ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ನೆಹರು ಯುವ ಕೇಂದ್ರ ಚಿತ್ರದುರ್ಗ ಹಾಗೂ , ಗ್ರಾಮ ಪಂಚಾಯಿತಿ ದೇವರ ಮರಿಕುಂಟೆ , ಶ್ರೀ ವಾಲ್ಮೀಕಿ ಕ್ರೀಡಾ ಸಂಸ್ಕೃತಿಕ ಯುವಕ ಸಂಘ ಬೊಂಬೇರಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ
ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಗ್ರಾಮ ಸ್ವಚ್ಛತೆ, ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ ಆಮ್ಮಿಕೊಳ್ಳಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಲ್ಮೀಕಿ ಕ್ರೀಡಾ ಸಂಸ್ಕೃತಿಕ
ಯುವಕ ಸಂಘದ ಗೌರವಾಧ್ಯಕ್ಷ ಲೋಕೇಶ್ ಟಿ, ಮುಖ್ಯ ಅತಿಥಿಗಳಾಗಿ
ರಾಧಮ್ಮ, ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಶಿಕಲಾ , ಭಾಗವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಭಾಷಣಕರರಾಗಿ ಶ್ರೀ ವಾಲ್ಮೀಕಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ರಾದ ವಿ ದೊಡ್ಡಯ್ಯ,
ಮತ್ತು ಬೊಂಬೇರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ
ವಿಶ್ವನಾಥ್ ಎಲ್, ರಾಜಮ್ಮ ಡಿ ಮತ್ತು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಬೆಟ್ಟಪ ವಿ ಹಾಗೂ ಬಸಣ್ಣ , ಅರ್ ವಿಜಯಣ್ಣ, ಲೋಕಮ್ಮ, ಆಶಾ ಕಾರ್ಯಕರ್ತರು ಮಹಿಳಾ ಸಂಘದ ಸದಸ್ಯರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!