ಚಿತ್ರದುರ್ಗ, ಆ. 26 – ವ್ಯಕ್ತಿ ಎಷ್ಟು ದೊಡ್ಡವನಾದರೇನು ಸಂಕುಚಿತತೆ ಇದ್ದರೆ ಅವನಲ್ಲಿ ವಿಶಾಲತೆ ಇರಲು ಸಾಧ್ಯವಿಲ್ಲ. ಸಂಪತ್ತಿನಿAದ ದೊಡ್ಡವನಾಗಲು ಸಾಧ್ಯವಿಲ್ಲ. ಸಂಪತ್ತನ್ನು ನಾಲ್ಕು ಜನರಿಗೆ ಹಂಚಿ ತಿನ್ನಬೇಕು. ಆಧ್ಯಾತ್ಮವು ಮನಸ್ಸನ್ನು ವಿಶಾಲಗೊಳಿಸುತ್ತದೆ ಎಂದು ಶ್ರೀ ಬಸವಪ್ರಭು ಸ್ವಾಮಿಗಳು ಹೇಳಿದರು.ನಗರದ ಶಿವ ಲೇಔಟ್‌ನ ಶ್ರೀಮತಿ ಎಸ್.ವಿ. ಸ್ಮಿತ ಅವರ ಮನೆಯಂಗಳದಲ್ಲಿ ಶನಿವಾರ ಸಂಜೆ ನಡೆದ ನಿತ್ಯಕಲ್ಯಾಣ ಮನೆ ಮನೆಗೆ ಚಿಂತನ ಸಮಾರಂಭದ ನೇತೃತ್ವ ವಹಿಸಿ ವಿಶಾಲದೃಷ್ಟಿ ವಿಷಯ ಕುರಿತು ಚಿಂತನ ನಡೆಸಿದ ಅವರು, ವಿಶಾಲ ಮನಸ್ಸು ಸ್ವರ್ಗ ನಿರ್ಮಾಣ ಮಾಡಿದರೆ ಸಂಕುಚಿತ ಮನಸ್ಸು ದುಃಖ ತಂದುಕೊಡುತ್ತದೆ. ವಿಶಾಲ ಭಾವನೆಯೇ ಬಸವತತ್ತ್ವ. ಯಾವ ವ್ಯಕ್ತಿ ಬಸವತತ್ತ÷್ವಗಳಿಂದ ಸ್ಫೂರ್ತಿ ಪಡೆಯುತ್ತಾನೋ ಅವನ ಬದುಕು ಜಡ ಬದುಕಲ್ಲ; ಬಸವ ಬದುಕಿನ ಮತ್ತೊಂದು ಹೆಗ್ಗಳಿಕೆ ಎಂದರೆ ವಿಶಾಲ ದೃಷ್ಟಿಕೋನ. ಸಮಾನತೆ ಸಾಧಿಸುವ ತುಡಿತ ಇಲ್ಲಿ ಎದ್ದುಕಾಣುತ್ತದೆ ಎಂದು ನುಡಿದರು.ನಾವು ಬಸವಣ್ಣನವರ ಬದುಕನ್ನು ಒಂದುಕ್ಷಣ ಭಾವಿಸಿಕೊಳ್ಳಬೇಕು. ಒಂದೇಕಾಲದಲ್ಲಿ ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಿದ ಧೀಮಂತ. ಶರಣ ಸಂಕುಲವನ್ನು ಒಂದೆಡೆ ಸೇರಿಸಿದ್ದು, ಅದರ ಮುಖಾಂತರ ಕಾಯಕ ಪ್ರಧಾನ ಸಮಾಜ ನಿರ್ಮಾಣ, ಅನುಭವ ಮಂಟಪ ರಚನೆ, ಸ್ಪೃಶ್ಯ-ಅಸ್ಪೃಶ್ಯ ಭಾವನೆಯ ನಿರ್ಮೂಲನೆ, ಸಾಮಾಜಿಕ ಸಮಾನತೆ, ಸ್ತಿçà ವಿಮೋಚನೆ, ವಚನ ರಚನೆಗೆ ಪ್ರೇರಣೆ, ಶಿವಯೋಗದ ಪರಿಕಲ್ಪನೆ, ಅಂಧಶ್ರದ್ಧೆಯ ಮೂಲೋತ್ಪಾಟನೆಯಂಥ ಕಾರ್ಯಗಳು ಸಾಕಾರಗೊಳ್ಳಲು ವಿಶಾಲದೃಷ್ಟಿಯುಳ್ಳವರಿಂದ ಮಾತ್ರ ಸಾಧ್ಯ ಎಂದರು.ಸೋಮವಾರಪೇಟೆ ವಿರಕ್ತಮಠದ ಶ್ರೀ ಪ್ರಭುಲಿಂಗ ಸ್ವಾಮಿಗಳು ಮಾತನಾಡಿ, ಈ ಬದುಕಿನಲ್ಲಿ ತನ್ನದೆನ್ನುವುದು ಯಾವುದೂ ಇಲ್ಲ. ವಚನಗಳನ್ನು ಅರ್ಥೈಸಿಕೊಂಡು ಅಳವಡಿಸಿಕೊಂಡರೆ ಬದುಕು ವಿಶಾಲವಾಗುತ್ತದೆ. ಇಂದು ಮನುಷ್ಯ ಭ್ರಾಂತಿಯಲ್ಲಿ ಬದುಕುತ್ತಿದ್ದಾನೆ. ಸತ್ಯಶುದ್ಧ ಕಾಯಕ ಮಾಡಬೇಕಿದೆ ಎಂದು ನುಡಿದರು.ಉಪನ್ಯಾಸಕಿ ಡಾ. ಎನ್. ಮಮತ ಮಾತನಾಡಿ, ವಿಶಾಲ ದೃಷ್ಟಿಯವರು ತ್ರಿಕಾಲ ಜ್ಞಾನಿಗಳಾಗಿರುತ್ತಾರೆ. ಬಸವಾದಿ ಶರಣರದು ವಿಶಾಲದೃಷ್ಟಿ. ಜಾತ್ಯತೀತ ಸಮಾಜ ನಿರ್ಮಾಣದ ವ್ಯವಸ್ಥೆಯನ್ನು ಬಸವಾದಿ ಶರಣರು ಮಾಡಿದರು. ಅನೇಕ ವಿರೋಧಗಳ ನಡುವೆ ವಚನಕಾರರು ಸಮಾನತೆ ಕಲ್ಪಿಸಿದರು. ಮಹಿಳೆಯರಿಗೆ ಸಮಾನ ಅವಕಾಶ ಕೊಟ್ಟರು. ವಿಶಾಲದೃಷ್ಟಿ ಉಳ್ಳವರು ಬೆಳೆಯುತ್ತಾರೆ. ಪ್ರತಿದಿನವೂ ನಾವೀನ್ಯತೆಯಿಂದ ಕೂಡಿರಬೇಕು. ಜನಪದದಲ್ಲಿ ಕಂಡುಬAದ ವಿಶಾಲದೃಷ್ಟಿ ಅದ್ಭುತವಾದುದು. ಆಧುನಿಕ ಕಾಲದಲ್ಲೂ ಸಹ ವಿಶಾಲದೃಷ್ಟಿ ಬೆಳೆಸಿಕೊಳ್ಳಲು ಅವಕಾಶವಿದೆ. ಆದರೆ ಈಗಿನವರಿಗೆ ಸಮಾಧಾನವಿಲ್ಲ. ನಾವು ನಾವಾಗಬೇಕಾದರೆ ತಾಳ್ಮೆ ಬಹಳ ಮುಖ್ಯ. ಆಧ್ಯಾತ್ಮ ವಿಶಾಲದೃಷ್ಟಿಗೆ ಉತ್ತೇಜನವನ್ನು ನೀಡುತ್ತದೆ. ನಮಗೆ ಮಾನವೀಯ ಮೌಲ್ಯಗಳ ಶಿಕ್ಷಣ ಬೇಕು. ಬುದ್ಧ, ಬಸವ, ಗಾಂಧೀಜಿ, ಅಂಬೇಡ್ಕರ್‌ರವರ ಚಿಂತನೆಗಳು ವಿಶಾಲ ದೃಷ್ಟಿಯನ್ನು ಹೊಂದಿವೆ ಎಂದು ಹೇಳಿದರು.ಕಾರ್ಯಕ್ರಮ ಆಯೋಜಕರಾದ ಶ್ರೀಮತಿ ಎಸ್.ವಿ. ಸ್ಮಿತ ಮತ್ತು ಬಸವರಾಜ್, ಶ್ರೀ ವೀಣಾ ಸುರೇಶ್ ಇದ್ದರು.

About The Author

Namma Challakere Local News
error: Content is protected !!