ನಾಯಕನಹಟ್ಟಿ:: ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯ ಶುಕ್ರವಾರ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆಯಿತು.
ಎಸ್ ಸಿ ಅನುಸೂಚಿತ ಮಹಿಳೆಗೆ ಅಧ್ಯಕ್ಷ ಸ್ಥಾನ ಮತ್ತು ಸಾಮಾನ್ಯ ಅನುಸೂಚಿತ ಮಹಿಳೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾಗಿದ್ದು
ಅಧ್ಯಕ್ಷ ಸ್ಥಾನಕ್ಕೆ ಎಸ್ ಅನಿತಾ ರವಿಕುಮಾರ್ ಮತ್ತು ರಾಧಮ್ಮ ನಾಮಪತ್ರ ಸಲ್ಲಿಸಿದ್ದರು.
ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಲಕ್ಷ್ಮಿ ಮಹಾದೇವಪ್ಪ ಮತ್ತು ಟಿ ಅಶೋಕ್
ನಾಮಪತ್ರ ಸಲ್ಲಿಸಿದರು..
ಗ್ರಾಮ ಪಂಚಾಯತಿಯ ಒಟ್ಟು ಸಂಖ್ಯೆ 18 ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಎಸ್ ಅನಿತಾ ರವಿಕುಮಾರ್ 19 ಮತ ರಾಧಮ್ಮ 8 ಮತಗಳು
ಎಸ್ ಅನಿತಾ ರವಿಕುಮಾರ್ ಅವರು 19 ಮತಗಳನ್ನು ಪಡೆದು ಜಯಗಳಿಸಿದರು.
ಮತ್ತು ಉಪಾಧ್ಯಕ್ಷರಾಗಿ ಸ್ಥಾನಕ್ಕೆ ಲಕ್ಷ್ಮೀದೇವಿ ಮಹಾದೇವಪ್ಪ ಮತ್ತು ಟಿ ಅಶೋಕ್ ನಾಮಪತ್ರ ಸಲ್ಲಿಸಿದ ಕಾರಣ
ಟಿ. ಅಶೋಕ್ ಏಳು ಮತಗಳು ಲಕ್ಷ್ಮಿ ಮಹದೇವಪ್ಪ 11 ಮತಗಳನ್ನು ಪಡೆದು ಜಯಗಳಿಸಿದರು ಎಂದು ಚುನಾವಣಾ ಅಧಿಕಾರಿ ಕೃಷಿ ನಿರ್ದೇಶಕ ಅಶೋಕ್ ತಿಳಿಸಿದ್ದಾರೆ..
ಇದೇ ವೇಳೆ ನೂತನ ಅಧ್ಯಕ್ಷೆ ಎಸ್ ಅನಿತಾ ರವಿಕುಮಾರ್ ಮಾತನಾಡಿ ನಮ್ಮ ಗ್ರಾಮ ಪಂಚಾಯತಿಯ ಸರ್ವತೋಮುಖ ಅಭಿವೃದ್ಧಿ ಮಾಡುವ ಗುರಿ ಬಂದಿದ್ದೇನೆ ಕುಡಿಯುವ ನೀರು ಸ್ವಚ್ಛತೆ ಚರಂಡಿ ಕ್ಲೀನಿಂಗ್ ಹೀಗೆ ಸರ್ವ ಜನಾಂಗದ ವಿಶ್ವಾಸದಲ್ಲಿ ಗ್ರಾಮ ಪಂಚಾಯತಿಯನ್ನು ಅಭಿವೃದ್ಧಿಪಥದತ್ತ ಕೊಂಡಿದ್ದೇನೆ ಎಂದು ಮಾಧ್ಯಮದೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನೂತನ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣ, ಬಾಲರಾಜ್, ಪ್ರಭುಸ್ವಾಮಿ, ತಿಪ್ಪೇಸ್ವಾಮಿ ಕೋಟೆಪ್ಪ, ಪರಮೇಶ್ ಅಭಿನಂದನೆ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷ ಎಸ್ ಅನಿತಾ ರವಿಕುಮಾರ್, ಉಪಾಧ್ಯಕ್ಷೆ ಲಕ್ಷ್ಮಿ ಮಹಾದೇವಪ್ಪ, ಸದಸ್ಯರಾದ ರಾಮಸಾಗರ ಎಂ ತಿಪ್ಪೇಸ್ವಾಮಿ, ಓ. ಓಬಣ್ಣ ಬಂಡೆ ಕಪಿಲೆ, ಕೆ ಎಸ್ ಮಂಜಣ್ಣ, ಪಾಲಮ್ಮ ಜಿ ಬೋರಯ್ಯ, ಟಿ ಅಶೋಕ್, ಡಿ ರೇವಣ್ಣ, ಡಿ ಎನ್ ಶೈಲಾ, ಜಿಎಸ್ ವಿಜಯ್ ಕುಮಾರ್, ಕೆ ತಿಪ್ಪೇಸ್ವಾಮಿ, ರಾಧಮ್ಮ, ಶಾಂತಮ್ಮ, ಪ್ರೇಮಲತಾ, ಬಸಕ್ಕ ತಿಪ್ಪೇಸ್ವಾಮಿ, ಮಲ್ಲಮ್ಮ ಕಾಮಯ್ಯ, ಸೋಮಶೇಖರ್, ಗೀತಮ್ಮ,
ಸೇರಿದಂತೆ ರಾಮಸಾಗರ ಯುವ ನಾಯಕ ಪಿ ಪಿ ಮಹಾಂತೇಶ್ ನಾಯಕ, ತಿಮ್ಮಪ್ಪಯ್ಯನಹಳ್ಳಿ ಚಿರು, ಪಿಡಿಓ ಆರ್ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಆರ್ ಸಂತೋಷ್, ನಾಗರಾಜ್ ನಾಯ್ಕ, ಕ್ಲಾಕ್ ತಿಪ್ಪೇಸ್ವಾಮಿ, ತಿಮ್ಮಪ್ಪಯ್ಯನಹಳ್ಳಿ ಗ್ರಾಮಸ್ಥರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಮಸ್ತ ವಿವಿಧ ಹಳ್ಳಿಗಳ ಗ್ರಾಮಸ್ಥರು ಇದ್ದರು