ಚಿತ್ರದುರ್ಗ : ದಾವಣಗೆರೆ ವಿಶ್ವವಿದ್ಯಾಲಯವು 2022-23ನೇ ಸಾಲಿನಲ್ಲಿ ನಡೆಸಿದ ಅಂತಿಮ ಬಿ.ಎ., ಬಿ.ಎಸ್ಸಿ, ಬಿ.ಕಾಂ. ಪದವಿ ಪರೀಕ್ಷೆಗಳಲ್ಲಿ ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ 40ಕ್ಕು ಹೆಚ್ಚು ವಿದ್ಯಾರ್ಥಿಗಳು ಬೇರೆ ಬೇರೆ ವಿಷಯಗಳಲ್ಲಿ ಶೇ. 100ಕ್ಕೆ 100 ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆAದು ಪ್ರಾಚರ‍್ಯರಾದ ಡಾ. ಎಸ್.ಹೆಚ್. ಪಂಚಾಕ್ಷರಿ ತಿಳಿಸಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ: ಪೂಜಾ ಸಿ.ಎಸ್.- 97%, ನಂದಿತ ಎನ್.-97%, ಸವಿತ ಎಂ.-95%, ಹಲೀಮ ಸಾದಿಯ-94%, ದೇವಿಕ ಎನ್.-91% ಅಂಕಗಳನ್ನು ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಆರ್.ಅಂಬಿಕ-95%, ಗುರುಮೂರ್ತಿ ಎಸ್.ಆರ್.-92%, ಅಂಜು ವೈ.-91%, ಆಯುಷಿ ಎ.ಜೈನ್.-90% ಅಂಕಗಳನ್ನು ತೇರ್ಗಡೆಯಾಗಿರುತ್ತಾರೆ ಹಾಗೂ ಬಿ.ಎ. ವಿಭಾಗದಲ್ಲಿ : ಸುಜಾತ ಬಿ.-87%, ದೀಪಿಕಾ ಕೆ.-85%, ನಿತ್ಯಾಶ್ರೀ ಎಸ್.ಎಂ.-85%, ಕಿರಣ್ ಆರ್.ಹೆಚ್.-83% ಮತ್ತು ರಂಜಿತ ಎಸ್.-83% ಸೇರಿದಂತೆ 40ಕ್ಕು ಹೆಚ್ಚು ವಿದ್ಯಾರ್ಥಿಗಳು ಬೇರೆ ಬೇರೆ ವಿಷಯಗಳಲ್ಲಿ ಶೇ. 100ಕ್ಕೆ 100 ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ಅತಿಹೆಚ್ಚು ಅಂಕ ಗಳಿಸಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಎಸ್.ಜೆ.ಎಂ. ವಿದ್ಯಾಪೀಠದ ಉಸ್ತುವಾರಿಗಳಾದ ಶ್ರೀ ಬಸವಪ್ರಭು ಸ್ವಾಮಿಗಳು, ಆಡಳಿತಾಧಿಕಾರಿ ಮತ್ತು ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ರೇಖಾ, ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಹೆಚ್. ಪಂಚಾಕ್ಷರಿ, ಬೋಧಕ ಮತ್ತು ಬೋಧಕೇತರ ವರ್ಗದವರು ಅಭಿನಂದಿಸಿದ್ದಾರೆ.