ಚಳ್ಳಕೆರೆ: ತಾಲೂಕಿನ ಸಾಣಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗೆರೆ ಗ್ರಾಮದಲ್ಲಿ ಸರಿಯಾದ ರೀತಿ ಚರಂಡಿಗಳಿಲ್ಲದೆ ರಸ್ತೆಗಳೆಲ್ಲ ಗುಂಡಿ ಬಿಂದು ನೀರು ನಿಂತಿರುವುದರಿಂದ ಸೊಳ್ಳೆಗಳು ಹೆಚ್ಚಾಗುತ್ತಿದ್ದು ಇದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿದೆ ಎಂದು ಗ್ರಾಮಸ್ಥರು ಗ್ರಾ.ಪ.ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇನ್ನೂ ಗ್ರಾಮಸ್ಥರು ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾತನಾಡಿದ ಅವರು, ಗ್ರಾಮದಲ್ಲಿ ಸರಿಯಾದ ರೀತಿಯಲ್ಲಿ ಚರಂಡಿ ಇಲ್ಲ ಚರಂಡಿ ಇದ್ದರು ಸಹ ಗಿಡ ಗಂಟೀಗಳಿಂದ ಮುಚ್ಚಿ ಹೋಗಿದೆ ಇದರಿಂದ ಗ್ರಾಮದಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ಬಹಳ ತೊಂದರೆ ಆಗುತ್ತಿದೆ. ಹಾಗೂ ಕೆಮ್ಮು, ನೆಗಡಿ, ಜ್ವರ, ಮಲೇರಿಯಾ, ಟೈಪೆಡ್, ಡೆಂಗ್ಯೂ, ಯಂತಹ ಮಾರಾಂಣತಿಕ ಖಾಯಿಲೆಗೆ ಗ್ರಾಮದಲ್ಲಿ ಮುಂಜಾಗ್ರತಾ ವಹಿಸಬೇಕಿದೆ.
ಇದರಿಂದ ಗಿಡಗಳಿಂದ ಮುಚ್ಚಿ ಹೋಗಿರುವ ಚರಂಡಿಯನ್ನು ತೆಗೆಸಿ ಚರಂಡಿ ನೀರು ರಸ್ತೆಯಲ್ಲಿ ನಿಲ್ಲದ ಹಾಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡರು.
ನಂತರ ಗ್ರಾಮದ ಪ್ರಸನ್ನ ಚಳ್ಳಕೆರೆ ಟಿವಿಯೊಂದಿಗೆ ಮಾತನಾಡಿ, ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಗ್ರಾಮಸ್ಥರಿಗೆ ಬಹಳ ತೊಂದರೆಯಾಗುತ್ತಿದೆ. ರಸ್ತೆಯು ತಗ್ಗು ಗುಂಡಿಗಳಿಂದ ಕೂಡಿರುವುದರಿಂದ ವಾಹನ ಸವಾರರು ನಿತ್ಯ ಜೀವ ಭಯದಲ್ಲಿ ರಸ್ತೆ ದಾಟುತ್ತಿದ್ದಾರೆ. ಹಾಗೂ ರಸ್ತೆ ಪಕ್ಕದಲ್ಲಿ ಚರಂಡಿ ಇದ್ದು ಗಿಡಗಳಿಂದ ಕೂಡಿ ಮುಚ್ಚಿ ಹೋಗಿದೆ. ಮತ್ತು ಚರಂಡಿಯಿಂದ ತೆಗೆದಿರುವ ಕಸ ರಸ್ತೆ ತುಂಬಾ ಬಿದ್ದಿದೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗೆ ಪತ್ರದ ಮೂಲಕ ದೂರು ನೀಡಿದರು ಸಹ ಅಧಿಕಾರಿ ಕ್ಯಾರೇ ಎನ್ನುತ್ತಿಲ್ಲ ಎಂದು ತಿಳಿಸಿದರು.
ಇದರಿಂದ ಸಂಬಂಧ ಪಟ್ಟ ಮೇಲಾಧಿಕಾರಿಗಳು ಚರಂಡಿ ಕಸ ಮತ್ತು ಮುಚ್ಚಿ ಹೋಗಿರುವ ಚರಂಡಿಯನ್ನು ತೆಗೆಸಿ ಗ್ರಾಮಸ್ಥರಿಗೆ ಅನುಕೂಲ ಮಾಡಬೇಕು ಇಲ್ಲವಾದರೆ ಗ್ರಾಮ ಪಂಚಾಯತಿ ಮುಂದೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಗ್ರಾಮದ ಅಂಬೇಡ್ಕರ್ ಸಂಘಟನೆಯವರು ಎಚ್ಚರಿಕೆ ನೀಡಿದ್ದಾರೆ.