ಚಳ್ಳಕೆರೆ ವಕೀಲರ ಸಂಘದ ನೂತನ ಉಪಾಧ್ಯಕ್ಷ ಬಿ ಪಾಲಯ್ಯ ರವರಿಗೆ ನಾಯಕನಹಟ್ಟಿ ಹೋಬಳಿಯ ವಿವಿಧ ಗ್ರಾಮಗಳ ಮುಖಂಡರು ಸನ್ಮಾನಿಸಿದರು
ನಾಯಕನಹಟ್ಟಿ:: ಚಳ್ಳಕೆರೆ ವಕೀಲರ ಸಂಘದ ಚುನಾವಣೆಯು ದಿನಾಂಕ 2.09.2023 ರಂದು ಶನಿವಾರ ಚುನಾವಣೆ ನಡೆಯಿತು ಚುನಾವಣೆಯಲ್ಲಿ ಚಳ್ಳಕೆರೆ ವಕೀಲರ ಸಂಘದ ನೂತನ ಉಪಾಧ್ಯಕ್ಷ ಬಿ ಪಾಲಯ್ಯ ಆಯ್ಕೆಯಾದ ಪ್ರಯುಕ್ತ ಇಂದು ನಾಯಕನಹಟ್ಟಿ ಹೋಬಳಿಯ ವಿವಿಧ ಗ್ರಾಮದ ಮುಖಂಡರು ಸಮೀಪದ ಕಾಟವ್ವನಹಳ್ಳಿ ಶ್ರೀ ಅನ್ನಪೂರ್ಣೇಶ್ವರಿ ಡಾಬಾ ಆವರಣದಲ್ಲಿ ಹೋಬಳಿಯ ವಿವಿಧ ಗ್ರಾಮಗಳ ಮುಖಂಡರು ಚಳ್ಳಕೆರೆ ವಕೀಲರ ಸಂಘದ ನೂತನ ಉಪಾಧ್ಯಕ್ಷ ಬಿ ಪಾಲಯ್ಯ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಹೆಲ್ತ್ ಬೋರಯ್ಯ, ನಿವೃತ್ತ ಶಿಕ್ಷಕ ಎಂ ಪಾಲಯ್ಯ, ಕಾಮಯ್ಯ, ಗುಂತಕೊಲಮ್ಮನಹಳ್ಳಿ ಜಿ ಎಂ ಜಯಣ್ಣ, ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಟಿ ಬಸಪ್ಪ ನಾಯಕ, ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಪಡ್ಲಬೋರಯ್ಯ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನ್, ಶಿಕ್ಷಕ ಪಾಲಯ್ಯ, ಛೇರ್ಮನ್ ತಿಪ್ಪೇಸ್ವಾಮಿ, ನಾಯಕನಹಟ್ಟಿ ಶಿಕ್ಷಕ ಎನ್ ಮಹಾಂತೇಶ್, ಏಜೆಂಟ್ರು ಆರ್ ಪಾಲಯ್ಯ, ಕೆಎಂಟಿ. ತಿಪ್ಪೇಸ್ವಾಮಿ, ಕೊರಡಿಹಳ್ಳಿ ಸುರೇಂದ್ರಪ್ಪ ಗುಂತಕೋಲಮ್ಮನಹಳ್ಳಿ ಶಿವತಿಪ್ಪೇಸ್ವಾಮಿ ಸೇರಿದಂತೆ ಮುಂತಾದವರು ಇದ್ದರು