ಡೆಂಗೀ ವಿರೋಧಿ ಮಾಸಾಚರಣೆಯನ್ನು -Pಊಅ ದೊಡ್ಡಉಳ್ಳರ‍್ತಿಯ ರೇಣುಕಾಪುರ ಪ್ರೌಢಶಾಲೆಯಲ್ಲಿ ನಡೆಸಲಾಯಿತು, ಈ ಕರ‍್ಯಕ್ರಮವನ್ನು ಶಾಲೆಯ ಮುಖ್ಯ ಶಿಕ್ಷಕರಾದ ಚಂದ್ರರೆಡ್ಡಿ ರವರ ಅದ್ಯಕ್ಷತೆಯಲ್ಲಿ ನಡೆಸಲಾಯಿತು. ನಂತರ ಕರ‍್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎ ಸುಧಾಕರರೆಡ್ಡಿ ಮಾತನಾಡಿ ಡೆಂಗೀ ಸಮಾಜದಿಂದ ನರ‍್ಮೂಲನೆ ಮಾಡಲು ಸಮುದಾಯದ ಸಹಕಾರ, ಸಹಭಾಗಿತ್ವ ಅಗತ್ಯವಾಗಿದೆ* ಡೆಂಗೀ ರ‍್ಬೋ ಎಂಬ ವೈರಸ್ ನಿಂದ ಬರುತ್ತದೆ ಇದು ಒಂದು ಸಾಂಕ್ರಾಮಿಕ ರೋಗವಾಗಿದ್ದು ಒಬ್ಬರಿಂದ ಒಬ್ಬರಿಗೆ ಸೋಂಕಿತ ಈಡಿಸ್ ಈಜಿಪ್ಟ್ ಎಂಬ ಸೊಳ್ಳೆಗಳು ಆರೋಗ್ಯವಂತ ವಕ್ತಿಯನ್ನು ಕಚ್ಚಿದಾಗ ಬರುವುದು, ಈ ಡೆಂಗೀ ಸೋಂಕಿತರಿಗೆ ಪ್ರಾರಂಭದಲ್ಲಿ ಜ್ವರ ಬಂದು,ಎರಡನೇ ಹಂತದಲ್ಲಿ ಹಲ್ಲು ವಸಡುಗಳಲ್ಲಿ ರಕ್ತ ಸ್ರವ, ರ‍್ಮ ಸುಕ್ಕು ಗಟ್ಟುವುದು, ಕೊನೆ ಹಂತದಲ್ಲಿ ವ್ಯಕ್ತಿ ನಿತ್ರಾಣ ನಾಗಿ ಮರ‍್ಛೆ ಹೋಗುವುದು, ರಕ್ತದೊತ್ತಡ ವಿಪರೀತ ಮೈಕೈ ನೋವು ಡಾಂಬರ ಕಲರ್ ಮಲವಿರ‍್ಜನೆ ಡೆಂಗೀ ಲಕ್ಷಣಗಳಾಗಿವೆ ಮತ್ತು ಸೊಳ್ಳೆಗಳು ನಿಯಂತ್ರಣ ಮಾಡಲು ಮನೆಯಲ್ಲಿನ ನೀರಿನ ತಾಣಗಳನ್ನು ಕನಿಷ್ಠ ವಾರಕ್ಕೆ ಎರಡು ಬಾರಿ ಸ್ವಚ್ಛವಾಗಿ ತೊಳೆಯಬೇಕು,ನಿಂತ ನೀರು ಸೊಳ್ಳೆಗಳ ತಾಣ, ಮನೆಯ ಹತ್ತಿರ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಘನ ತ್ಯಾಜ್ಯ ವಸ್ತುಗಳನ್ನು ಮನೆಯಿಂದ ದೂರ ವಿಲೇವಾರಿ ಮಾಡಬೇಕು, ಮನೆಯ ಕಿಟಕಿ ಬಾಗಿಲುಗಳಿಗೆ ಜಾಲರಿ ಅಳವಡಿಸಲು ತಿಳಿಸಲಾಯಿತು, ಪ್ರತಿಯೊಬ್ಬರೂ ಸೊಳ್ಳೆ ಪರದೆ ಉಪಯೋಗಿಸಿ, ಮೈ ತುಂಬಾ ಬಟ್ಟೆ ಧರಿಸಿ ಸೊಳ್ಳೆ ಕಡಿತದಿಂದ ಸಂರಕ್ಷಣೆ ಮಾಡಿಕೊಳ್ಳಲು ತಿಳಿಸಲಾಯಿತು ಮನೆಯ ಹತ್ತಿರ ತುಳಸಿ, ಸೇವಂತಿಗೆ,ಚೆಂಡು ಹೂ ಗಿಡ ಬೆಳಸಲು ತಿಳಿಸಲಾಯಿತು. ಕರ‍್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀನಿವಾಸ್,ಅಜಯ್ ಕುಮಾರ್, ಸಹಶಿಕ್ಷಕರು ಹಾಗೂ ಸರ‍್ವಜನಿಕರು ಹಾಜರಿದ್ದರು.

About The Author

Namma Challakere Local News
error: Content is protected !!