ಚಳ್ಳಕೆರೆ: ನಗರದ ಪ್ರತಿಷ್ಠಿತ ಎಚ್.ಪಿ.ಪಿ.ಸಿ.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಆರ್.ರಂಗಪ್ಪ ಅವರ ವರ್ಗಾವಣೆಯ ವದಂತಿ ಹರಡಿದ್ದು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ 6ತಿಂಗಳಹಿAದೆ ಚಳ್ಳಕೆರೆ ನಗರದ ಪ್ರತಿಷ್ಠಿತ ಹೆಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರಾಚಾರ್ಯರಾಗಿ ಆಗಮಿಸಿದ ಇವರು ಕಾಲೇಜನ್ನು ಸರ್ವತೋಮುಖ ಅಭಿವೃದ್ಧಿಯತ್ತ ಕೊಂಡೊಯ್ಯಲು ಶ್ರಮಿಸುತ್ತಿದ್ದಾರೆ. ಅಪಾರವಾದ ಭೋದನಾ ಅನುಭವ, ನುರಿತ ಆಡಳಿತ ಅನುಭವವು ಕಾಲೇಜನ್ನು ಪ್ರಗತಿಪಥÀದತ್ತ ತೆಗೆದುಕೊಂಡು ಹೋಗಲು ಸಹಕಾರಿಯಾಗುತ್ತಿದೆ.
ಕಾಲೇಜಿಗೆ ಪ್ರಾಚಾರ್ಯರಾಗಿ ಪದೋನ್ನತಿಯಾಗಿ ಬಂದು ಕೆಲವೇ ದಿನಗಳಲ್ಲಿ ರಾಷ್ಟ್ರಮಟ್ಟದ ನ್ಯಾಕ್ ಸಮಿತಿಯ ಪರಿಶೀಲನೆಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದರು. ನಂತರ ದಾವಣಗೆರೆ ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿ ಉತ್ತಮವಾದ ಪಲಿತಾಂಶಕ್ಕೆ ಸಾಕ್ಷಿಯಾದರು. ಕಾಲೇಜಿನಲ್ಲಿ ಪಠ್ಯ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಕಾಲೇಜು ಉತ್ತಮ ಪ್ರಗತಿ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಸ್ಕೌಟ್ ಅಂಡ್ ಗೈಡ್, ಎನ್.ಎಸ್.ಎಸ್, ರೇಂಜರ್ಸ್ ಅಂಡ್ ರೋವರ್ಸ್ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಕಾಲೇಜಿನ ಹಲವು ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿದ್ದಾರೆ. ಇದರಿಂದ ಚಳ್ಳಕೆರೆ ಕ್ಷೇತ್ರದ ಅಭಿವೃದ್ಧಿ ಹರಿಕಾರರಾದ ಶಾಸಕ ಟಿ. ರಘುಮೂರ್ತಿಯವರ ಆಶೋತ್ತರಗಳಿಗೆ ತಕ್ಕಂತೆ ಕೆಲಸ ಮಾಡಿ ಕೆಲವೇ ದಿನಗಳಲ್ಲಿ ಅವರ ಪ್ರಶಂಸೆಗೂ ಪಾತ್ರವಾಗಿರುವ ಇವರು ಕಾಲೇಜನ್ನು ಇನ್ನೂ ಉತ್ತಮವಾದ ವಿಧಾನಗಳು, ಹೊಸ ಕೋರ್ಸ್ಗಳ ಆರಂಭದ ಮೂಲಕ ರಾಜ್ಯದಲ್ಲಿಯೇ ಮಾದರಿ ಕಾಲೇಜನ್ನಾಗಿ ಮಾಡುವ ಪಣತೊಟ್ಟಿದ್ದಾರೆ.
ಪ್ರಸ್ತುತ ಕಾಲೇಜಿನಲ್ಲಿ ಪದವಿ ಪರೀಕ್ಷೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರಾಚಾರ್ಯರನ್ನು ಶಿರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸರ್ಕಾರ ವರ್ಗಾವಣೆ ಮಾಡುವ ಎಂಬ ವದಂತಿ ಹಬ್ಬಿದೆ. ಕಾಲೇಜಿಗೆ ಕೇವಲ 6ತಿಂಗಳ ಹಿಂದೆ ಪ್ರಾಚಾರ್ಯರಾಗಿ ಬಂದು ಉತ್ತಮವಾದ ಸೇವೆ ಸಲ್ಲಿಸಿರುವ ಇವರನ್ನು ಯಾವುದೇ ಕಾರಣಕ್ಕೂ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಮತ್ತು ಅಧಿಕಾರಿಗಳು ಇವರನ್ನು ವರ್ಗಾವಣೆ ಮಾಡಬಾರದು ಎಂದು ಕಾಲೇಜಿನ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.