ಜೋಗಿಹಟ್ಟಿ ಗ್ರಾಮದ ವೃದ್ಧ ಕೋರಿ ಮಲ್ಲಪ್ಪ 65 ವರ್ಷ ಕಾಣೆ
ನಾಯಕನಹಟ್ಟಿ ::ಸಮೀಪದ ಜೋಗಿಹಟ್ಟಿ ಗ್ರಾಮದ ವೃದ್ಧ ಕೋರಿ ಮಲ್ಲಪ್ಪ ದಿನಾಂಕ 14.05.2023ರ ಬೆಳಿಗ್ಗೆ 8.30 ಗಂಟೆ ಸಮಯದಲ್ಲಿ ತನ್ನ ಮಗಳು ಸಾಕಮ್ಮನವರ ಊರಾದ ಜಗಳೂರು ತಾಲೂಕು ಮುಸ್ಟೂರಹಳ್ಳಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಜೋಗಿ ಹಟ್ಟಿ ಗ್ರಾಮದಿಂದ ಹೊರಟುಹೋಗಿದ್ದ ಕೋರಿ ಮಲ್ಲಪ್ಪ ಮನೆಗೆ ಹಿಂತಿರುಗಿ ಬಂದಿರುವುದಿಲ್ಲ .
ಕಳೆದ ಎರಡು ತಿಂಗಳಿನಿಂದ ತಂದೆಗಾಗಿ ಮಕ್ಕಳು ಸಮಾಧಿಕರು ಎಲ್ಲಾ ಕಡೆ ಹುಡುಕಿದರೂ ಸಿಕ್ಕಿಲ್ಲ ಮಕ್ಕಳು ಹಾಗೂ ಸಂಬಂಧಿಕರು ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಯಾರಿಗಾದರೂ ಸಿಕ್ಕಲ್ಲಿ ನಾಯಕನಹಟ್ಟಿ ಪೊಲೀಸ್ ಠಾಣೆಯ ಮೊಬೈಲ್ ಸಂಖ್ಯೆ ಪಿ ಎಸ್ ಐ ಮೊಬೈಲ್ ಸಂಖ್ಯೆ 9480803158
ಠಾಣೆಯ ಲ್ಯಾಂಡ್ ಫೋನ್ ನಂಬರ್ 80190-207408 ಸಂಪರ್ಕಿಸಲು ಕೋರಲಾಗಿದೆ.
ಕಾಣೆಯಾದ ವ್ಯಕ್ತಿಯ ಹೆಸರು ಕೋರಿ ಮಲ್ಲಪ್ಪ ತಂದೆ ನಿಂಗಪ್ಪ 65 ವರ್ಷ ಆದಿ ಕರ್ನಾಟಕ ಜನಾಂಗದ ಹಳೆ ಜೋಗಿಹಟ್ಟಿ ಗ್ರಾಮದ ಚಳ್ಳಕೆರೆ ತಾಲೂಕು ಸುಮಾರು 5 ಅಡಿ ಎತ್ತರವಿರುತ್ತಾರೆ. ಕಪ್ಪು ಬಣ್ಣ ಸಾಧಾರಣ ಮೈಕಟ್ಟು ತಲೆಯಲ್ಲಿ ಬಿಳಿ ಕೂದಲು ಇದ್ದು ಮುಖದ ಮೇಲೆ ಗೋಧಿ ಕಾಳು ಗಾತ್ರದ ಅಲ್ಲಲ್ಲಿ ಕಪ್ಪದೆಯಾ ಮಚ್ಚೆಗಳು ಇರುತ್ತವೆ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ ಮನೆಯಿಂದ ಹೋಗುವಾಗ ಬಿಳಿ ಅಂಗಿ ಬಿಳಿ ಪಂಚೆ ಧರಿಸಿರುತ್ತಾರೆ.