್ತಕಗಳನ್ನು ಓದುವಂತಾಯಿತು ಎಂದರು.
ಸುಮರಾಜಶೇಖರ್ ಅವರು ಡಿವಿಜಿ ಅವರ ಕೊಡುಗೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು.
ಡಾ.ಗೌರಮ್ಮ ಅವರು ಹಾರೈಕೆಯ ನುಡಿ ಆಡಿದರು.

ಚಿನ್ಮೂಲಾದ್ರಿ ವೇದಿಕೆಯ ಸಂಸ್ಥಾಪಕರಾದ ಶ್ರೀಮತಿ ದಯಾ ಪುತ್ತೂಕ೯ರ್ ಅವರು ಶ್ರೀಮತಿ ಶಾರದಜೈರಾಂ ಅವರ ಪುಸ್ತಕ ಖರೀದಿ ಶ್ಲಾಘನೀಯ,ಅವರ ಗ್ರಂಥಾಲಯ ಕಂಡು ತುಂಬ ಸಂತೋಷವಾಯಿತು, ಹೀಗೆ ಸಂಗ್ರಹ ಮುಂದುವರಿಯಲಿ ಎಂದು ಹಾರೈಸಿದರು.
ಶ್ರೀಮತಿ ಯಶೋಧ ರಾಜಶೇಖರಪ್ಪ ಅವರು ಪುಸ್ತಕದ ಓದು ಕಾದಂಬರಿಗಳಿಂದ ಆರಂಭವಾಯಿತು ಓದುವಾಗಿನಿಂದ ಓದುವ ಶಾಲಾ ಪಠ್ಯಗಳನ್ನು ಸಂಗ್ರಹಿಸಿದರೆ ಉಪಯುಕ್ತ ಎಂದು ನುಡಿದರು.
ಶ್ರೀಯುತ ಜೈರಾಂ.ಎನ್ ಅವರು ಕಡುಕಷ್ಟದ ಬಾಲ್ಯವಾದರೂ ಜ್ಞಾನಾರ್ಜನೆ ಬದುಕಿಗೆ ಬೆಳಕು, ಭರವಸೆ ತುಂಬಿತು, *ಧನವಿದ್ದು ಏನು ಫಲ,ದಯೆವಿಲ್ಲದ್ದಕ್ಕೆ, ನೀನು ಇದ್ದು ಏನು ಫಲ ಜ್ಞಾನವಿಲ್ಲದ್ದಕ್ಕೆ ಎಂಬ ಅಕ್ಕಮಹಾದೇವಿ ವಚನ ಸ್ಮರಿಸಿದರು.

ಕೊನೆಯದಾಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಶಾರದಾ ಜೈರಾಂ.ಬಿ ಅವರು ಬಾಲ್ಯದಿಂದಲೂ ಪುಸ್ತಕ ಓದುವ ಮತ್ತು ಖರೀದಿಸುವ ಹವ್ಯಾಸವಾಗಿತ್ತು ಅದು ಇಂದಿಗೂ ಮುಂದುವರಿದಿದೆ ಈ ಸಮಯದಲ್ಲಿ ಪುಸ್ತಕ ಪ್ರೇಮಿ ಡಾ.ಅಂಬೇಡ್ಕರ್ ಅವರ ಗ್ರಂಥಾಲಯ ರಾಜ ಗೃಹದಲ್ಲಿ ಸುಮಾರು 58000 ಪುಸ್ತಕಗಳ ಸಂಗ್ರಹವಿತ್ತು.ಹೊರದೇಶದಿಂದಲೂ ಅವರು ಹೊತ್ತು ತಂದಿದ್ದು ಪೆಟ್ಟಿಗೆ ತುಂಬಾ ಪುಸ್ತಕಗಳನ್ನೇ ಎಂದರು.
ಕವಿಗಳಾದ ಮೀರಾ ನಾಡಿಗ್, ಶಶಿಕಲಾ ಕುಂಚಿಗನಾಳ್,ಜಯದೇವ ಮೂರ್ತಿ,ಪಂಡ್ರಳ್ಳಿ ಶಿವರುದ್ರಪ್ಪ, ಬೆಳಕು ಪ್ರಿಯ,ನಿರ್ಮಲ ಭಾರದ್ವಾಜ್,ನಿರ್ಮಲ ಮಂಜುನಾಥ್,ಶಶಿಕಲಾ ವೆಂಕಟೇಶ್, ನಗರಸಭೆ ಮಾಜಿ ಉಪ ಅಧ್ಯಕ್ಷರಾದ ಶ್ರೀಮತಿ ಶಾಂತಾಕುಮಾರಿ ಶೇಖರ್, ಗಿರಿಜಾ,ಹೆಚ್.ಕೆ, ಶಾಂತಮ್ಮ,ವಿರೇಶ್, ಸಾದತ್,ಹಾಜರಿದ್ದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ಶ್ರೀಮತಿ ಶಾರದಾ ಜೈರಾಂ.ಬಿ ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ಬಿ.ರಾಜಶೇಖರಪ್ಪ ಮಾಡಿದರು ಜೊತೆಗೆ ಅವರ ಸಹಧರ್ಮಿಣಿ ಶ್ರೀಮತಿ ಯಶೋಧರಾಜಶೇಖರಪ್ಪನವರು ಹಾಜರಿದ್ದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕರಾದ ಗೌರವಾನ್ವಿತ ಶ್ರೀಮತಿ ದಯಾ ಪುತ್ತೂಕ೯ರ್, ಅತಿಥಿಗಳಾಗಿ ಸುಮರಾಜಶೇಖರ್,ಡಾ.ಗೌರಮ್ಮವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಡಾ.ಬಸವರಾಜ್ ಹತಿ೯ ಮತ್ತು ವಿರೇಶ್ ನಡೆಸಿಕೊಟ್ಟರು.ಪ್ರಾರ್ಥನೆ ಪಿ ಎಸ್ ಐ ಆದ ಶ್ರೀಮತಿ ಯಶೋದಮ್ಮ ಹಾಡಿದರು.ಸ್ವಾಗತವನ್ನು ನಿಮ೯ಲ ಮಂಜುನಾಥ್, ವಂದನಾರ್ಪಣೆ ಸತೀಶ್ ರವರು ನಡೆಸಿಕೊಟ್ಟರು..
ಒಟ್ಟಾರೆಯಾಗಿ ಎಲ್ಲರ ಸಹಕಾರದಿಂದ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು..

About The Author

Namma Challakere Local News
error: Content is protected !!