ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿ ಗುಂತಕೋಲಮ್ಮನಹಳ್ಳಿ ಬಳಿ ಇರುವ ರೇಖಲಗೆರೆ ಕಾವಲಿನಲ್ಲಿ ನೆಲಸಿರುವ ಶ್ರೀ ಕಾವಲು ಆಂಜನೇಯ ಸ್ವಾಮಿಗೆ ಶ್ರಾವಣದ ಮೊದಲ ಶನಿವಾರ ಅಭಿಷೇಕ ಪೂಜೆ ಮಾಡಿ ವಿಶೇಷ ಅಲಂಕಾರ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಕ್ಷೇತ್ರ ಪಾಲಕ ಶ್ರೀ ನಾಗಸುಬ್ರಮಣ್ಯ ಸ್ವಾಮಿಗೆ ಅಭಿಷೇಕ ಹಾಗೂ ಪೂಜೆ ಮಾಡಲಾಯಿತು.
ಭಕ್ತಾದಿಗಳಿಗೆ ಕೋಲಂನಳ್ಳಿ ಕೆ.ಎಲ್. ರಾಮದಾಸ್ ಉಚಿತ ಅನ್ನಸಂತರ್ಪಣೆ ಏರ್ಪಡಿಸಿದ್ದರು. ಕೊಂಡಿಕಾರ್ ವಂಶಸ್ಥರಿಂದ ಅಭಿಷೇಕ ವಿಶೇಷ ಪೂಜೆ ಮತ್ತು ಪ್ರಸಾದ ವಿತರಿಸಲಾಯಿತು.