ಮೂಕ ಪ್ರಾಣಿ ರಕ್ಷಣೆಗೆ ದಾವಿಸಿದ : ನಗರಸಭೆಯ ಆರೋಗ್ಯ ನಿರೀಕ್ಷಕಿ ಗೀತಾ
ಚಳ್ಳಕೆರೆ : ನಗರದ ಮಹದೇವಿ ರಸ್ತೆ ಬಿ.ಎಸ್.ಎನ್.ಎಲ್ ಆಫೀಸ್ ಹತ್ತಿರ ಬೀಡಾಡಿ ದನದ ಕಾಲಿಗೆ ಘಾಯವಾಗಿ ಹುಳ ಬಿದ್ದ ಸ್ಥಿತಿಯಲ್ಲಿ ನರಳಾಟದಲ್ಲಿ ಇದ್ದ ಮೂಕ ಪ್ರಾಣಿ ರಕ್ಷಣೆಗೆ ನಗರಸಭೆಯ ಆರೋಗ್ಯ ನಿರೀಕ್ಷಕಿ ಗೀತಾ ಕೂಡಲೇ ಸಂಚಾರಿ ಪಶು ಅಂಬುಲೆನ್ಸ್ಗೆ ಕರೆ ಮಾಡಿ ಸ್ಥಳದಲ್ಲೆ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇನ್ನೂ ಸುಮಾರು 2 ಗಂಟೆಗಳ ಕಾಲ ಗೋವುವಿಗೆ ಗ್ಲುಕೋಸ್ ಮತ್ತು ಇಂಜೆಕ್ಷನ್ ಮತ್ತು ಕಾಲಿನ ಗೊರಸೆಯಲ್ಲಿ ಹುಳುಗಳಾಗಿದ್ದು. ಚಿಕಿತ್ಸೆಯನ್ನ ನೀಡುವುದರ ಮುಖಾಂತರ ಮೂಖ ಪ್ರಾಣಿ ರಕ್ಷಣೆಗೆ ದಾವಿಸಿರುವ ಪಶು ಇಲಾಖೆ ಅಧಿಕಾರಿಗಳು ಹಾಗೂ ನಗರಸಭೆಯ ಆರೋಗ್ಯ ನಿರೀಕ್ಷಕಿ ಗೀತಾ ರವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.