ಚಿತ್ರದುರ್ಗ : ಚಿತ್ರದುರ್ಗ ಬಡಾವಣೆ ಪೊಲೀಸರಿಂದ ಅಪಹರಣ ಮತ್ತು ಸುಲಿಗೆಕೋರರ ಬಂಧನ,
ಲಕ್ಷಾಂತರ ಮೌಲ್ಯದ ನಗದು ಮತ್ತು ಬಂಗಾರ ಮತ್ತು ಬೆಳ್ಳಿ ಆಭರಣಗಳ ವಶ
ಚಿತ್ರದುರ್ಗ ನಗರದ ಬ್ಯಾಂಕ್ ಕಾಲೋನಿಯ ಸೇತುರಾಂ ಮನೆಯ ಬಳಿ ಅಹೋಬಲ ಲೇಔಟ್ ನಲ್ಲಿರುವ ಆಶಿಯಾನ ಹೆಸರಿನ ವಾಸದ ಮನೆಯಲ್ಲಿ ನಜೀರ್ ಅಹಮದ್ ಇಬ್ರಾಹಿಂಸಾಬ್ ರವರು ಜುಲೈ.೦೮ ರಂದು ಬೆಳಗ್ಗೆ ಸುಮಾರು ೦೯:೨೦ ಪಿಎಂ ಸಮಯದಲ್ಲಿ ತನ್ನ ಕುಟುಂಬದವರೊAದಿಗೆ ಮನೆಯಲ್ಲಿರುವಾಗ ಸದರಿ ಮನೆಯಲ್ಲಿ ಸುಲಿಗೆ ಮಾಡುವ ಉದ್ದೇಶದಿಂದ ಯಾರೋ ಮೂರು ಜನ ದುಷ್ಕರ್ಮಿಗಳು ಕೈಯಲ್ಲಿ ಮಾರಕಾಸ್ತçಗಳನ್ನು ಹಿಡಿದುಕೊಂಡು ನಜೀರ್ ಅಹಮದ್ ರವರ ಮನೆಗೆ ನುಗ್ಗಿ ಮನೆಯಲ್ಲಿದ್ದ ನಜೀರ್ ಅಹಮದ್ ಮತ್ತು ಆತನ ಕುಟುಂಬದವರನ್ನು
ಹೆದರಿಸಿ, ೫೦ ಲಕ್ಷ ಹಣಕ್ಕಾಗಿ ಬೇಡಿಕೆಯನ್ನಿಟ್ಟು ಮನೆಯ ಬೆಡ್ ರೂಂನಲ್ಲಿ ಅಕ್ರಮವಾಗಿ ಕೂಡಿ ಹಾಕಿ ಮನೆಯಲ್ಲಿದ್ದ ಬಂಗಾರದ ಆಭರಣಗಳನ್ನು ಸುಲಿಗೆ ಮಾಡಿ, ಹಣಕ್ಕಾಗಿ ಬೇಡಿಕೆಯನ್ನಿಟ್ಟು ಮನೆಯಲ್ಲಿದ್ದ ಸಮೀರ್ ಅಹಮದ್ ಮತ್ತು ಷಾಜಹಾನ್ ರವರನ್ನು ತಮ್ಮ ಬಳಿ ಇದ್ದ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ, ೫೦ ಲಕ್ಷ ಹಣವನ್ನು ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಮೊ.ನಂ. ೯೩/೨೦೨೩ ಕಲಂ. ೩೬೩, ೩೬೪(ಂ), ೩೯೪, ೩೯೭ ಐಪಿಸಿ& ಸೆಕ್ಷನ್.೨೫(೧), (ಎ) ಆರಂಮ್ಸ್ ಆಕ್ಟ್-೧೯೫೯ ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣದಲ್ಲಿನ ಸುಲಿಗೆಕೋರರು ಮತ್ತು ಅಪಹರಣಕಾರರ ಪತ್ತೆ ಸಲುವಾಗಿ ಪೊಲೀಸ್ ಅಧೀಕ್ಷಕರಾದ ಕೆ.ಪರುಶರಾಮ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಎಸ್.ಜೆ.ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ, ಅನಿಲ್‌ಕುಮಾರ್.ಹೆಚ್.ಆರ್, ಡಿ.ವೈ.ಎಸ್.ಪಿ ಚಿತ್ರದುರ್ಗ ಉಪವಿಭಾಗರವರ ನೇತೃತ್ವದಲ್ಲಿ ನಯೀಂ ಅಹಮದ್, ಪೊಲೀಸ್ ವೃತ್ತನಿರೀಕ್ಷಕರು, ಬಡಾವಣೆ ವೃತ್ತ, ರಘು, ಪಿಎಸ್‌ಐ, ಬಡಾವಣೆ ಪೊಲೀಸ್ ಠಾಣೆ ಮತ್ತು ಸಿಬ್ಬಂದಿ ಯವರನ್ನು ಒಳಗೊಂಡ ತಂಡ ರಚಿಸಿದ್ದು, ಸದರಿ ತಂಡವು
ಆರೋಪಿತರಾದ
ಸಮ್ಮು ಸುಮಾರು ೩೮ ವರ್ಷ, ಕಾರು ಚಾಲಕವೃತ್ತಿ, ಚೋಳನಾಯಕನಹಳ್ಳಿ, ಚಾಮುಂಡಿ ನಗರ, ಆರ್.ಟಿ.ನಗರ, ಮಹಮ್ಮದ್ ಸಾಕೀಬ್ ಆಲಂ ತಂದೆ ಮಹಮ್ಮದ್ ವಾಜುದ್ದೀನ್, ಸುಮಾರು ೩೭ ವರ್ಷ, ಬಟ್ಟೆ ವ್ಯಾಪಾರ,
ಜುಲೈ.೧೧ ರಂದು ದಸ್ತಗಿರಿ ಮಾಡಿದ್ದು, ಸದರಿ ಆರೋಪಿತರಿಂದ ಸುಮಾರು ೪೮,೫೩,೯೦೦ ರೂಪಾಯಿ ನಗದು ಹಣ, ೧೮೫.೬೦೦ ಗ್ರಾಂ ತೂಕದ ಅಂದಾಜು ೯,೨೮,೦೦೦ ರೂಪಾಯಿ ಬೆಲೆ ಬಾಳುವ ವಿವಿಧ ನಮೂನೆಯ ಬಂಗಾರದ ಆಭರಣಗಳು, ೩೪೫ ಗ್ರಾಂ ತೂಕದ ಅಂದಾಜು ೭೪,೧೫೦ ರೂಪಾಯಿ ಬೆಲೆ ಬಾಳುವ ವಿವಿಧ ನಮೂನೆಯ ಬೆಳ್ಳಿಯ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ ನಕಲಿ ನಂಬರ್ ಪ್ಲೇಟ್ ಇರುವ ಅಂದಾಜು ೭,೩೦,೦೦೦/-ರೂ. ಬೆಲೆ ಬಾಳುವ ಕಾರು,
೫) ಹಿರಿಯೂರು ನಗರ ಠಾಣೆ ಮೊ.ನಂ.೧೭೨/೨೦೨೩ ಕೇಸಿಗೆ ಸಂಬAದಿಸಿದ ೭೬೨ ಗ್ರಾಂ ತೂಕದ ಅಂದಾಜು ೫೩,೩೪೦ ರೂಪಾಯಿ ಬೆಲೆ ಬಾಳುವ ವಿವಿಧ ನಮೂನೆಯ ಬೆಳ್ಳಿ-ಆಭರಣಗಳನ್ನು ಅಮಾನತ್ತುಪಡಿಸಿಕೊಂಡಿದ್ದು ಒಟ್ಟು ೬೬,೩೯,೩೯೦ ರೂಪಾಯಿ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿರುತ್ತೆ.
ಜುಲೈ.೧೭ ರಂದು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಸನ್ನಕುಮಾರ ಸು.೩೮ ವರ್ಷ, ಬಟ್ಟೆ ಗಾರ್ಮೇಂಟ್ ನಲ್ಲಿ ಹೆಲ್ಪರ್ ಕೆಲಸ, ಬೆಂಗಳೂರು ಆರೋಪಿತನಿಂದ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಮತ್ತು ಆಯುಧ, ಪ್ರಕರಣಕ್ಕೆ ಸಂಬAದಿಸಿದ ಹಣವನ್ನು ಅಮಾನತ್ತು ಪಡಿಸಿಕೊಳ್ಳಬೇಕಾಗಿರುತ್ತೆ.
ಆರೋಪಿತರು ಹಿರಿಯೂರು ನಗರ ಠಾಣೆ, ಬೆಂಗಳೂರು ಪುಟ್ಟೇನಹಳ್ಳಿ ಪೊಲೀಸ್ ಠಾಣೆ, ಪ್ರಕರಣದಲ್ಲಿ ಬಾಗಿಯಾಗಿರುತ್ತಾರೆ.
ಈ ಪ್ರಕರಣದ ಪತ್ತೆ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.