ಚಳ್ಳಕೆರೆ : ಪ್ರೀತಿಸಿದ ಯುವತಿಯನ್ನು ಕಾನೂನು ಪ್ರಕಾರ ಮಧುವೆಯಾಗಿ ಸ್ವತಃ ಗ್ರಾಮಕ್ಕೆ ತೆರಳಿದ ಇಬ್ಬರ ಪ್ರೇಮಿಗಳಿಗೆ ಗ್ರಾಮದಿಂದ ಬಹಿಷ್ಕಾರ ಹಾಕಿರುವ ಘಟನೆ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆ
ಹೌದು ಕಳೆದ ಹಲವು ದಿನಗಳಿಂದ ಪ್ರೀತಿಸಿದ ಪ್ರೇಮಿಗಳಿಬ್ಬರ ಪರಸ್ಪರ ಒಪ್ಪಿಗೆ ಮೇರೆಗೆ ಕಾನೂನು ಪ್ರಕಾರ ವಿವಾಹವಾದ ಪ್ರೇಮಿಗಳಿಗೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿ ಎನ್.ದೇವರಲ್ಲಿ ಗ್ರಾಮದಲ್ಲಿ ಬಹಿಷ್ಕಾರ ಹಾಕಿರುವುದು ದುರಂತವೇ ಸರಿ.
ಮಾತು ಬಾರದ ಇಬ್ಬರು ಮೂಖ ಪ್ರೇಮಿಗಳು ಬೆಂಗಳೂರಿನ ಅಮೆಜಾನ್ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾಗ ಒಬ್ಬರಿಗೊಬ್ಬರು ಪರಿಚಯವಾಗಿ ನಂತರ ಪ್ರೇಮಕ್ಕೆ ತಿರುಗಿ ನಂತರ ಅದು ಪ್ರೀತಿಯಾಗಿ ಕಾನೂನು ಪ್ರಕಾರ ವಿವಾಹವಾಗಿದ್ದಾರೆ, ನಾಯಕನಹಟ್ಟಿ ಹೋಬಳಿ ಎನ್.ದೇವರಲ್ಲಿ ಗ್ರಾಮದ ಜೋಗಿ ಜನಾಂಗದ ಸಾವಿತ್ರಮ್ಮ, ಆಂಧ್ರ ರಾಜ್ಯದ ಗೋದಾವರಿ ಜಿಲ್ಲೆಯ ಮಣಿಕಂಠ ಎಂಬ ಇಬ್ಬರು ಕಳೆದ ಹಲವು ದಿನಗಳ ಹಿಂದೆ ಪ್ರೀತಿಸಿ, ಚಳ್ಳಕೆರೆ ಉಪನೊಂದಾಣಾಧಿಕಾರಿಗಳ ಕಚೇರಿಯಲ್ಲಿ ವಿವಾಹವಾಗಿದ್ದರು.
ಈ ದಂಪತಿಗಳಿಗೆ ಒಂದು ತಿಂಗಳ ಮಗುವು ಕೂಡ ಇದೆ ಇನ್ನೂ ಸ್ವತಃ ಗ್ರಾಮಕ್ಕೆ ತೆರಳಿದರೆ ಗ್ರಾಮದಲ್ಲಿ ಕೆಲವರು ಬಹಿಷ್ಕಾರ ಹಾಕುವ ಮೂಲಕ 30 ಸಾವಿರ ದಂಡ ಹಾಕಿ ಅವರಿಗೆ ಮಾನಸೀಕವಾಗಿ ಗ್ರಾಮದಿಂದ ದೂಡಿದ್ದಾರೆ. ಇನ್ನೂ ರಕ್ಷಣೆಗಾಗಿ ಚಳ್ಳಕೆರೆ ಮಹಿಳಾ ಸತ್ವಾಂನ ಕೇಂದ್ರದಲ್ಲಿ ದೂರು ನೀಡಿ ನ್ಯಾಯ ಹಾಗೂ ರಕ್ಷಣೆ ಹೊದಗಿಸುವಂತೆ ಕೋರಿದ್ದಾರೆ.