ಪಟ್ಟಣದ ಮಾದೀನಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಮುಸ್ಲಿಂ ಬಾಂಧವರು
ನಾಯಕನಹಟ್ಟಿ:: ಇಂದಿನ ಆಧುನಿಕ ಜಗತ್ತಿನಲ್ಲಿ ಜಾತಿ ಧರ್ಮಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಅದರಂತೆ ತಮ್ಮ ತಮ್ಮ ಜಾತಿಗಳಲ್ಲಿ ಧರ್ಮ ಗುರುಗಳ ಮಾರ್ಗದರ್ಶನ ಪಡೆಯುವುದರ ಮುಖೇನಾ ಸರ್ವಧರ್ಮ ಸಮಾನತೆಯನ್ನು ಎತ್ತಿ ಹಿಡಿಯಬೇಕು ಎಂದು ಪಿ ಎಸ್ ಐ ದೇವರಾಜ್ ಹೇಳಿದ್ದಾರೆ.
ಪಟ್ಟಣದ ಸಾನೀ ಜವಾದ್ ಮಾದೀನಾ ಮಸೀದಿಯಲ್ಲಿ ಮಹಮ್ಮದ್ ಪೈಗಂಬರರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಮಸೀದಿಗಳಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ದೊರೆಯುತ್ತದೆ ವಿದ್ಯಾ ಕಲಿಕೆಯಲ್ಲಿ ಕಮ್ಮಿಯಾದರೂ ಪರವಾಗಿಲ್ಲ ಸಂಸ್ಕಾರ ಕಲಿಯುವುದರಲ್ಲಿ ಯುವ ಪೀಳಿಗೆ ಮುಂಚೂಣಿಯಲ್ಲಿರಬೇಕು ವಿದ್ಯೆ ಕಲಿತರೆ ದಾರಿ ತಪ್ಪಬಹುದು ಸಂಸ್ಕಾರ ಕಲಿತವರು ದಾರಿ ತಪ್ಪಬಾರದು ಪಟ್ಟಣದ ಮಸೂದಿಯಲ್ಲಿ ಮಕ್ಕಳಿಗೆ ಜೀವನದ ಮೌಲ್ಯ ಮತ್ತು ಸಂಸ್ಕಾರ ಕಲಿಯುವುದರಿಂದ ಯಾವುದೇ ಧರ್ಮ ಪಂಥ ಇರಬಹುದು ಸತ್ಯಾ ಶಾಂತಿ ಸಹ ಬಾಳ್ವೆ ಮುಖ್ಯವಾದುದು ಎಂದು ತಿಳಿಸಿದ್ದಾರೆ.
ವಕೀಲ ಉಮಾಪತಿ ಮಾತನಾಡಿ ಮನುಷ್ಯ ಧರ್ಮ ಮುಖ್ಯವಾಗಬೇಕೆಂದು ಇಡೀ ವಿಶ್ವಕುಲಕ್ಕೆ ಮಹಮ್ಮದ್ ಪೈಗಂಬರ್ ಉತ್ತಮವಾದ ಸಂದೇಶವನ್ನು ಸಾರಿದ್ದಾರೆ ಇಂತಹ ಮಹಾತ್ಮರ ಹಬ್ಬಗಳನ್ನು ಸರ್ವಜಾತಿಗಳು ಸೇರಿ ಮಾಡುವುದರಿಂದ ಸರ್ವರಲ್ಲಿಯೂ ಸಮಾನತೆ ಕಾಣಬಹುದು ಎಂದು ವಕೀಲ ಉಮಾಪತಿ ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಜೆ ಆರ್ ರವಿಕುಮಾರ್, ಕಸಾಪ ಜಿಲ್ಲಾಧ್ಯಕ್ಷೆ ಕೆ ಎಂ ಶಿವಸ್ವಾಮಿ, ವಕೀಲ ಉಮಾಪತಿ. ಅಕ್ಷಯ್ ಬಾರ್ ಮಾಲಿಕರಾದ ಡಿ ಶಂಕ್ರಪ್ಪ, ಮದೀನಾ ಮಸೀದಿಯ ಅಧ್ಯಕ್ಷರಾದ ಮಹಮದ್ ಯೂಸೆಬ್ ಕಾರ್ಯದರ್ಶಿ ಮಹಮ್ಮದ್ ಸನೀಉಲ್ಲಾ, ಉಪಾಧ್ಯಕ್ಷ ಮಹಮ್ಮದ್ ಪೈಯಾಜ್, ಸಕಿಲೀನ್, ಸೈಯಾಬೇಕ್, ಹಟ್ಟಿ ಮೆಡಿಕಲ್ಸ್ ಮಲಿಕರಾದ ಅಪ್ರೋಜ್ ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಮನ್ಸೂರ್, ಕೌಸರ್, ಬಂಗಾರಪ್ಪ, ಪತ್ರಕರ್ತ ಮಾರುತಿ, ಕಾಂತರಾಜ್, ಸಮಸ್ತ ಮದೀನ ಮಸೀದಿಯ ಮುಸ್ಲಿಂ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು