ಚಳ್ಳಕೆರೆ: ರಾಜ್ಯ ಸರ್ಕಾರದ 2023-24ನೇ ಸಾಲಿನ ಆಯವ್ಯಯದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಹಲವು ಪ್ರಮುಖ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಾಗಿ ಸನ್ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿರುತ್ತಾರೆ. ಈ ಕಾರ್ಯಕ್ರಮಗಳನ್ನು ಆದ್ಯತೆಯ ಮೇರೆಗೆ ಕಾಲಮಿತಿಯೊಳಗೆ ಅನುಷ್ಠಾನಗೊಳಿಸುವುದು ಅಗತ್ಯವಾಗಿರುತ್ತದೆ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಸಹಕರಿಸುವಂತೆ ಪಿಡಿಒ ಯೋಗೇಶ್ ಸದಸ್ಯರ ಗಮನಸೆಳೆದರು.
ತಾಲೂಕಿನ ಗೋಪನಹಳ್ಳಿ ಗ್ರಾಮಪಂಚಾಯತ್ ಕಚೇರಿ ಸಭಾಂಗಣದಲ್ಲಿ ಗ್ರಾಪಂ ಅಧ್ಯಕ್ಷೆ ರಾದಮ್ಮ ಇವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದರು.
ಮಹಾತ್ಮಗಾಂಧಿ ನರೇಗಾ ಯೋಜನೆಗೆ ಸಂಬAಧಿಸಿದ 2023-24ನೇ ಸಾಲಿನ ಆಯವ್ಯಯ ಘೋಷಣೆಗಳನ್ನು ನಿಗದಿತ ಕಾಲಮಿತಿಯೊಳಗೆ ಅನ ಗೋಮಾಳ ಅಭಿವೃದ್ಧಿ: ಗ್ರಾಮೀಣ ಭೂರಹಿತರು ಪಶುಪಾಲನೆಯಲ್ಲಿ ತೊಡಗಿಕೊಂಡು ಆರ್ಥಿಕವಾಗಿ ಸದೃಡಗೂಳಿಸುವ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವ ಉದ್ದೇಶದಿಂದ ಪುಸ್ತುತ ಸಾಲಿನಲ್ಲಿ ಗೋಮಾಳಗಳನ್ನು ಅಭಿವೃದ್ಧಿಪಡಿಸುವುದು.
ಬಹು ವಾರ್ಷಿಕ ಹುಲ್ಲುಗಾವಲು ಅಭಿವೃದ್ಧಿ: ಗ್ರಾಮೀಣ ಜನರಲ್ಲಿ ಪಶುಸಂಗೋಪನೆ
ಮತ್ತು ಹೈನುಗಾರಿಕೆ ಸಂಬAಧಿತ ಚಟುವಟಿಕೆಗಳನ್ನು ಉತ್ತೇಜಿಸಲು ರೈತರ ಜಮೀನುಗಳಲ್ಲಿ
ಹುಲ್ಲುಗಾವಲು ಪ್ರದೇಶವನ್ನು ಅಭಿವೃದ್ಧಿಪಡಿಸುವುದು.
ವಿಪತ್ತು ನಿರ್ವಹಣೆ: ಗ್ರಾಮೀಣ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣೆಗಾಗಿ (ಬರ, ಪ್ರವಾಹ
ಮತ್ತು ಭೂಕುಸಿತ) ನರೇಗಾ ಯೋಜನೆಯಡಿ ಬರ ಪರಿಹಾರ
ಕಾಮಗಾರಿಗಳು, ಪುವಾಹ ನಿಯಂತ್ರಣ ಕಾಮಗಾರಿಗಳು ಭೂಕುಸಿತ ತಡೆ
ಕಾಮಗಾರಿಗಳು
ಸ್ಮಶಾನ ಭೂಮಿಯನ್ನು ಶಾಂತಿದಾಮವಾಗಿ ಅಭಿವೃದ್ಧಿಪಡಿಸುವುದುಗಿ ಆಯವ್ಯಯದಲ್ಲಿ
ಘೋಷಿಸಲಾಗಿರುತ್ತದೆ. ಗ್ರಾಮಪಂಚಾಯಿತಿಗೊAದು ವಾರದ ಸಂತೆ
ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಹಾಗೂ ಆರು
ವರ್ಷದ ಒಳಗಿನ ಮಕ್ಕಳ ಆರೋಗ್ಯ, ಪೌಷ್ಟಿಕತೆ ಮತ್ತು ಸುರಕ್ಷತೆಗಾಗಿ “ಕೂಸಿನ ಮನೆ” ಎಂಬ
ಹೆಸರಿನಲ್ಲಿ ಗ್ರಾಮಕ್ಕೊಂದು ಶಿಶುಪಾಲನಾ ಕೇಂದ್ರಗಳನ್ನು ನರೇಗಾ
ಯೋಜನೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ
ಪ್ರಾರAಭಿಸಲು ಘೋಷಿಸಲಾಗಿರುತ್ತದೆ. ಶಿಶುಪಾಲನಾ ಕೇಂದ್ರಗಳನ್ನು ಗ್ರಾಮ
ಪಂಚಾಯತಿಗಳನ್ನು ಗುರುತಿಸಲು. ಶಾಲೆ ಅಂಗನವಾಡಿ ಕಟ್ಟಡ ನಿರ್ಮಾಣ. ಅಂತರ್ಜಲ ಹೆಚ್ಚಿಲು ಬೋರೆ ವೆಲ್ ರೀಚಾರ್ಜ್.ಸೇರಿದಂತೆ ಹಲವು ಕಾಮಗಾರಿಗಳನ್ನು ಪಟ್ಟಿ ಮಾಡಿ ನಿಗಧಿತ ಅವಧಿಯೊಳಗೆ ಕ್ರಿಯಾಯೋಜನೆ ಮಾಡಲು ಸದಸ್ಯರು ಸಹಕರಿಸಬೇಕು ಎಂದು ತಿಳಿಸಿದರು.
ಉನ್ನತೀಕರಣಗೊಳಿಸಲು ಆಯವ್ಯಯದಲ್ಲಿ ಘೋಷಿಸಲಾಗಿದೆ.
“ವಿದ್ಯಾಧಾಮ”ಗಳನ್ನಾಗಿ
ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕನಿಷ್ಠ ಒಂದು ಶಾಲೆಯನ್ನು ಗುರುತಿಸಿ, ಸದರಿ ಶಾಲೆಗೆ
ನರೇಗಾ ಯೋಜನೆಯಡಿ ಅನುಮತಿಸಲ್ಪಟ್ಟ ಶಾಲಾಭಿವೃದ್ಧಿ ಕಾಮಗಾರಿಗಳಾದ ಶಾಲಾ
ಕಾಂಪೌAಡ್, ಶೌಚಾಲಯ, ಅಡುಗೆ ಕೋಣೆ, ಆಟದ ಮೈದಾನ, ಪೌಷ್ಟಿಕ ತೋಟ ಮತ್ತು ಮಳ
ನೀರು ಕೊಯ್ದು ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಸಮಗ್ರವಾಗಿ ಅಭಿವೃದ್ಧಿಪಡಿಸಲು
2023 24 ನೇ ಸಾಲಿನ ಪಂಚ ಪ್ರಜಾ ಆಸ್ತಿ ಅಭಿಯಾನ ಮ.ಗಾ.ರಾ.ಗ್ರಾ.ಉ
ಖಾತರಿ ಯೋಜನೆಯಡಿ ಕ್ರಿಯಾ ಯೋಜನೆ ತಯಾರಿಸಿ ಅನುಷ್ಟಾನ ಇಲಾಖೆಗೆ
ಕಳುಹಿಸಿಕೊಡಲು ಸಭೆಯು ಅಂಗೀಕರಿಸಿತು. ರೆಡ್ಡಿಹಳ್ಳಿ ಗ್ರಾಮದ ವಾಸಿಯಾದ
ಮಿಥುನ್ ತೇಜ್ ಆರ್ .ಎಸ್. ಎಂಬ ನಾನು ಎಸ್ .ಟಿ. ಜನಾಂಗಕ್ಕೆ ಸೇರಿದ್ದು, ನನಗೆ
ಎಸ್.ಸಿ. ಎಸ್.ಟಿ. ಯೋಜನೆಯಡಿಯಲ್ಲಿ ಅನುದಾನ ಬರಿಸಲು ಅರ್ಜಿ ಯನ್ನು ಕೋರಿ
ಸಲ್ಲಿಸಿದನ್ನು ಸಭೆಯ ಗಮನಕ್ಕೆ ತಂದಾಗ ಸಭೆಯು ಸಹಾಯ ಧನ ನೀಡಲು ಸಭೆಯು
ಅಂಗೀಕರಿಸಿತು. . ರೆಡ್ಡಿಹಳ್ಳಿ ಗ್ರಾಮದ ರಿಸನಂ.135/3 ರಲ್ಲಿ 3ಎಕರೆ 15 ಗುಂಟೆ
ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಕಛೇರಿ ಚಿತ್ರದುರ್ಗ
ವರಿಂದ ಬಂದ ಏಕ ನೀವೇಶನ ವಾಣಿಜ್ಯ ಉದ್ದೇಶಕ್ಕಾಗಿ ಖಾತೆ ಮಾಡಲು ಸಭೆಯು
ಸರ್ವಾನುಮತದಿಂದ ತೀರ್ಮಾನಿಸಿತು
ಜಮಾ ಖರ್ಚಿನ ವಿಷಯದ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಜಮಾ ಖರ್ಚು
ತಾಳೆ ಬಾರದ ಕಾರಣ 2022 23 ನೇ ಸಾಲಿನ ಸ್ಥಳೀಯ ಲೆಕ್ಕ ಪರಿಶೋದನೆಗೆ ಎಲ್ಲಾ
ಯೋಜನೆಗಳ ದಾಖಲೆಗಳನ್ನು ಹಾಜರು ಪಡಿಸಿರುವುದಿಂದ ಆಡಿಟ್ ಪೂರ್ಣಗೊಂಡ ನಂತರ ಮುಂದಿನ ಸಭೆಯಲ್ಲಿ ಲೆಕ್ಕ ನೀಡಲಾಗುವುದು ಎಂದು ಪಿಡಿಒ ಯೋಗೇಶ್ ತಿಳಿಸಿದರು.
2023 24 ನೇ ಸಾಲಿನ 15 ನೇ ಹಣಕಾಸು ಕ್ರಿಯಾ ಯೋಜನೆ ತಯಾರಿಸಲು ಸಭೆಯ
ಗಮನಕ್ಕೆ ತಂದಾಗ ಸಭೆಯು ಸರ್ಕಾರದ ಸುತ್ತೋಲೆಯ ಪ್ರಕಾರ ಕಾಮಾಗಾರಿಗಳನ್ನು ಆಯ್ಕೆ
ಮಾಡಿ ಇ ಗ್ರಾಮಸ್ವರಾಜ್ ತಂತ್ರಾAಶದಲ್ಲಿ ಅನುಮೋದನೆ ಪಡೆದು ಕಾಮಗಾರಿಯನ್ನು
ಪ್ರಾರಂಭಿಸಲು ಸಭೆಯು ಸರ್ವಾನುಮತದಿಂದ ತೀರ್ಮಾನಿಸಿತು.
ಪಂಚಾಯಿ
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಯಿ ಸಮಿತಿಗಳ ರಚಿಸಿ, ಗ್ರಾಮ ಪಂಚಾಯಿತಿ ನೀರು
ನೈರ್ಮಲ್ಯ ಸಮಿತಿ ಮತ್ತು ಗ್ರಾಮ ಮಟ್ಟದ ನೀರು ನೈರ್ಮಲ್ಯ ಸಮಿತಿ ಗಳನ್ನು ರಚಿಸಿ
ಸಭೆಯಲ್ಲಿ ಚರ್ಚಿಸಿ ಸಭೆಯು ಅನುಮೋದನೆ ಮಾಡಲಾಯಿತು.
ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಸಿಬ್ಬಂದಿಗಳ ಕಾರ್ಯ ಚಟುವಟಿಕೆ
ಬಗ್ಗೆ ಸಭೆಯಲ್ಲಿ ಚರ್ಚಿಸಿ ಸಭೆಯಲ್ಲಿ ಸರಿಯಾಗಿ ಕೆಲಸ ನಿರ್ವಹಿಸಿಕೊಂಡು ಹೋಗಲು ತಿಳಿಸಲಾಯಿತು.
ಸಭೆಯಲ್ಲಿ ಅಧ್ಯಕ್ಷೆ ರಾದಮ್ಮ ಮಾತನಾಡಿ ಗ್ರಾಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳ್ಳಿ ಕುಡಿಯುವ ನೀರಿನ ಮೂಲಗಳ ಸ್ವಚ್ಚತೆ.ಚರಂಡಿ ಸ್ವಚ್ಚತೆ ಮಾಡುವಂತೆ ಸಿಬ್ಬಂದಿಗಳಿಗೆ ಸೂಚಿಸಿದರು. ಸಭೆಯಲ್ಲಿ ಮಹಾಲಿಂಗಪ್ಪ.ಶಿವಣ್ಣ. ಲೀಲಾವತಿ ವರ್ಗ 15 ನೇ ಹಣ ಕಾಸು ಸೇರಿದಂತೆ ಖರ್ಚು ವೆಚ್ಚದ ಲೆಕ್ಕ ಪತ್ರ ನೀಡುವಂತೆ ಸಭೆ ಗಮನ ಸೆಳೆದರು. ಪಿಡಿಒ ಯೋಗೇಶ್ ಮಾತನಾಡಿ ಖರ್ಚು ಜಸ್ತಿ ಇದೆ ಆದರೆ ವಸುಲಾತಿ ಕಡಿಮೆ ಇದೆ ಆದ್ದರಿಂದ ಸರಕಾರಕ್ಕೆ ನಾನು ಉತ್ತರ ನೀಡ ಬೇಕಿದೆ ಕಂದಾಯ ವಸೂಲಾತಿ ಹೆಚ್ಚಿಸುವಂತೆ ತಿಳಿಸಿದರು. ಸಾಮಾನ್ಯ ಸಭೆಯಲ್ಲಿಉಪಾಧ್ಯಕ್ಷೆ ಕೋಡಳಮ್ಮ ಸದಸ್ಯರಾದ ನಾಗರಾಜ್.ಸುಮಿತ್ರಮ್ಮ.ಶಾರದಮ್ಮ .ಕಲಾವತಿ.ಟಿ.ನಾಗರಾಜ.ಗೀತ.ಓಚಿಬೋರಯ್ಯ.ಲಕ್ಷ್ಮಿ.ಲಕ್ಷ್ಮಮ್ಮ.ಎಸ್.ಡಿ.ನಾಗರಾಜ. ಕಾರ್ಯದರ್ಶಿ ಕರಿಯಪ್ಪ ಇತರರಿದ್ದರು