ಮಕ್ಕಳಲ್ಲಿ ಪಠ್ಯ ಕಲಿಕೆ ಪರಿಣಾಮಕಾರಿಯಾಗಲು ಸಹಪಠ್ಯ ಚಟುವಟಿಕೆಗಳು ಸಹಕಾರಿ : ಡಿಎಸ್‌ಹಳ್ಳಿ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮದೇವೇಂದ್ರಪ್ಪ

ಚಿತ್ರದುರ್ಗ : ಮಕ್ಕಳಲ್ಲಿ ಪಠ್ಯ ಕಲಿಕೆ ಪರಿಣಾಮಕಾರಿಯಾಗಲು ಸಹಪಠ್ಯ ಚಟುವಟಿಕೆಗಳು ಸಹಕಾರಿಯಾಗಲಿದೆ ಎಂದು ಡಿಎಸ್‌ಹಳ್ಳಿ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮದೇವೇಂದ್ರಪ್ಪ ಹೇಳಿದರು
ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆ, ಸ್ಥಳೀಯ ಆಡಳಿತ ಗ್ರಾಮದ ಶಾಲಾ ಸಮಿತಿ, ಸಹಿಪ್ರಾ ಶಾಲೆ ಹಾಗೂ ಡಿಎಸ್‌ಹಳ್ಳಿ ಕ್ಲಸ್ಟರ್ ಕೇಂದ್ರದ ವತಿಯಿಂದ ಆಯೋಜಿಸಿದ್ದ ಕಿರಿಯ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು
ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ನಿಯಮಿತವಾಗಿ ಸಹಪಠ್ಯ ಚಟುವಟಿಕೆ ಕೈಗೊಳ್ಳಲು ಗ್ರಾಪಂ ವತಿಯಿಂದ ಸೂಕ್ತ ಸಹಕಾರ ಮತ್ತು ಪ್ರೋತ್ಸಾಹ ನೀಡಿ, ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ಯೋಜನೆ ಸಿದ್ದಪಡಿಸಲಾಗುವುದು ಎಂದರು
ಡಿಎಸ್‌ಹಳ್ಳಿ ಸಮೂಹ ಸಂಪನ್ಮೂಲವ್ಯಕ್ತಿ ವೆಂಕಟೇಶರೆಡ್ಡಿ ಪ್ರಾಸ್ತಾವಿಕ ಮಾತನಾಡಿ ಪ್ರಾಥಮಿಕ ಹಾಗೂ ಪ್ರೌಢಹಂತದ ವಿದ್ಯಾರ್ಥಿಗಳಿಗೆ ಸೃಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಂಡು ಅವರಲ್ಲಿನ ಸುಪ್ತ ಪ್ರತಿಭೆ ಹೊರಗೆಳೆಯಲು ಇದೊಂದು ಉತ್ತಮ ವೇದಿಕೆ ಸ್ಥಳೀಯ ಆಡಳಿತ, ಶಾಲಾ ಸಮಿತಿ ಹಾಗೂ ಗ್ರಾಮಸ್ಥರ ಸಹಕಾರ ಮೆಚ್ಚುವಂತಹುದು ಎಂದರು
ಮುಖ್ಯಶಿಕ್ಷಕ ಎಚ್ ಹನುಮಂತರೆಡ್ಡಿ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚೆಚ್ಚು ಪಠ್ಯ ಸಹಪಠ್ಯ ಚಟುವಟಿಕೆ ಆಯೋಜಿಸಿ ಮಕ್ಕಳಲ್ಲಿನ ಸುಪ್ತ ಪ್ರತಿಭೆ ಹೊರಗೆಳೆದು ಅವು ಬೆಳಗುವಂತೆ ಮಾಡಲು ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ ಈ ಎಲ್ಲಾ ಕಾರ್ಯಕ್ರಮಗಳನ್ನು ನಾವು ಚಾಚೂ ತಪ್ಪದೇ ಶಾಲೆಗಳಲ್ಲಿ ನಿಯಮಿತವಾಗಿ ಆಯೋಜಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅವಕಾಶ ಕಲ್ಪಿಸಿಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿ ಕೃಷ್ಣಪ್ಪ ಮಾತನಾಡಿ ನಮ್ಮ ದೇಶೀ ಕಲೆ ಸಾಹಿತ್ಯವನ್ನು ಉಳಿಸಿ ಬೆಳೆಸಲು ಪ್ರತಿಭಾ ಕಾರಂಜಿ ಸ್ಪರ್ಧೇ ಸಹಕಾರಿ ಎಂದರು
ಗ್ರಾಮದ ಸಹಿಪ್ರಾ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ರಾಜೇಶ್ವರಿ ಸಮಾರಂಭದ ಅಧ್ಯಕ್ಷತೆ ವಹಿಸಿ, ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿ ಉಳ್ಳವರು ಮತ್ತು ಗ್ರಾಮದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸರ್ಕಾರಿ ಶಾಲೆಯಲ್ಲಿ ಕೈಗೊಳ್ಳುವ ಸಹಪಠ್ಯ ಚಟುವಟಿಕೆಗಳಿಗೆ ತನು ಮನ ಧನವನ್ನು ನೀಡಿ ಪ್ರೋತ್ಸಾಹಿಸಬೇಕು ಎಂದರು
ಗ್ರಾಪA ಸದಸ್ಯರಾದ ಮಾರುತಿ, ವಿದ್ಯಾವತಿ, ವನಿತಾ, ಆಶಾ ಎಂ ಸಲುಪಯ್ಯ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಕೃಷ್ಣಪ್ಪ, ಲೋಲಾಕ್ಷಮ್ಮ ಮಾತನಾಡಿದರು
ಇದೇ ವೇಳೆ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಎರಡು ಹಂತದಲ್ಲಿ ಕಂಠಪಾಠಸ್ಪರ್ಧೆ, ಧಾರ್ಮಿಕ ಪಠಣ, ಲಘುಸಂಗೀತಾ, ಛದ್ಮವೇಶ, ಚಿತ್ರಕಲೆ, ಅಭಿನಯಗೀತೆ, ಕ್ಲೇಮಾಡಲಿಂಗ್, ಭಕ್ತಿಗೀತೆ, ಆಶುಭಾಷಣ, ಕವನ ಮಿಮಿಕ್ರಿ, ಸಹಪಠ್ಯ ಚಟುವಟಿಕೆ ಕೈಗೊಂಡು ಭಾಗವಹಿಸಿದ್ದ ಎಲ್ಲರಿಗೂ ಬಹುಮಾನ ವಿತರಿಸಲಾಯಿತು ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷೆ ಸುಧಾ, ಸದಸ್ಯರಾದ ಮಾರುತಿ, ವಿದ್ಯಾವತಿ, ವನಿತಾ, ಆಶಾ ಎಂ ಸಲುಪಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಲೋಲಾಕ್ಷಮ್ಮ, ಕೃಷ್ಣಪ್ಪ, ಮುಖ್ಯಶಿಕ್ಷಕ ಎಚ್ ಹನುಮಂತರೆಡ್ಡಿ, ಶಿವಮೂರ್ತಿ, ಶಿಕ್ಷಕರಾದ ಚಿತ್ತಯ್ಯ ಪಿ ವಿ ನರಸಿಂಹಪ್ಪ, ನಿರ್ಮಲಾ, ಪ್ರದೀಪ್, ವಿಜಯಕುಮಾರಿ, ಸುಜಾತಾ, ಶಿವಕುಮಾರಸ್ವಾಮಿ, ಗುರುಲಿಂಗಮ್ಮ, ತ್ರಿವೇಣಿ, ಬಸವರಾಜು, ರಾಜೇಶ್ವರಿ, ಅನಿಲ್‌ಕುಮಾರ, ಡಿಎಸ್‌ಹಳ್ಳಿ ವ್ಯಾಪ್ತಿಯ ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು
ಪೋಟೋ ( ಡಿಎಸ್‌ಹಳ್ಳಿ 14 )
ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆ, ಸ್ಥಳೀಯ ಆಡಳಿತ ಗ್ರಾಮದ ಶಾಲಾ ಸಮಿತಿ, ಸಹಿಪ್ರಾ ಶಾಲೆ ಹಾಗೂ ಡಿಎಸ್‌ಹಳ್ಳಿ ಕ್ಲಸ್ಟರ್ ಕೇಂದ್ರದ ವತಿಯಿಂದ ಆಯೋಜಿಸಿದ್ದ ಕಿರಿಯ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮವನ್ನು ಡಿಎಸ್‌ಹಳ್ಳಿ ಗ್ರಾಪಂ ಅಧ್ಯಕ್ಷೆ ಬಾಗ್ಯಮ್ಮ, ಉಪಾಧ್ಯಕ್ಷೆ ಸುಧಾ, ಶಾಲಾ ಸಮಿತಿಯ ಅಧ್ಯಕ್ಷೆ ರಾಜೇಶ್ವರಿ., ಉಧ್ಘಾಟಿಸಿದರು ಗ್ರಾಪಂ ಸದಸ್ಯರಾದ ಮಾರುತಿ, ವಿದ್ಯಾವತಿ, ವನಿತಾ, ಆಶಾ ಎಂ ಸಲುಪಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಲೋಲಾಕ್ಷಮ್ಮ, ಕೃಷ್ಣಪ್ಪ, ಮುಖ್ಯಶಿಕ್ಷಕ ಎಚ್ ಹನುಮಂತರೆಡ್ಡಿ, ಶಿವಮೂರ್ತಿ, ಶಿಕ್ಷಕರಾದ ಚಿತ್ತಯ್ಯ ಪಿ ವಿ ನರಸಿಂಹಪ್ಪ, ನಿರ್ಮಲಾ, ಪ್ರದೀಪ್, ವಿಜಯಕುಮಾರಿ, ಸುಜಾತಾ, ಶಿÀªಕುಮಾರಸ್ವಾಮಿ, ಗುರುಲಿಂಗಮ್ಮ, ತ್ರಿವೇಣಿ, ಬಸವರಾಜು ಮತ್ತಿತರರು ಇದ್ದರು

About The Author

Namma Challakere Local News
error: Content is protected !!