ಚಳ್ಳಕೆರೆ : ಭಾರತೀಯರಾದ ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರö್ಯವು ಅಸಂಖ್ಯಾತ ಸ್ವಾತಂತ್ರö್ಯ ಯೋಧರ ತ್ಯಾಗ ಬಲಿದಾನದ ಫಲ ಎಂದು ಮಕ್ಕಳ ತಜ್ಞರಾದ ಡಾ.ಚಂದ್ರನಾಯ್ಕ್ ಅವರು ಹೇಳಿದರು.
ನಗರದ ಚಿತ್ರದುರ್ಗ ರಸ್ತೆಯಲ್ಲಿ ಇರುವ ಚಂದ್ರಪುಷ್ಪ ಮಕ್ಕಳ ಆಸ್ವತ್ರೆಯಲ್ಲಿ 76ನೇ ಸ್ವಾತಂತ್ರೊö್ಯÃತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಣೆ ಶಿಬಿರದಲ್ಲಿ ಮಾತನಾಡಿದರು, ದೇಶವು ಸ್ವಾತಂತ್ರಾö್ಯ ನಂತರದ ಇಷ್ಟು ವರ್ಷಗಳ ಸುದೀರ್ಘ ವರ್ಷಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಅಪೂರ್ವ ಸಾಧನೆ ಮಾಡುತ್ತ ಬಂದಿದೆ. ಸಾಧಿಸಬೇಕಿರುವುದು ಇನ್ನೂ ಇದೆ. ಭವಿಷ್ಯದಲ್ಲಿ ನಾವು ಪ್ರತಿಯೊಬ್ಬರ ಸ್ವಾತಂತ್ರö್ಯ ಹಾಗೂ ಸಮಾನತೆಗೆ ಆದ್ಯತೆ ನೀಡಬೇಕಿದೆ. ಸ್ವಾತಂತ್ರö್ಯ ದಿನಾಚರಣೆಯ ಅಂಗವಾಗಿ ಇಂದು ಆಯೋಜಿಸಿದ ಉಚಿತ ಆರೋಗ್ಯ ತಪಾಸಣೆ ಶಿಬಿರ ಸ್ವಾತಂತ್ರö್ಯ ಹೋರಾಟಗಾರರ ಪ್ರತೀಕವಾಗಿದೆ, ಅಂದು ದೇಶಕ್ಕೆ ತನ್ನ ಪ್ರಾಣವನ್ನೆ ತೆತ್ತ ಅದೆಷ್ಟೋ ವೀರಯೋಧರು ನಮ್ಮ ಮುಂದೆ ಇದ್ದಾರೆ, ಅವರ ಹಾದಿಯಲ್ಲಿ ನಮ್ಮ ಆಸ್ವತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದೆ ಎಂದರು.
ಇನ್ನೂ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿದ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಮಾತನಾಡಿ, ತಾಲೂಕಿನ ಹೆಸರಾಂತ ಮಕ್ಕಳ ತಜ್ಞರಾದ ಡಾ.ಚಂದ್ರನಾಯ್ಕರವರು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿರುವುದು ಸಂಸತ ತಂದಿದೆ, ಪ್ರಸ್ತುತ ಜಗತ್ತಿನ 5ನೇ ಬೃಹತ್ ಆರ್ಥಿಕ ಸದೃಢ ರಾಷ್ಟçವಾಗಿ ಹೊಮ್ಮುತ್ತಿರುವ ದೇಶವನ್ನು ಮುನ್ನಡೆಸಲು ನಾವೆಲ್ಲರೂ ಸಕ್ರಿಯರಾಗಿ ಪಾಲ್ಗೊಂಡಾಗ ಮಾತ್ರವೇ ಆ ಎಲ್ಲ ವೀರಯೋಧರ ತ್ಯಾಗ, ಬಲಿದಾನಕ್ಕೆ ಸಾರ್ಥಕತೆ ಬರುತ್ತದೆ ಎಂದರು.
ಇನ್ನೂ ಡಾ. ಸಿ.ಸಂತೋಷ್‌ನಾಯ್ಕ್ ಮಾತನಾಡಿ, ಹಲವು ಹೋರಾಟಗಾರರ ತ್ಯಾಗ ಬಲಿದಾನದ ಫಲವಾಗಿ ನಾವು ಸ್ವಾಂತAತ್ರö್ಯ ಪಡೆದಿದ್ದೇವೆ. ನಾವು ನಮ್ಮ ವೀರ ಹೋರಾಟಗಾರರಿಗೆ ಚಿರಋಣಿಯಾಗಿರಬೇಕು. ಮಹಾತ್ಮಾ ಗಾಂಧೀಜಿಯವರ ಕರೆಗೆ ಓಗೊಟ್ಟು ವಿವಿಧ ಕ್ಷೇತ್ರಗಳ ಜನತೆ ಭಾಷೆ, ಪ್ರಾಂತ್ಯಗಳ ಭೇದ-ಭಾವವಿಲ್ಲದೆ ಸ್ವಾತಂತ್ರö್ಯ ಹೋರಾಟದ ಚಳುವಳಿಯಲ್ಲಿ ಧುಮುಕಿ ಹೋರಾಡಿ ಸ್ವಾತಂತ್ರö್ಯ ತಂದು ಕೊಟ್ಟರು. ದೇಶದಲ್ಲಿ ನಾವು ಇಂದು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದೇವೆ. ನಮ್ಮ ನಮ್ಮ ಜವಾಬ್ದಾರಿಗಳನ್ನು ಅರಿತು ನಾವು ಮಾಡುವ ಕೆಲಸವನ್ನು ನಿಷ್ಠೆಯಿಂದ ಮಾಡಿ ದೇಶದ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಬಿ.ಟಿ.ರಾಜಣ್ಣ, ಪಿಎಸ್‌ಐ ಕೆ.ಸತೀಶ್ ನಾಯ್ಕ್, ಬಿ.ಪುಷ್ಪಲತಾ, ಸುರೇಖಾಸಿ.ನಾಯ್ಕ್, ಶೃತಿಸಿ.ನಾಯ್ಕ್, ಶೇಖರ್, ರಾಧ ಡವೆಲಪರ್ ಗ್ರೂಪ್ಸ್ ಮಾಲೀಕರಾದ ಅಣ್ಣಪ್ಪ, ಹಾಗೂ ಆಸ್ವತ್ರೆಯ ಸಿಬ್ಬಂದಿ ವರ್ಗ, ಇತರರ ಭಾಗವಹಿಸಿದ್ದರು.