ಚಳ್ಳಕೆರೆ : ರಾಜ್ಯದಲ್ಲಿರುವ ಗ್ರಾಮ ಪಂಚಾಯತಿಗಳ ಗ್ರಂಥಾಲಯಗಳನ್ನು
ಮಕ್ಕಳ ಸ್ನೇಹಿ ಗ್ರಂಥಾಲಯವನ್ನಾಗಿ ಮಾಡಲು ರಾಜ್ಯ ಸರಕಾರ ಆದೇಶದ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಮೂರು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಅದರಂತೆ ಚಳ್ಳಕೆರೆ ತಾಲೂಕಿನ ಸುಮಾರು ನಲವತ್ತು ಗ್ರಾಮ ಪಂಚಾಯತಿಗಳಲ್ಲಿ ಇರುವ ಗ್ರಂಥಾಲಯಗಳನ್ನು ಮಕ್ಕಳ ಸ್ನೇಹಿ ಗ್ರಂಥಾಲಯಗಳನ್ನಾಗಿ ಮಾಡಲು ತಾಲ್ಲೂಕು ಪಂಚಾಯತ ಸಾಮರ್ಥ ಸೌಧದಲ್ಲಿ ಇಂದು ವಿಡಿಯೋ ಕಾನ್ಪ್ ರೆನ್ಸ್ ಮೂಲಕ ತರಬೇತಿ ಕಾರ್ಯಗಾರದಲ್ಲಿ ಗ್ರಂಥಾಲಯ ಮೇಲ್ವಿಚಾರಕರು ಭಾಗವಹಿಸಿದ್ದರು.
ಇನ್ಮೂ ಈ ಸಂಬಂಧ ಕುರಿತು ಎಸ್ ಡಿಆರ್ ತರಬೇತಿ ಸಂಯೋಜಕ ಮಂಜುನಾಥ್ ಮಾಧ್ಯಮ ದೊಟ್ಟಿಗೆ ಮಾತನಾಡಿದ್ದರು.