ಚಳ್ಳಕೆರೆ :
ಚಿತ್ರದುರ್ಗ: ಸರ್ಕಾರಿ ಕಚೇರಿಗಳ ತೆಗೆಯಲು ಬಿಡಲ್ಲ
ಒಳಮೀಸಲಾತಿಯನ್ನು ಇದೇ 19ರಂದು ಜಾರಿ ಮಾಡದೆ
ಹೋದರೆ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಯಾವುದೇ ಸರ್ಕಾರಿ
ಕಚೇರಿಗಳನ್ನು ತೆಗೆಯಲು ಬಿಡುವುದಿಲ್ಲ ಎಂದು ಚಳ್ಳಕೆರೆ
ದಲಿತ ಮುಖಂಡ ಮಲ್ಲೇಶ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ,
ಸಮಾಜದ ಸಚಿವರು ಶಾಸಕರು ಒಳಮೀಸಲಾತಿ ಹೋರಾಟಕ್ಕೆ
ಬೆಂಬಲಿಸಬೇಕು. ಜನಾಂಗಕ್ಕೆ ಅನ್ಯಾಯವಾಗುತ್ತಿದೆ. ಇದರಲ್ಲಿ
ಯಾವುದೇ ರಾಜಕೀಯ ಮಾಡಬೇಡಿ, ಮಕ್ಕಳ ಶಿಕ್ಷಣ ಭವಿಷ್ಯಕ್ಕಾಗಿ
ನಾವು ಹೋರಾಟ ಮಾಡುತ್ತಿದ್ದೇವೆಂದರು.

