ಚಳ್ಳಕೆರೆ : ಕುಡಿಯುವ ನೀರಿಗಾಗಿ ಕೆರೆ ಕಟ್ಟೆ, ಹಳ್ಳ, ನದಿ ,ತೆರದ ಬಾವಿ ಕಲ್ಯಾಣಿಗಳನ್ನು ನಿರ್ಮಿಸಿಕೊಂಡು ಉತ್ತಮ ಆರೋಗ್ಯವಂತರಾಗಿದ್ದರು. ಇತ್ತೀಚಿನ ದಿನಗಳಲ್ಲಿ ಅವುಗಳ ನಿರ್ವಹಣೆ ಹಾಗೂ ಬಳಕೆ ಇಲ್ಲದೆ ಕೊಳವೆ ಬಾವಿ,ಶುದ್ದ ಕುಡಿಯುವ ನೀರಿನ ಮೊರಹೋಗುತ್ತಿದ್ದಾರೆ ಎಂದು ತಾಪಂ ಇಒ ಹೊನ್ನಯ್ಯ ಕಿವಿಮಾತು ಹೇಳಿದರು.
ತಾಲೂಕಿನ ನೇರ್ಲಗುಂಟೆ ಗ್ರಾಪಂ ವ್ಯಾಪ್ತಿಯ ರಾಮದುರ್ಗ ಗ್ರಾಮದ ಪುಣ್ಯ ಸ್ಥಳವಾದ ಹೊಸಗುಡ್ಡದಲ್ಲಿನ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿನ ಕಲ್ಯಾಣಿ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಪೂರ್ವಜರು ಸ್ವಚ್ಚತೆಯಿಂದ ರೋಗಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂಬುದನ್ನು ಮನಗಂಡಿರುವ ಸರ್ಕಾರಗಳು ಇಂದು ದೇಶದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡುತ್ತಿದ್ದು, ನಾಗರೀಕರು ನಿಮ್ಮ ಮನೆ ಸುತ್ತ ಮುತ್ತ ಹಾಗೂ ಸಾರ್ವಜನಿಕ ಸ್ಥಗಳಲ್ಲಿ ಸ್ವಚ್ಚತೆ ಕಾಪಾಡುವಂತೆ ಪೂರ್ವಜನರು ಕಟ್ಟಿದ ಕರೆ ಕಟ್ಟೆ, ಕಲ್ಯಾಣಿಗಳ ರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದರು.
ಭಾರತ ದೇಶ ಶೇ.90ರಷ್ಟು ಹಳ್ಳಿಗಳನ್ನು ಹೊಂದಿರುವ ದೇಶವಾಗಿದ್ದು, ಹಳ್ಳಿಗಳಲ್ಲಿ ಸ್ವಚ್ಚತೆಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇರುವುದರಿಂದ ಹಳ್ಳಿಗಳಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಸರ್ಕಾರ ಆದ್ಯತೆ ನೀಡುತ್ತಿದ್ದು, ಗ್ರಾಮೀಣ ಭಾಗದ ಜನರು ಸಹ ಸ್ವಚ್ಚತೆಗೆ ಆದ್ಯತೆ ನೀಡಿ ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು.
ಗ್ರಾಮೀಣ ಭಾಗದಲ್ಲಿ ಎಲ್ಲೆಂದರಲ್ಲಿ ರಸ್ತೆ ಬದಿ, ಚರಂಡಿಗಳಲ್ಲಿ ಕಸ ಹಾಕುವುದುರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ನಿಮ್ಮ ಮನೆ ಹಾಗೂ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಚವಾಗಿದ್ದರೆ ಸಾಂಕ್ರಮಿಕರೋಗಗಳಿAದ ಮುಕ್ತರಾಗಬಹುದು. ಪುಣ್ಯ ಸ್ಥಳವಾದ ದೇವಸ್ಥಾನದ ಬಳಿ ಎಲ್ಲೆಂದರೆಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು ಬಿಸಾಡುವುದರಿಂದ ಪರಸರದ ಮೇಲೆ ಕೆಟ್ಟ ಪರಿಣಾಮಬೀರುತ್ತದೆ ಆದ್ದರಿಂದ ಪ್ರತಿಯೊಬ್ಬರು ಸ್ವಚ್ಚತೆಯನ್ನು ಕಾಪಾಡಲು ಗ್ರಾಮೀಣ ಭಾಗದ ಜನರು ಗ್ರಾಮಪಂಚಾಯಿತಿಯೊAದಿಗೆ ಕೈಜೋಡಿಸಿದಾಗ ಮಾತ್ರ ಸ್ವಚ್ಚ ಗ್ರಾಮಗಳಾಗಲು ಸಾಧ್ಯ ಎಂದರು.
ಗ್ರಾಪA ಸದಸ್ಯರಾದ ಬಂಗಾರಪ್ಪ, ಬೋಸಯ್ಯ, ದ್ರಾಕ್ಷಾಯಿಣಿ, ನರೇಗಾ ಸಹಾಯಕ ನಿರ್ದೇಶಕ ಸಂತೋಷ್ಪ್ ,ಪಿಡಿಒ ವೀರನಾಯಕ, ಅಂಗನಾಡಿ, ಆಶಾಕಾರ್ಯಕರ್ತೆಯರು ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.