ಚಳ್ಳಕೆರೆ : ತ್ಯಾಗ ಬಲಿದಾನಗಳ ಮೂಲಕ ಸ್ವಾತಂತ್ರö್ಯ ನಮಗೆ ಸಿಕ್ಕಿದೆ ಅಂದಿನಿAದ ಇಂದಿನವರೆಗೆ ಸ್ವಾತಂತ್ರö್ಯ ದಿನಾಚರಣೆಯನ್ನು ಪ್ರತಿ ವರ್ಷವು ಕೂಡ ಆಚರಣೆ ಮಾಡುತ್ತಿದ್ದೆವೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಆವರಣದಲ್ಲಿ ಆಯೊಜಿಸಿದ್ದ 76ನೇ ಸ್ವಾತಂತ್ರö್ಯ ದಿನಾಚರಣೆ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗವÀಹಿಸಿ ಮಾತನಾಡಿದ ಅವರು, ಸ್ವಾತಂತ್ರö್ಯ ದಿನಾಚರಣೆ ಎಂದರೆ ಶಿಸ್ತಿನ ಆಚರಣೆ. ಶಿಸ್ತನ್ನು ಸಂತೋಷವಾಗಿ ಆಚರಿಸುವುದು ಈ ದಿವಸವಾಗಿದೆ, ಆದರೆ ಈ ಭಾರಿ ಶಾಲಾ ಮಕ್ಕಳು ಅತೀ ಹೆಚ್ಚಿನದಾಗಿ ಸೇರಿರುವುದು ಸಂತಸ ತಂದಿದೆ. ಸ್ವಾತಂತ್ರö್ಯ ದಿನಾಚರಣೆಯನ್ನು ಇಂದು ನಾವು ಆಚರಣೆ ಮಾಡುತ್ತಿದ್ದೆವೆ ಬೇರೆ ಬೇರೆ ಜಿಲ್ಲೆಗಿಂತ ನಮ್ಮ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ವಿಶೇಷವಾಗಿ ದಿನಾಚರಣೆ ಆಚರಿಸುತ್ತಿದ್ದೆವೆ,
ಇಂದು ಪ್ರತಿಯೊಬ್ಬರು ವಿದ್ಯಾವಂತರಾಗಬೇಕು. ಶಿಕ್ಷಣ ಎಲ್ಲ ರಂಗದಲ್ಲೂ ಇರಬೇಕು. ಪ್ರತಿಯೊಬ್ಬರಿಗೂ ಅವಕಾಶಗಳು ದೊರೆತು ಪ್ರಾಮಾಣಿಕತೆಯಿಂದ ಅವುಗಳನ್ನು ನಿಭಾಯಿಸುವಂತಾಗಬೇಕು, ಈಡೀ ರಾಜ್ಯಕ್ಕೆೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಚಳ್ಳಕೆರೆ ತಾಲೂಕು ಎರಡನೇ ಸ್ಥಾನ ಪಡೆದುಕೊಂಡಿರುವುದು ಸಂತಸ ತಂದಿದೆ, ಆದರಂತೆ ಶೈಕ್ಷಣಿಕ ಪ್ರಗತಿಯತ್ತ ನಮ್ಮ ಕ್ಷೇತ್ರ ಅಭಿವೃದ್ದಿ ಹಾದಿಯಲ್ಲಿ ಸಾಗುತ್ತಿದೆ ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ ತಹಶೀಲ್ದಾರ್ ರೇಹಾನ್ ಪಾಷ ಸ್ವಾತಂತ್ರö್ಯ ದಿನಾಚರಣೆಗೆ ಅರ್ಥ ಸಿಗಬೇಕಾದರೆ ಆಚರಣೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಂತಹ ಒಂದು ಸುಂದರ ಆಡಳಿತ ಅವಕಾಶವನ್ನು ನಮ್ಮ ಸ್ವಾತಂತ್ರ‍್ಯ ಚಳವಳಿಯ ಹರಿಕಾರರು ನಮಗೆ ಕಟ್ಟಿಕೊಟ್ಟಿದ್ದಾರೆ. ಮಹಾತ್ಮ ಗಾಂಧಿಜೀ, ಅಂಬೇಡ್ಕರ್, ಬಾಲ್‌ಗಂಗಾಧರ್ ತಿಲಕ್, ನೆಹರು, ಕಿತ್ತೂರು ರಾಣಿ ಚೆನ್ನಮ್ಮ, ಜಾನ್ಸಿ ರಾಣಿ ಲಕ್ಷಿö್ಮ ಬಾಯಿ, ಈಗೇ ಅನೇಕ ಮಹಾನಿಯರು ಸ್ವಾತಂತ್ರö್ಯ ತಂದು ಕೊಟ್ಟ ದಿಮಂತ ವ್ಯಕ್ತಿಗಳ ನೆನೆಯುವ ಸುದೀನವಾಗಬೇಕಿದೆ. ಇಂತಹ ದಿಗ್ಗಜರುಗಳ ಹೆರುಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಅದು ಭಾರತದಷ್ಟೇ ಬೃಹತ್ ಪಟ್ಟಿಯಾಗುತ್ತದೆ. ಅವರ ಬೆವರು ಮತ್ತು ರಕ್ತ ತರ್ಪಣಗಳಿಂದಾಗಿಯೇ ಇವತ್ತು ನಾವು ಸಮೃದ್ಧ ಮತ್ತು ಶಾಂತಿಯುತ ಜೀವನ ನಡೆಸುವಂತಾಗಿದೆ. ಸಾಮರಸ್ಯದ ನಡೆಗೆ ಪ್ರೇರಣೆಯಾಗಿದೆ . ಜಗತ್ತಿನ ಜನ ಹುಬ್ಬೇರಿಸುವಂತೆ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯವಾಗಿದೆ . ಮೊದಲ ಸ್ವಾತಂತ್ರೋತ್ಸವದ ತ್ರಿವರ್ಣ ಧ್ವಜವನ್ನು ಹಾರಿಸುವ ಗಳಿಗೆಯವರೆಗೆ ನಡೆದ ಎಲ್ಲ ಘಟನೆಗಳೂ, ಪ್ರಯತ್ನಗಳೂ ರಾಷ್ಟ್ರೀಯ ಚಳವಳಿಯ ಭಾಗಗಳೇ ಆಗಿವೆ. ಸ್ವಾತಂತ್ರ‍್ಯ ಹೋರಾಟದ ಕಾಲಗತಿಯಲ್ಲಿ ಹುತಾತ್ಮ, ಮಹಾತ್ಮರುಗಳು ಮಾಡಿರುವ ತ್ಯಾಗ ಬಲಿದಾನಗಳು ಜನಮಾನಸದಿಂದ ಮರೆಯಾಗದಂತೆ ನೋಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ರಾಘವೇಂದ್ರ, ರಮೇಶ್ ಗೌಡ, ಜಯಣ್ಣ, ಸುಮಕ್ಕ, ಮಂಜುಳಾ, ವಿಶುಕುಮಾರ್, ಕೆ.ವೀರಭದ್ರಪ್ಪ, ವಿಜಯಲಕ್ಷಿö್ಮÃ, ನಿರ್ಮಲ, ಪ್ರಕಾಶ್‌ವೈ, ಕವಿತಾ, ಶಿವಕುಮಾರ್, ಸುಜಾತ್, ನಾಗಮಣಿ, ಚಳ್ಳಕೆರೆಪ್ಪ, ಗಾಯಕ ಮುತ್ತುರಾಜ್, ತಾಪಂ.ಪ್ರಭಾರ ಇಓ.ಸಂತೋಶ್ ಕುಮಾರ್, ಡಿವೈಎಸ್‌ಪಿ ಬಿ.ಟಿ.ರಾಜಣ್ಣ, ವೃತ್ತ ನಿರೀಕ್ಷಕ ಸಮಿವುಲ್ಲಾ, ಇನ್ಸೆಪೆಕ್ಟೆರ್ ದೇಸಾಯಿ, ಪ್ರಭಾರ ಪೌರಾಯುಕ್ತ ವಿನಯ್, ಬಿಇಓ.ಕೆ.ಎಸ್.ಸುರೇಶ್, ಇತರರು ಇದ್ದರು.
ವಿವಿಧ ಕ್ಷೇತ್ರದಲ್ಲಿ ಅವಿರತ ಸಾಧನೆ ಮಾಡಿದ ವಿವಿಧ ಗಣ್ಯರನ್ನು ಸನ್ಮಾನ ಮಾಡಲಾಯಿತು.
ಪೊಟೋ, 1.ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ ಪ್ರೌಡಶಾಲಾ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ 76ನೇ ಸ್ವಾತಂತ್ರö್ಯ ದಿನಾಚರಣೆಯಲ್ಲಿ ಶಾಸಕ ಟಿ.ರಘುಮೂರ್ತಿ ಮಾತನಾಡಿದರು.
ಪೊಟೋ,2 ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ ಪ್ರೌಡಶಾಲಾ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ 76ನೇ ಸ್ವಾತಂತ್ರö್ಯ ದಿನಾಚರಣೆಯಲ್ಲಿ ವಿವಿಧ ಸಾಧಕರಿಗೆ ಸನ್ಮಾನ ಮಾಡಿದರು.
ಪೊಟೋ,3 ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ ಪ್ರೌಡಶಾಲಾ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ 76ನೇ ಸ್ವಾತಂತ್ರö್ಯ ದಿನಾಚರಣೆಯಲ್ಲಿ ತೆರೆದ ಜೀಪಿನಲ್ಲಿ ಸಾಂಸ್ಕೃತಿಕ ತಂಡಗಳನ್ನು ಶಾಸಕ ಟಿ.ರಘುಮೂರ್ತಿ ವಿಕ್ಷಿಸಿದರು.

Namma Challakere Local News

You missed

error: Content is protected !!