ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಟಿ.ರಘುಮೂರ್ತಿ ಅವರು ಮಧ್ಯ ಕರ್ನಾಟಕದ ಪ್ರಸಿದ್ಧ ಶಕ್ತಿ ದೇವತೆ ಗೌರ ಸಮುದ್ರದ ಮಾರಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಕುಟುಂಬ ಸಮೇತ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ, ಸರ್ವರ ಒಳಿತಿಗಾಗಿ ಪ್ರಾರ್ಥಿಸಿದೆ.
ತಲಾತಲಾಂತರಗಳಿಂದ ಗೌರ ಸಮುದ್ರದಲ್ಲಿ ಮಾರಮ್ಮ ದೇವಿ ಜಾತ್ರಾ ಮಹೋತ್ಸವವು ನಡೆದುಕೊಂಡು ಬಂದಿದ್ದು, ವಿಶಿಷ್ಟ ಆಚರಣೆಯಾಗಿದೆ.
ಈ ವೇಳೆ ಅಮ್ಮನವರಿಗೆ ಒಂದು ವಾರ ಸ್ನಾನವಿರುವುದಿಲ್ಲ. ದೇವಾಲಯದಲ್ಲಿ ಗಂಟೆ ಹೊಡೆಯುವುದಿಲ್ಲ. ಸುತ್ತ ಮುತ್ತಲಿನ ಹಳ್ಳಿಯ ಜನರು ಸಹ ಒಂದು ವಾರ ಸ್ನಾನ ಮಾಡುವುದಿಲ್ಲ. ಕ್ಷೌರ ಮಾಡಿಸುವುದಿಲ್ಲ. ವಿಶಿಷ್ಟ ರೀತಿಯಲ್ಲಿ ಜಾತ್ರಾ ಮಹೋತ್ಸವವನ್ನು ಆಚರಿಸಲಾಗುತ್ತದೆ ಎನ್ನಲಾಗಿದೆ