ಚಳ್ಳಕೆರೆ : ಬಡವರ ಮನೆಗಳನ್ನೂ ನಗರಸಭೆ ಪೌರಾಯುಕ್ತರು ಏಕಾ ಏಕಿ ಹೊಡೆದು ಹಾಕಿರುವುದು ಸಂತ್ರಸ್ತರ ಕುಟಂಬಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಇನ್ನೂಅಳಲನ್ನು ತೋಡಿಕೊಂಡಿದ್ದಾರೆ.
ಚಳ್ಳಕೆರೆ ನಗರದ ಟೆಲಿಪೋನ್ ಟವರ್ ಹಿಂಬಾಗದಲ್ಲಿ ವಸತಿ ನಿಮಿರ್ಸಿಕೊಳ್ಳಲು ಬಡ ಕುಟುಂಬವೊAದು ಸಾಲಸೂಲ ಮಾಡಿ ಸೂರು ನಿರ್ಮಿಸಿಕೊಳ್ಳಲು ತಳಪಾಯ ಹಾಕಿ ಕಟ್ಟಡ ಪ್ರಾರಂಭ ಮಾಡಿತ್ತು, ಆದರೆ ನಗರಸಭೆ ಸಿಬ್ಬಂದಿ ವರ್ಗ ನಮ್ಮ ಗಮನಕ್ಕೆ ತರಾದೆ ಏಕಾಏಕಿ ಲಕ್ಷಾಂತರ ರೂಪಾಯಿಗಳು ಖರ್ಚು ಮಾಡಿದ ಕಟ್ಟವನ್ನು ಜೆಸಿಬಿಯಿಂದ ಹೊಡೆದು ಹಾಕಿದೆ ಎಂದು ಮಾಲೀಕರಾದ ಜಯಲಕ್ಷಿö್ಮÃ ಆರೋಪ ಮಾಡಿದ್ದಾರೆ.
ಇನ್ನೂ ಶ್ರೀಮಂತರಿಗೊAದು ನ್ಯಾಯ ಬಡವರಿಗೊಂದು ನ್ಯಾಯವೇ ಎಂದು ನೊಂದ ಮಹಿಳೆ ತಮ್ಮ ಅಳಲನ್ನು ತೋಡಿಕೊಂಡರು. ರಸ್ತೆಗೆ ನಮ್ಮ ಕಟ್ಟಡ ಕಟ್ಟಿಲ್ಲವಾದರೂ ಕೂಡ ನಮ್ಮ ಮೇಲೆ ನಗಸರಭೆ ಅಧಿಕಾರಿಗಳು ದೌರ್ಜನ್ಯದಿಂದ ಕಟ್ಟಿದ ಕಟ್ಟಡವನ್ನು ಅರ್ಧಕ್ಕೆ ಕಿತ್ತು ಹಾಕಿದ್ದಾರೆ. ಇನ್ನೂ ಈ ರಸ್ತೆಯ ಪಕ್ಕದ ಚರಂಡಿ ಮೇಲೆ ಹಲವು ಕಟ್ಟಡಗಳೂ ಇದೆ ಆದರೆ ಇವೆಲ್ಲವನ್ನೂ ನೋಡಿಕೊಂಡ ನಗರಸಭೆ ಅಧಿಕಾರಿಗಳು ನಮ್ಮ ಬಡವರ ಕಟ್ಟಡದ ಮೇಲೆ ಏಕೆ ದೌರ್ಜನ್ಯ ಎಂದು ನೊಂದು ಮಹಿಳೆ ನೋವು ತೋಡಿಕೊಂಡಿದ್ದಾರೆ.
ಇನ್ನೂ ನಮ್ಮ ಕಟ್ಟಡ ಚರಂಡಿ ಮೇಲೆ ಕಟ್ಟಿಲ್ಲ, ನಮ್ಮ ರಸ್ತೆಯಲ್ಲಿ ಎಲ್ಲಾ ಕಟ್ಟಡಗಳೂ ಕೂಡ ಮುಂದಕ್ಕೆ ಬಂದಿವೆ ಆದರೆ ನಾವು ಕಟ್ಟುವ ಕಟ್ಟಡ ರಸ್ತೆಯಿಂದ ದೂರವೇ ಇದೆ ಆದರೆ ಏಕಾಏಕಿ ನಮ್ಮ ಗಮನಕ್ಕೆ ತರಾದೆ ಕಟ್ಟಡ ಹೊಡೆದಿರುವುದು ನಮಗೆ ಅಪಾರ ನಷ್ಟವಾಗಿದೆ ಇನ್ನೂ ಇದಕ್ಕೆ ಪರಿಹಾರ ನೀಡಬೇಕು, ಹಾಗೂ ನಮ್ಮ ರಸ್ತೆಯ ಮೇಲೆ ಇರುವ ಕಟ್ಟಡಗಳಂತೆ ನಾವು ಕೂಡ ಸೂರು ಕಟ್ಟಿಕೊಂಡು ಜೀವನ ನಡೆಸಲು ಅನುವು ಮಾಡಿಕೊಂಡಬೇಕೆAದು ಪರಿ ಪರಿಯಾಗಿ ಬೇಡಿಕೊಂಡಿದ್ದಾಳೆ.
ಇನ್ನೂ ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ ಮಾಧ್ಯಮದೊಂದಿಗೆ ಮಾತನಾಡಿ, ಸಾರ್ವಜನಿಕರ ಆಸ್ತಿ ಪಾಸ್ತಿ ಕಾಪಡಬೇಕದಾಂತ ಜವಾಬ್ದಾರಿ ನಮ್ಮದು ಆದ್ದರಿಂದ ಈ ಭಾಗದಲ್ಲಿ ವಾರ್ಡ ಸದಸ್ಯರು ಹೇಳಿದ್ದರಿಂದ ಇಲ್ಲಿ ಬಂದು ಪರೀಶೀಲನೆ ನಡೆಸಿದ್ದೆನೆ ವಿನಃ ಬೇರೆ ಇಲ್ಲ, ರಸ್ತೆಬಿಟ್ಟು ಕಟ್ಟಿಕೊಂಡರೆ ನಮ್ಮದು ಅಭ್ಯಾಂತರವಿಲ್ಲ ಎಂದರು.

About The Author

Namma Challakere Local News
error: Content is protected !!