ಚಳ್ಳಕೆರೆ : ಗ್ರಾಮೀಣ ಸ್ವಚ್ಚತಾ ಕಾರ್ಯದ ಮೂಲಕ ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿ ಪ್ರಗತಿ ಕಾಣಬಹುದು ಎಂದು ಸಾಣಿಕೆರೆ ಆರೋಗ್ಯ ಕೇಂದ್ರದ ಡಾ.ನಾಗರಾಜ್ ಹೇಳಿದರು.
ತಾಲೂಕಿನ ಸಾಣಿಕೆರೆ ಆರೋಗ್ಯ ಕೇಂದ್ರದಿಂದ ಹಮ್ಮಿಕೊಂಡ ಗಾಂಧೀ ಜಯಂತಿ ಅಂಗವಾಗಿ ಸ್ವಚ್ಚತಾ ಅಭಿಯಾನ ನೆರೆವೆರಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇನ್ನೂ ಸಂಧರ್ಭದಲ್ಲಿ
ಕ್ರೀಡಾಪಟು ಪಲ್ಲವಿ ತನ್ನ
ಅಂಗವೈಕಲ್ಯತೆಯನ್ನು ಮೆಟ್ಟಿನಿಂತು ಇಂಡೋನೆಷಿಯದಲ್ಲಿ ನಡೆದ ಬ್ಯಾಡ್ಮಿಂಟನ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಕ್ರೀಡಾಪಟುವಿಗೆ ರೋಟರಿ ಕ್ಲಬ್
ವತಿಯಿಂದ ಸನ್ಮಾನ ಮಾಡಲಾಯಿತು.
ಈದೇ ಸಂಧರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಆಸ್ಪತ್ರೆಯ ಸಿಬ್ಬಂದಿ, ಸಾರ್ವಜನಿಕರು ಪಾಲ್ಗೊಂಡಿದ್ದರು.