ಚಳ್ಳಕೆರೆ : ಇಂದಿನ ಆಧುನಿಕ ಜಗತ್ತಿನಲ್ಲಿ ಜಾತಿ ಧರ್ಮಗಳ ಸಂಖ್ಯೆ ದಿನೆ ದಿನೇ ಹೆಚ್ಚಾಗುತಿದ್ದು ಅದರಂತೆ ತಮ್ಮ ತಮ್ಮ ಜಾತಿಗಳಲ್ಲಿ ಧರ್ಮಗುರುಗಳ ಮಾರ್ಗದರ್ಶನ ಪುಡೆಯುವುದರ ಮುಖ್ಯೆನಾ ಸರ್ವಧರ್ಮ ಸಮಾನತೆಯನ್ನು ಎತ್ತಿಹಿಡಿಯಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಗಾಂಧಿನಗರದ ಮದೀನ ಮಸೀದ ಬಳಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಮೊಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆಯ ಅಂಗವಾಗಿ ಮುಸ್ಲಿಂರಿAದ ಆಯೋಜಿಸಿದ್ದ ರಥಕ್ಕೆ ಚಾಲನೆ ನೀಡಿ ಮಾತನಾಡಿದರು. ಯಾವುದೇ ಜಾತಿಗಲ್ಲಿ ತಮ್ಮ ಧರ್ಮ ಗುರುಗಳು ಅವಶ್ಯವಾಗಿರುತ್ತದೆ, ಅವರ ಮಾರ್ಗಧರ್ಶನ ಸಮಾಜಕ್ಕೆ ಅವಶ್ಯಕ, ಅದರಂತೆ ಸಮಾಜದ ಉಳಿತಿಗಾಗಿ ಮೊಹಮ್ಮದ್ ಮೈಗಂಬರ್ ಮತ್ತು ಅಕ್ಕಮಹಾದೇವಿ, ಬಸವಣ್ಣ ಇತರರು ನೀಡಿರುವ ಸಂದೇಶಗಳು ಒಂದೇ ಆಗಿವೆ ಎಂದರು.

ಅಲ್ಪಸAಖ್ಯಾತರ ರಾಜ್ಯ ಸಂಘಟನೆಯ ಬಿ.ಪರೀದ್ ಖಾನ್ ಮಾತನಾಡಿ, ಮನುಷ್ಯ ಧರ್ಮ ಮುಖ್ಯವಾಗಬೇಕೆಂದು ಇಡೀ ವಿಶ್ವಕುಲಕ್ಕೆ ಮೊಹಮ್ಮದ್ ಮೈಗಂಬರ್ ಉತ್ತಮವಾದ ಸಂದೇಶವನ್ನು ಸಾರಿದ್ದರೆ, ಇಂತಹ ಮಹಾತ್ಮರ ಹಬ್ಬಗಳನ್ನು ಸರ್ವ ಜಾತಿಗಳು ಸೇರಿ ಮಾಡುವುದದಿಂದ ಸರ್ವರಲ್ಲೂ ಸಮಾನತೆ ಕಾಣಬಹುದು ಎಂದರು.
ಈ ಸಂಧರ್ಭದಲ್ಲಿ ಮುಜೀಬ್, ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಎಂ.ಸಯ್ಯದ್ ನಬಿ, ಕಲಿಮುಲ್ಲಾ, ಖಾದ್ರಿ ಬಾಬಾ, ಅನ್ವರ್ ಮಾಸ್ಟರ್, ಕಲಾಮಿ ಮಾಸ್ಟರ್, ಎಸ್‌ಬಿ.ಜುಬೇರ್, ದಾದಪೀರ್, ಮುತುವಲ್ಲಿ, ಎಸ್.ಮುಜೀಬುಲ್ಲಾ, ಹೆಚ್.ಎಸ್.ಸೈಯದ್, ದಾವುದ್ ಮೋಲಾದ್, ಹೆಚ್.ಎಂ.ಎಸ್.ಶಕೀರ್, ಇಮ್ರಾನ್, ನಾಸೀರ್, ಎಸ್.ಎಂಬಿ. ಖಾದ್ರಿ, ಖಂಬ್ರೋಜ್ , ಜಿಲಾನ್, ಇತರರು ಇದ್ದರು.

ಫೋಟೊ: ಚಳ್ಳಕೆರೆ ನಗರದ ಮದೀನ ಮಸೀದ್‌ಯಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಮೊಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ಪ್ರಯುಕ್ತ ಮೆರಣಿಗೆಗೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು.

About The Author

Namma Challakere Local News
error: Content is protected !!