ಚಿಕ್ಕಮಧುರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಹೆಚ್.ಎಸ್.ಧನಂಜಯ್..!
ರೈತರ ಕ್ಷೇಯೋಭಿವೃದ್ದಿ ಮೂಲಕ ಬಯಲು ಸೀಮೆಯ ಹಸಿರುಕರಣಕ್ಕೆ ನಾಂಧಿ..!!
ಚಳ್ಳಕೆರೆ : ರೈತರ ಕ್ಷೇಯೋಭಿವೃದ್ದಿ ಮೂಲಕ ಬಯಲು ಸೀಮೆಯ ಹಸಿರುಕರಣಕ್ಕೆ ಕಂಕಣ ಬದ್ಧರಾಗುತ್ತೆವೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಹೆಚ್.ಎಸ್.ಧನಂಜಯ್ ಹೇಳಿದರು.
ಅವರು ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೃಷಿ ಪತ್ತಿನ ಕಛೇರಿಯಲ್ಲಿ 2023ರ ಸಾಲಿನಲ್ಲಿ ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷ ಹೆಚ್.ಎಸ್.ಧನಂಜಯ್ ಮಾತನಾಡಿದರು, ಈ ಭಾಗದ ರೈತರ ಹಿತ ಕಾಯುವಲ್ಲಿ ಪತ್ತಿನ ಸಹಾಕಾರ ಸಂಘ ಶ್ರಮಿಸುತ್ತಿದೆ, ಅದರಂತೆ ನನ್ನನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಮಾಡಿದಂತಹ ಎಲ್ಲಾ ನನ್ನ ನಿದೇರ್ಶಕರಿಗೂ ರೈತ ಕುಲದವರಿಗೆ ಅಭಿನಂಧನೆಗಳನ್ನು ಸಲ್ಲಿಸುತ್ತೆನೆ ಅದರಂತೆ ರೈತರ ಹಿತ ದೃಷ್ಠಿಯಿಂದ ಕಾಲ ಕಾಲಕ್ಕೆ ತಕ್ಕಂತೆ ಸೌಲಭ್ಯಗಳನ್ನು ಹೊದಗಿಸುವ ಮೂಲಕ ರೈತರ ಪರ ಶ್ರಮಿಸುವೆ ಎಂದರು.
ಇನ್ನೂ ಇದೇ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ತಿಪ್ಪಮ್ಮ, ನಿದೇರ್ಶಕರಾದ ರಾಜಣ್ಣ, ಸುರೇಶ್, ಕರಿಬಸಪ್ಪ, ಶೇಕರಪ್ಪ, ಮಲ್ಲೆಶಪ್ಪ, ಮಾರಕ್ಕ, ಕೆಂಚಮ್ಮ, ಪ್ರಮಿಳಮ್ಮ, ಕಾರ್ಯದರ್ಶಿ ಎನ್.ಸಿ.ನೀಲಕಂಠಪ್ಪ, ಮಲ್ಲಿಕಾರ್ಜುನಪ್ಪ, ನಿಜಲಿಂಗಪ್ಪ, ಹೊನ್ನುರಪ್ಪ ಇನ್ನೂ ಇತರರು ಪಾಲ್ಗೊಂಡಿದ್ದರು.