ಅವದೂತ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಸನ್ನಿಧಿಯಲ್ಲಿ ವರಮಹಾಲಕ್ಷ್ಮಿ ಪೂಜೆ ಸಂಭ್ರಮಾ ಸಡಗರದಿಂದ ನೂರಾರು ಮುತ್ತೈದಿರಿಗೆ ಅರಿಶಿನ ಕುಂಕುಮ ಬಳೆ ವಿತರಣೆ ಮಾಡಲಾಗಿದೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯ ನಿರ್ಮಾಣಧಿಕಾರಿ ಎಚ್ ಗಂಗಾಧರಪ್ಪ ಹೇಳಿಕೆ.

ನಾಯಕನಹಟ್ಟಿ:: ಪಟ್ಟಣದ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸನ್ನಿಧಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಅರಿಶಿಣ ಬಳೆ ಕುಂಕುಮವನ್ನು ನೂರಾರು ಮುತ್ತೈದೆರಿಗೆ ವಿತರಣೆ ಮಾಡಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಣ ಅಧಿಕಾರಿ ಎಚ್ ಗಂಗಾಧರಪ್ಪ ಹೇಳಿದ್ದಾರೆ.

ಅವರು ಶುಕ್ರವಾರ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜಾ ಕೈ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ನಮಃ ಶ್ರೀ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಎರಡನೇ ವರ್ಷದ ಶುಭ ಶುಕ್ರವಾರದಿಂದು ವರಮಹಾಲಕ್ಷ್ಮಿ ವ್ರತವನ್ನು ಕೈಗೊಳ್ಳಲಾಗಿದೆ ನಾಯಕನಹಟ್ಟಿ ಹಾಗೂ ದೇವಸ್ಥಾನಕ್ಕೆ ಆಗಮಿಸಿದ ಸರ್ವ ಸುಮಂಗಳರಿಗೆ ಪ್ರಸಾದದ ರೂಪದಲ್ಲಿ ಅರಿಶಿನ ಕುಂಕುಮ ಬಳೆ ವಿತರಣೆ ಮಾಡಲಾಗಿದೆ ವರಮಹಾಲಕ್ಷ್ಮಿಯು ಎಲ್ಲಾ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿ ನಾಡಿನ ಸಮಸ್ತ ಜನತೆಗೆ ಒಳಿತಣ್ಣ ಬಯಸಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಮಲ್ಲಮ್ಮ, ಜೀವಿತ, ಮತ್ತು ಕಾರ್ಯನಿರ್ವಹಣಾಧಿಕಾರಿ ಎಚ್ ಗಂಗಾಧರಪ್ಪ, ವಿದ್ವಾನ್ ಡಾ. ಶ್ರೀ ವೀರೇಶ್ ಹಿರೇಮಠ ದೇವಸ್ಥಾನ ಸಿಬ್ಬಂದಿ ಎಸ್ ಸತೀಶ್, ಮನು, ತಿಪ್ಪಮ್ಮ, ಪ್ರಕಾಶ್, ಶಿವಣ್ಣ, ಮಹದೇವಪ್ಪ, ಮಂಜುನಾಥ್, ಶಂಕರಪ್ಪ, ತಿಪ್ಪೇಸ್ವಾಮಿ, ಡ್ರೈವರ್ ಚನ್ನಪ್ಪ ,ಬಿ ಟಿ ರುದ್ರೇಶ್, ದುರುಗೇಶ್, ದೇವರಾಜ್, ಎನ್ ಟಿ ತಿಪ್ಪೇಸ್ವಾಮಿ,ಎಂ ತಿಪ್ಪೇಸ್ವಾಮಿ, ಸೇರಿದಂತ ಮುಂತಾದವರು ಇದ್ದರು

Namma Challakere Local News
error: Content is protected !!