ಅದ್ದೂರಿ ಶ್ರೀಕೃಷ್ಣ ಜನ್ಮಾಷ್ಠಮಿಗೆ ಡಿಜೆ ಮೆರವಣೆಗೆ : ಶ್ರೀಕೃಷ್ಣನ ಭಾವಚಿತ್ರಕ್ಕೆ ಶಾಸಕ ಟಿ.ರಘುಮೂರ್ತಿ ಪುಷ್ಪರ್ಚಾನೆ
ಚಳ್ಳಕೆರೆ: ಇಂದು ಪ್ರತಿಯೊಬ್ಬರು ಶ್ರೀಕೃಷ್ಣ ದೇವರನ್ನು ಪೂಜೆ ಮಾಡುವ ಮೂಲಕ ದೈವ ಕೃಪೆಗೆ ಪಾತ್ರರಾಗಿದ್ದಾರೆ. ಪ್ರತಿಯೋಬ್ಬರು ಶ್ರೀಕೃಷ್ಣನ ಆದರ್ಶಗಳನ್ನು ಜೀವನದಲ್ಲಿಅಳವಡಿಸಿಕೊಂಡು ಜೀವನವನ್ನು ಪಾವನ ಮಾಡೋಣ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ತಾಲ್ಲೂಕು ಯಾದವ್ ಸಂಘದಗೊಲ್ಲ ನೌಕರರ ಸಂಘ, ಗೊಲ್ಲ ಸಮುದಾಯದವತಿಯಿಂದ ಕಾಟಪನಹಟ್ಟಿ ಗೊಲ್ಲರಹಟ್ಟಿಯಲ್ಲಿ ನಡೆದ ಶ್ರೀಕೃಷ್ಣಾ ಜಯಂತಿ ಮೆರವಣೆಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಲವು ವರ್ಷಗಳಿದ ಸಮುದಾಯ ಮೌಡ್ಯತೆ, ಗೊಡ್ಡು ಸಂಪ್ರದಾಯ, ಕಂದಾಚಾರದಿAದ ಮುಕ್ತಿಹೊಂದಿ ಇಂದು ಮುಖ್ಯವಾಹಿನಿಗೆ ಬಂದಿದೆ ಈ ಸಮುದಾಯದಲ್ಲಿ ಇಂದು ಸಾಕಷ್ಟು ಮಂದಿ ಶೈಕ್ಷಣಿಕ ಪ್ರಗತಿ ಹೊಂದಿದ್ದಾರೆ, ಕೃಷ್ಣನ ಜೀವನ ಮೌಲ್ಯಗಳನ್ನು ಇನ್ನು ಹೆಚ್ಚು ಅರ್ಥೈಸಿಕೋಳ್ಳುವ ಅವಸ್ಯಕತೆ ಇದೆ. ಆಧುನಿಕಯುಗದಲ್ಲೂ ಸಹ ನಾವು ಕೆಲವೊಂದು ಮೂಲ ಸಂಪ್ರದಾಯಗಳಿಗೆ ಬೆಲೆ ಕೋಡುತ್ತಿದ್ದು ಅದನ್ನು ನಿಯಂತ್ರಿಸಬೇಕಿದೆ ಎಂದರು.
ನಿವೃತ್ತಿ ಶಿಕ್ಷಕ ಸಿರಿಯಪ್ಪ ಮಾತನಾಡಿ, ಶ್ರೀಕೃಷ್ಣಾ ಜಯಂತಿ ಪ್ರತಿಯೊಬ್ಬರು ಆಚರಿಸುತ್ತಾರೆ. ಕೃಷ್ಟಾ ಪರಮಾತ್ಮನನ್ನು ಆರಾಧಿಸುತ್ತಾರೆ. ಆಧುನಿಕ ಯುಗದಲ್ಲು ಬಹಳಷ್ಟು ಜನರಿಗೆ ದೇವರ ಮೇಲಿನ ನಂಬಿಕೆ ಅಪಾರವಾದದ್ದು, ಇಂದು ಕೃಷ್ಣಾ ಜಯಂತಿಯನ್ನು ಪಕ್ಷಬೇದ ಮರೆತ್ತು ಅದ್ದೂರಿಯಿಂದ ಆಚರಿಸಿದ್ದಿರಿ ಶಿಕ್ಷಣ ಇದ್ದರೆ ಎಂತಹ ಕಠಿಣ ಕೆಲಸಗಳು ಇದ್ದರು ಉಪಯದಿಂದ ಸಾಧನೆ ಮಾಡಬಹುದು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಶ್ರೀಕೃಷ್ಣಾ ಯಾದವ್ ಸಂಘದ ಅಧ್ಯಕ್ಷ ರವಿಕುಮಾರ, ನಗರಸಭೆ ಸದಸ್ಯರಾದ ವೈ.ಪ್ರಕಾಶ, ಬಿ.ವಿ.ಸಿರಿಯಣ್ಣ, ಕಾಂತರಾಜ್, ಬಾನು ವೀರೇಶ್, ವೀರೇಶ್, ಮಹಾಲಿಂಗಪ್ಪ, ಮಂಜುನಾಥ್, ಇದ್ದರು .