ಚಳ್ಳಕೆರೆ : ನಗರದ ಬಿಎಂ ಜಿ ಎಚ್ ಎಸ್ ಶಾಲಾ ಆವರಣದಲ್ಲಿ ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಕ್ರೀಡಾ ಕೂಟವನ್ನು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಧ್ವಜಾರೋಹಣ ನೆರವೇರಿಸಿ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸುವ ಮೂಲಕ ಉದ್ಘಾಟಿಸಿ ನಂತರ ಮಾತನಾಡಿದರು.
ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿದಾಗ ತಾವು ಏನನ್ನಾದರೂ ಸಾಧಿಸಬೇಕು ಎಂಬ ಛಲವನ್ನು ಇಟ್ಟುಕೊಳ್ಳಬೇಕು ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜವಾದದ್ದು ಎಲ್ಲವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಸ್ಪೂರ್ತಿಯನ್ನು ಮೆರೆಯಬೇಕು ತಾಲೂಕಿನ ಅಶ್ವಿನಿ ಎಂಬ ಕ್ರೀಡಾಪಟು ಕಳೆದ ವರ್ಷ 600 ಮೀಟರ್ ರಿಲೆಯಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿದ್ದರು
ಅಶ್ವಿನಿ ಮತ್ತು ಶ್ವೇತಾ ಎಂಬ ಕ್ರೀಡಾಪಟುಗಳು ಹ್ಯಾಂಡ್ ವಾಲ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ್ದರು ಸೊಬೇಸ್ಟರ್ ಕ್ಯಾಂಪ್ ಎಂಬ ವಿಭಾಗದಲ್ಲಿ ಸೃಷ್ಟಿ ಮತ್ತು ಸ್ಪಂದನ ಎಂಬ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಈಗಾಗಲೇ ಒಂದು ಲಕ್ಷ ವಿದ್ಯಾರ್ಥಿ ವೇತನವನ್ನು ಪಡೆಯುತ್ತಿದ್ದಾರೆ.
ತಾಲೂಕಿನ ಇಂತಹ ಪ್ರತಿಭೆಗಳನ್ನು ಸ್ಪೂರ್ತಿಯಾಗಿಸಿಕೊಂಡು ಇಂದು ನಡೆಯುತ್ತಿರುವ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಜಯಗಳಿಸಿ ಜಿಲ್ಲಾ ,ರಾಜ್ಯ, ಹಾಗೂ ರಾಷ್ಟ್ರಮಟ್ಟದಲ್ಲಿ ತಾಲೂಕಿಗೆ ಕೀರ್ತಿ ತರುವಂತಾಗಬೇಕು ಎಂದು ಆಶಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆಎಸ್. ಸುರೇಶ್ ಮಾತನಾಡಿ ಕ್ರೀಡಾಕೂಟವನ್ನು ವಲಯ ಮಟ್ಟದಲ್ಲಿ ಯಶಸ್ವಿಯಾಗಿ ನಡೆಸಿದ್ದು ಇಂದಿನಿAದ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟನೆಗೊಂಡಿದೆ ಈ ಕ್ರೀಡಾಕೂಟದಲ್ಲಿ ಪ್ರೌಢಶಾಲಾ ಬಾಲಕ ಬಾಲಕಿಯರ ವಿಭಾಗದ 6 ತಂಡ ಪ್ರಾಥಮಿಕ ವಿಭಾಗದಲ್ಲಿ ಬಾಲಕ ಬಾಲಕಿಯರ 8 ತಂಡಗಳು ಭಾಗವಹಿಸುತ್ತಿವೆ ಹೀಗಾಗಿ ಎಲ್ಲಾ ಕ್ರೀಡೆಗಳು ಯಶಸ್ವಿಯಾಗಿ ಜರುಗಲು ಕ್ರೀಡಾಪಟುಗಳು ಹಾಗೂ ಶಾಲೆಗಳ ದೈಹಿಕ ಶಿಕ್ಷಕರು ಸಹಕರಿಸಬೇಕು ತೀರ್ಪುಗಾರರ ತೀರ್ಪನ್ನು ಒಮ್ಮತದಿಂದ ಸ್ವೀಕರಿಸಬೇಕು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಕ್ರೀಡಾ ಮನೋಭಾವದಿಂದ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು ಕ್ರೀಡಾಪಟುಗಳಿಗೆ ಕ್ರೀಡೆಗಳಲ್ಲಿ ಕೇವಲ ಗೆಲುವೊಂದೇ ಮಾನದಂಡವಲ್ಲ ಕ್ರೀಡೆಯಲ್ಲಿ ಭಾಗವಹಿಸುವುದು ಅತ್ಯಂತ ಪ್ರಮುಖವಾಗಿರುತ್ತದೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂಜೆ ರಾಘವೇಂದ್ರ ನಗರಸಭೆ ಸದಸ್ಯರಾದ ಕವಿತಾ ಬೋರಯ್ಯ ಸುಮಾ ಭರಮಯ್ಯ ನಗರಸಭೆ ಪೌರಾಯುಕ್ತ ಸಿ ಚಂದ್ರಪ್ಪ ಓಬಣ್ಣ ಸಿದ್ದಲಿಂಗಪ್ಪ ಸುರೇಶ್ ವೀರೇಶ್ ರಾಜಣ್ಣ ಗುರುಮೂರ್ತಿ ರಾಜಕುಮಾರ್ ಈರಣ್ಣ ಸರಸ್ವತಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!