ಚಳ್ಳಕೆರೆ : 2023 -24ನೇ ಶೈಕ್ಷಣಿಕ ಸಾಲಿಗೆ ಸೂಕ್ತ ಕೋರ್ಸ್ ಬೇಡಿಕೆ ಇರುವ ವಿಷಯವನ್ನು ಆಯ್ಕೆ ಮಾಡಿಕೊಳ್ಳುವಂತೆ ಇಲಾಖೆಯು ಕಾಲೇಜಿನ ಅಭಿಪ್ರಾಯವನ್ನು ಕೇಳಲಾಗಿತ್ತು.
ಅದರಂತೆ ನಗರದ ಹೆಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 2023- 24ನೇ ಸಾಲಿನಲ್ಲಿ ಹೊಸ ಕೋರ್ಸ್ಗೆ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು ಅನುಮೋದನೆ ನೀಡಿದೆ. ಜುಲೈ 12ರಂದು ಇಲಾಖೆಯಿಂದ ಕಾಲೇಜಿನಲ್ಲಿ ಬಿಸಿಎ ಪದವಿ ಅಧ್ಯಯನಕ್ಕೆ ಅನುಮತಿ ಸಿಕ್ಕಿದೆ.

ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರು ಮತ್ತು ಅಧ್ಯಾಪಕರ ಸಲಹೆ ಸೂಚನೆಯ ಮೇರೆಗೆ ಮೊಟ್ಟಮೊದಲ ಬಾರಿಗೆ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್(ಬಿಸಿಎ) ಎಂಬ ವಿನೂತನ ವಿಷಯವನ್ನು ಬೋಧಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಕಾಲೇಜಿಗೆ 120 ಸೀಟುಗಳ ಬಿಸಿಎ ಕೋರ್ಸ್ ತೆರೆಯಲು ಅನುಮತಿ ನೀಡಿದೆ. ಈಗಾಗಲೇ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ದೈಹಿಕಶಿಕ್ಷಣ ಪದವಿ ಸೇರಿದಂತೆ ಹಲವು ಕೋರ್ಸ್ಗಳಿಗೆ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಾತಿಯನ್ನು ಪಡೆದಿದ್ದಾರೆ. ಇಂದಿನಿAದ ಬಿಸಿಎ ಕೋರ್ಸ್ ಪ್ರವೇಶಾತಿಯನ್ನು ನೀಡಲಾಗುವುದು ಆಸಕ್ತ ವಿದ್ಯಾರ್ಥಿಗಳು ಕಾಲೇಜಿನ ಕಚೇರಿ ವೇಳೆಯಲ್ಲಿ ಬಂದು ಅರ್ಜಿಯನ್ನು ಪಡೆದು ಪ್ರವೇಶಾತಿ ಶುಲ್ಕವನ್ನು ಪಾವತಿಸಿ ಪ್ರವೇಶ ಪಡೆಯಬಹುದು.
ಈ ಸಂಬAಧ ಕಾಲೇಜಿನ ಪ್ರಾಚಾರ್ಯ ಡಾ.ಆರ್.ರಂಗಪ್ಪ, “ ಮೊದಲಬಾರಿಗೆ ನಮ್ಮ ಕಾಲೇಜಿಗೆ ಬಿಸಿಎ ಕೋರ್ಸ್ಗೆ ಅನುಮೋಧನೆ ದೊರೆತಿದೆ. ಈಹಿಂದೆ ಈ ಕೋರ್ಸ್ ಕಲಿಯಲು ನೂರಾರು ವಿದ್ಯಾರ್ಥಿಗಳು ಬೆಂಗಳೂರು, ತುಮಕೂರು, ಶಿವಮೊಗ್ಗ, ಮೈಸೂರಿನ ಭಾಗಗಳಿಗೆ ತೆರಳಬೇಕಿತ್ತು. ಇದನ್ನು ಅರಿತು ನಮ್ಮ ಗ್ರಾಮೀಣ ಬಾಗದ ಮಕ್ಕಳಿಗೂ ಈ ಕೋರ್ಸ್ ಕಲಿಯಲು ಸಹಕಾರಿಯಾಗಬೇಕು ಎಂದು ಅರಿತು ಬಿಸಿಎ ಕೋರ್ಸ್ಗೆ ಬೇಡಿಕೆ ಸಲ್ಲಿಸಲಾಗಿತ್ತು. ನಮ್ಮ ಬೇಡಿಕೆಯನ್ನು ಮಾನ್ಯ ಮಾಡಿರುವ ಇಲಾಖೆಯು 120ಸೀಟ್‌ಗಳಿಗೆ ಅನುಮೋಧನೆ ನೀಡಿರುವುದು ಸಂತಸದ ಸಂಗತಿಯಾಗಿದೆ. ಅಷ್ಟೆಅಲ್ಲದೆ ಬಿಸಿಎ ಕೋರ್ಸ್ ಬೋಧನೆಗೆ ಅಗತ್ಯವಾದ ಹೊಸ ಕೊಠಡಿಗÀಳು, ಸುಸಜ್ಜಿತವಾದ ಕಂಪ್ಯೂಟರ್‌ಲ್ಯಾಬ್, ಗ್ರಂಥಾಲಯದಲ್ಲಿ ಪುಸ್ತಕಗಳ ಲಭ್ಯತೆ, ಇಂಟರ್ನೆಟ್, ಅತ್ಯಂತ ವೇಗದ ಉಚಿತ ವೈಫೈ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗೂ ನುರಿತ ಬೋಧಕರು ಗಣಕಶಾಸ್ತ್ರ ವಿಭಾಗದಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದು, ಅಗತ್ಯವಿದ್ದರೆ ಹೆಚ್ಚುವರಿಯಾಗಿ ಉಪನ್ಯಾಸಕರನ್ನು ಆಯ್ಕೆಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಬಾಕ್ಸ್ –
“ಹಲವು ದಿನಗಳಿಂದ ಪ್ರಥಮವರ್ಷದ ಪದವಿ ಅಧ್ಯಯನಕ್ಕೆ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ದಿ.17ರಿಂದ 30ರವರೆಗೂ ರೂ.200 ದಂಡಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯುವ ವ್ಯವಸ್ಥೆ ಇದೆ. ಹಾಗಾಗಿ ವಿಶ್ವವಿದ್ಯಾನಿಲಯವು ಬಿಸಿಎ ಪ್ರವೇಶಾತಿಗೆ ದಂಡಶುಲ್ಕವಿಲ್ಲದೆ ಮತ್ತು ಪ್ರವೇಶಾತಿಗೆ ದಿನಾಂಕ ಮುಂದೂಡಿದರೆ ನೀಡಿದರೆ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಲಿದೆ”. –ಡಾ.ಆರ್.ರಂಗಪ್ಪ. ಪ್ರಾಚಾರ್ಯರು.

Namma Challakere Local News
error: Content is protected !!