ಹೃದಯಗಾತ,ಅಪಘಾತ ಸಂಧರ್ಭದಲ್ಲಿ ಒಂದು ನಿಮಿಷದ ಪ್ರಾಣಿಉಳಿಸುವ ಕಾಯಕ
ಚಳ್ಳಕೆರೆ : ಇತ್ತೀಚೆಗೆ ರಾಜ್ಯದಲ್ಲಿ ಸಂಚಕನ ಮೂಡಿಸಿದ ಹಾಸನದ ಹೃದಯಘಾತ ಪ್ರಕರಣಗಳು
ಯುವಜನತೆಯನ್ನು ಬೆಚ್ಚಿಬೀಳಿಸುವಂತೆ ಮಾಡಿತ್ತು.
ಇದರ ಅನ್ವಯ ಯುವ ಜನತೆ ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಳ್ಳಬಹುದಾದ ಆರೋಗ್ಯದ ಪ್ರಥಮ ಚಿಕಿತ್ಸೆಯ ಬಗ್ಗೆ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳ ತಂಡ ಪ್ರತ್ಯಕ್ಷಿಕವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದಾರೆ.
ಹೌದು ಚಳ್ಳಕೆರೆ ನಗರದ ನೂರು ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೃದಯ ರೋಗ, ಹಾಗೂ ಅಪಘಾತವಾದಾಗ ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಬೇಕು ಎಂಬ ಮಾಹಿತಿಯನ್ನು ಆಡಳಿತ ವೈದ್ಯಾಧಿಕಾರಿ ಡಾ.ಮಂಜಪ್ಪ , ಡಾ.ಅಮಿತ್ ಗುಪ್ತ. ಡಾ.ಪ್ರಜ್ವಲ್ ಧನ್ಯ ಹಾಗೂ ಸಿಬ್ಬಂದಿಗಳು ಸಾರ್ವಜನಿಕರಿಗೆ ತಿಳಿಸಿದರು .

