ಚಳ್ಳಕೆರೆ : ಗ್ರಾಮೀಣ ಪ್ರದೇಶದಲ್ಲಿ ಮನೆಯ ಹಿಂಬದಿಯಲ್ಲಿ ಅಕ್ರಮವಾಗಿ ಗಾಂಜ ಬೆಳೆದಿದ್ದ ವ್ಯಕ್ತಿಯನ್ನು ಅಬಕಾರಿ ಅಧಿಕಾರಿಗಳ ತಂಡ ಗಿಡ ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಹೌದು ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿ ವ್ಯಾಪ್ತಿಯ ಕೊರ್ಲಕುಂಟೆ ಗ್ರಾಮದ ಪ್ರವೀಣ್ ಕುಮಾರ್.ಎಸ್ ಅಲಿಯಾಸ್ ಮುತ್ತು ಬಿನ್ ಶಿವಣ್ಣ ವಯಸ್ಸು-33 ಇವರ ಮನೆಯ ಹಿತ್ತಲಿನಲ್ಲಿ ಒಂದು ಗಿಡ ಬೆಳೆಸಿದ್ದು ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಆಯುಕ್ತರ ನಿರ್ದೇಶನ ಹಾಗೂ ಅಬಕಾರಿ ಉಪ ಅಧೀಕ್ಷಕ ಹಿರಿಯೂರು ಇವರ ಮಾರ್ಗದರ್ಶನದಲ್ಲಿ ಶುಕ್ರವಾರ ಸಂಜೆ ಕೊರ್ಲಕುಂಟೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಪ್ರವೀಣ್ ಕುಮಾರ್ ಇವರ ವಾಸದ ಮನೆಯ ಪಶ್ಚಿಮದ ದಿಕ್ಕಿನಲ್ಲಿರುವ ಪ್ಯಾಸೇಜ್ ನಲ್ಲಿ ಹೂ, ತೆನೆ, ಕಾಂಡ ಬೀಜಗಳಿಂದ ಕೂಡಿದ ಎರಡು ಹಸಿ ಗಾಂಜಾ ಗಿಡಗಳನ್ನು ಬೆಳೆಸಿದ್ದು,
ಸು.940 ಗ್ರಾಂ. ತೂಕದ ಗಾಂಜ ಹಾಗೂ ಆರೋಪಿಯ ಟೀ ಶರ್ಟ್ ಒಳಗೆ 20 ಗ್ರಾಂ ಒಗಣಗಿದ ಗಾಂಜ ಪತ್ತೆಯಾಗಿದೆ. ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುವುದರಿಂದ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನಂತರ ಆರೋಪಿಯನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದೆ.
ಕಾರ್ಯಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಸಿ.ನಾಗರಾಜ, ಅಬಕಾರಿ ನಿರೀಕ್ಷಕರು ವನಿತಾ, ಅಬಕಾರಿ ಉಪ ನಿರೀಕ್ಷಕರು ಗಳಾದ ಸಿದ್ದೇಶ್ ನಾಯ್ಕ್ ,ಡಿ.ಟಿ.ತಿಪ್ಪಯ್ಯ, ಟಿ.ರಂಗಸ್ವಾಮಿ ಹಾಗೂ ಎಕ್ಸೈಜ್ ಕಾನ್ಸ್ಟೇಬಲ್ ಗಳಾದ ಟಿ.ಸೋಮಶೇಖರ್, ನಾಗರಾಜ್. ಪಾಲ್ಗೊಂಡಿದ್ದರು.