ಪಟ್ಟಣದ
ಯೋಜನಾ ಕಚೇರಿ ವ್ಯಾಪ್ತಿಯ ನಾಯಕನಹಟ್ಟಿ ವಲಯದ ನಾಯಕನಹಟ್ಟಿ ::
ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರಮಠದ ದೇವಸ್ಥಾನದ ಆವರಣದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಅಣ್ಣಪ್ಪ ಭಾಗವಹಿಸಿ
ಶ್ರೀ ಕ್ಷೇತ್ರ ಧರ್ಮಸ್ಥಳ ದೇಶದಲ್ಲಿ ಅತಿ ದೊಡ್ಡ ಧಾರ್ಮಿಕ ಕೇಂದ್ರ ಎಂದರೆ ತಪ್ಪಾಗಲಾರದು ಇಂತಹ ಅತಿ ದೊಡ್ಡ ಧಾರ್ಮಿಕ ಕೇಂದ್ರ ಸ್ವಚ್ಛತೆಯಲ್ಲೂ ಕೂಡ ವಿಶ್ವಕ್ಕೆ ಮಾದರಿಯ ಧಾರ್ಮಿಕ ಕೇಂದ್ರ ಪ್ರತಿನಿತ್ಯ ಕ್ಷೇತ್ರಕ್ಕೆ ಅಸಂಖ್ಯಾತ ಭಕ್ತರು ಭೇಟಿ ನೀಡಿ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ.
ಇಂದಿನ ಒತ್ತಡದಿಂದ ಮುಕ್ತ ರಾಗ ಬೇಕಿದ್ದರೆ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಧ್ಯಾನ ಜಪ ಮತ್ತಿತರ ಧಾರ್ಮಿಕ ಕೆಲಸಗಳನ್ನು ಮಾಡುವುದರಿಂದ ಸ್ವಲ್ಪಮಟ್ಟಿಗೆ ನಮ್ಮ ಮನಸ್ಸಿಗೆ ನೆಮ್ಮದಿಯನ್ನ ತಂದುಕೊಳ್ಳಬಹುದೆಂದು ತಿಳಿಸಿದರು ವರ್ಷದಲ್ಲಿ ಎರಡು ಬಾರಿ ಸ್ವಾತಂತ್ರೋತ್ಸವದ ಪ್ರಯುಕ್ತ ಹಾಗೂ ಮಕರ ಸಂಕ್ರಮಣದೊಂದು ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನ ಎರಡು ಬಾರಿ ಸ್ವಚ್ಛತೆ ಮಾಡಲಾಗುವುದು ಪ್ರತಿವರ್ಷದಂತೆ ಈ ವರ್ಷವೂ ಸುಮಾರು 70 ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನ ಈಗಾಗಲೇ ಸ್ವಚ್ಛತೆ ಮಾಡಲಾಗಿದೆ ಎಂಬುದರ ಕುರಿತು ಮಾಹಿತಿ ನೀಡಿದರು ಹಾಗೆಯೇ ಯೋಜನೆಯ ಸಮಾಜಮುಖಿ ಕಾರ್ಯಕ್ರಮಗಳಾದ ಜನ ಮಂಗಲ, ಸುಜ್ಞಾನ ನಿಧಿ ಶಿಷ್ಯವೇತನ, ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ನಿರ್ಗತಿಕರ ಮಾಶಾಸನ,ಕಿಟ್ ವಿತರಣೆ , ನಮ್ಮ ಸ್ವಯಿಚ್ಛೆಯಿಂದ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನ ಸ್ವಚ್ಛತೆಯಾಗಿಟ್ಟುಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರದ್ದು ಎಂದು ತಾಲೂಕು ಯೋಜನಾಧಿಕಾರಿ ಅಣ್ಣಪ್ಪ ತಿಳಿಸಿದರು.
ಜಿಲ್ಲಾ ಆಪ್ ಕಮ್ ಸಂಸ್ಥೆಯ ಅಧ್ಯಕ್ಷರಾದ ಎಂ ವೈ ಟಿ ಸ್ವಾಮಿ ಅವರು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆಯುವ ಮಧ್ಯವರ್ಜನ ಶಿಬಿರದ ಕುರಿತು ಮೆಚ್ಚುಗೆಯ ಮಾತುಗಳ ನಾಡಿದರು ಹಾಗೆಯೇ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತೆ ನಮ್ಮೆಲ್ಲರ ಜವಾಬ್ದಾರಿ ವಿಶೇಷವಾಗಿ ಮಹಿಳೆಯರು ಇವತ್ತು ಸ್ವ ಸಹಾಯ ಸಂಘಗಳ ಮೂಲಕ ತಮ್ಮ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವಲ್ಲಿ ಸಾಲ ಪಡೆದು ಸ್ವ ಉದ್ಯೋಗ ಮಾಡುತ್ತಿರುವುದು ಉತ್ತಮವಾದ ವಿಚಾರ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ ಎಂ ಶಿವಸ್ವಾಮಿ ಮಾತನಾಡಿ ಗ್ರಾಮದ ಅಭಿವೃದ್ಧಿಗೆ ಯೋಜನೆಯಿಂದ ಹಾಲಿನ ಸೊಸೈಟಿಗಳಿಗೆ ಹಾಗೂ ಮಹಿಳೆಯರು ಈ ಹಿಂದೆ ನಾಲ್ಕು ಗೋಡೆಗಳ ಮಧ್ಯೆ ಜೀವನ ಸಾಗಿಸುವುದರ ಮರೆತಾಗಿ ಬೇರೆ ಬೇರೆ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಪಿ ಬಿ ತಿಪ್ಪೇಸ್ವಾಮಿ, ಶ್ರೀಮತಿ ಶ್ವೇತಾ, ದೇವಸ್ಥಾನದ ಆಡಳಿತ ಸದಸ್ಯರಾದ ಶ್ರೀಮತಿ ಮಲ್ಲಮ್ಮ, ಪಟ್ಟಣ ಪಂಚಾಯಿತಿ ಸದಸ್ಯರಾದ ಶ್ರೀಮತಿ ವಿನುತಾ, ಪತ್ರಿಕಾ ವರದಿಗಾರರಾದ ಕೆ ಟಿ ಓಬಳೇಶ್, ಭಾಗವಹಿಸಿದ್ದರು ವಲಯ ಮೇಲ್ವಿಚಾರಕರು ಸಂತೋಷ ,ಸೇವಾ ಪ್ರತಿನಿಧಿಗಳ ಶೋಭಾ ಜ್ಯೋತಿ ಅಶ್ವಿನಿ ಹಾಗೂ ಪ್ರಗತಿ ಬಂದ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಸದಸ್ಯರು ಭಾಗವಹಿಸಿದ್ದರು