ಚಳ್ಳಕೆರೆ : ಇ- ಸ್ವತ್ತು ವಿಳಂಬ ಆಕ್ರೋಶಗೊಂಡ ಸಾರ್ವಜನಿಕರು: ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪಗೆ ಸಾರ್ವಜನಿಕರಿಂದ ತರಾಟೆಗೆ

ಹೌದು ಚಳ್ಳಕೆರೆ ನಗರಸಭೆಯಲ್ಲಿ ಕಳೆದ ಆರು ತಿಂಗಳಿನಿAದ ಇಸ್ವತ್ತು ಖಾತೆ ವಿಳಂಬ ದೊರಣೆಗೆ ಇಂದು ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು.

ಇನ್ನೂ ಹಳೆ ನಗರದ ಜಯಣ್ಣ ಎಂಬುವವರ ಇಸ್ವತ್ತು ಖಾತೆಗೆ ಮೂಲ ದಾಖಲಾತಿಗಳು ಕೊಟ್ಟು ಕಳೆದ ಆರು ತಿಂಗಳಿನಿAದ ಕಚೇರಿ ಅಲೆದರು ಅಧಿಕಾರಿಗಳು ನಿರ್ಲಕ್ಷ್ಯದಿಂದ ನಿಮ್ಮ ಪೈಲ್ ಕಳೆದು ಹೊಗಿದೆ ಎಂದು ಹೇಳುತ್ತಿದ್ದರು, ಈಗ ಪೌರಾಯುಕ್ತರನ್ನು ವಿಚಾರಿಸಿದರೆ ಇನ್ನೂ ಎರಡು ದಿನದಲ್ಲಿ ನಿಮ್ಮ ಖಾತೆ ಇಸ್ವತ್ತು ನೀಡಲಾಗುವುದು ಎಂದು ಹೇಳುತ್ತಾರೆ, ಈಗೇ ಕಛೇರಿಯಲ್ಲಿ ಸರಿಯಾದ ಸಮಯಕ್ಕೆ ಕೆಲಸಗಳು ಹಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಬಿಎಲ್.ನಾಗರಾಜಚಾರ್ಯಎಂಬುವವರು ಕಳೆದ ಮೂರು ತಿಂಗಳ ಹಿಂದೆ ಇಸ್ವತ್ತು ಬದಲಾವಣೆಗೆ ಅರ್ಜಿ ಸಲ್ಲಿಸಿದರು ಎನ್ನಲಾಗಿದೆ, ಆದರೆ ಅಧಿಕಾರಿಗಳ ವಿಳಂಬ ದೊರಣೆಗೆ ನಿವೃತ್ತ ನೌಕರ ನಾಗರಾಜಚಾರ್ಯರವರು ಹಿರಿಯ ವಯಸ್ಸಾದವರ ಕಛೇರಿಗೆ ಅಲೆಯುವುದನ್ನು ತಪ್ಪಿಸಿ ಸಾರ್ವಜನಿಕರ ಕೆಲಸಗಳನ್ನು ಸರಿಯಾದ ಸಮಯಕ್ಕೆ ಮಾಡಿಕೊಡಿ ಎಂದು ಹೇಳಿದರು.

ಇನ್ನೂ ಪೌರಾಯುಕ್ತ ಸಿ.ಚಂದ್ರಪ್ಪ ಮಾಧ್ಯಮದೊಂದಿಗೆ ಮಾತನಾಡಿ ಇಸ್ವತ್ತು ತಡವಾಗಿದ್ದು ನಮ್ಮಗಮನಕ್ಕೆ ಬಂದಿಲ್ಲ ಈ ಕೂಡಲೇ ನಮ್ಮ ಸಿಬ್ಬಂದಿಯಿAದ ಮಾಹಿತಿ ತರಿಸಿಕೊಂಡು ಎರಡು ದಿನಗಳಲ್ಲಿ ಇಸ್ವತ್ತು ಖಾತೆ ನೀಡಲಾಗುತ್ತದೆ, ಇನ್ನೂ ಸಾರ್ವಜನಿಕರ ದೂರಗಳ ವಿಭಾಗಕ್ಕೆ ದೂರು ಪೆಟ್ಟಿಗೆ ಪ್ರಾರಂಭಮಾಡಲಾಗುವುದು ಕಛೇರಿಯ ಯಾವುದೇ ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ವಿನಾಃ ಕಾರಣ ವಿಳಂಬ ಮಾಡಿದರೆ ಈ ದೂರು ಪಟ್ಟಿಗೆಯಲ್ಲಿ ಅರ್ಜಿ ಸಲ್ಲಿಸಬಹುದು ಎಂದರು.

About The Author

Namma Challakere Local News
error: Content is protected !!