ಚಳ್ಳಕೆರೆ : ಚಂದ್ರಯಾನ-3 ಯಶಸ್ವಿಯಾಗಲು ಚಳ್ಳಕೆರೆ ಪ್ರದೇಶದಲ್ಲಿ ಕಳೆದ ದಿನಗಳಲ್ಲಿ ನಡೆಸಿದ ಪ್ರಯೋಗಿಕ ಪರೀಕ್ಷೆಯೇ ಈ ಯಶಸ್ವಿ ಹಿಂದಿನ ಗುಟ್ಟಾಗಿದೆ ಎಂದು ವಿಜ್ಞಾನ ಶಿಕ್ಷಕರಾದ ನಾಗ ಅರುಣ್ ಹೇಳಿದರು.
ಅವರು ತಾಲೂಕಿನ ಮನ್ನೆಕೋಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಚಂದ್ರಯಾನ-3 ಯಶ್ವಿಸಿಯಾದ ಹಿನ್ನಲೆಯಲ್ಲಿ ಇಸ್ರೋ ಸಂಸ್ಥೆಗೆ ಅಭಿನಂದನೆ ಸಲ್ಲಿಸಿಲು ಮಕ್ಕಳ ಮೂಲಕ ಇಸ್ರೊ ಎಂಬ ಅಕ್ಷರ ಬಿಡಿಸುವ ಮೂಲಕ ಅಭಿನಂದನೆ ಸಲ್ಲಿಸಿ ಮಾತನಾಡಿದರು.
ನಮ್ಮ ಚಳ್ಳಕೆರೆ ಭೂಮಿ ವಿಜ್ಞಾನಿಗಳ ತವರು ಭೂಮಿಯಾಗಿದೆ ಈಡೀ ದೇಶದಲ್ಲಿ ಹೊಸ ಆವಿಷ್ಕಾರ ಮಾಡುವುದು ಈ ನೆಲದಿಂದ ಇಂತಹ ನೆಲದಲ್ಲಿ ಜನಿಸಿದ ಮಕ್ಕಳು ವಿಜ್ಞಾನಿಯಾಗಬೇಕು ಎಂಬ ಸಂಕಲ್ಪವನ್ನು ಪ್ರತಿಯೊಬ್ಬರೂ ಪಡೆಯಬೇಕು, ಶಾಲಾ ಅಂತಹದಿಂದ ನಮ್ಮ ಜ್ಞಾನವನ್ನು ವೃದ್ದಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಸೋಮಶೇಖರ್, ದಿವ್ಯ, ಮಮತಾ, ಮಂಜಮ್ಮ ಇತರರು ಪಾಲ್ಗೊಂಡಿದ್ದರು.