ಚಳ್ಳಕೆರೆ : ಭಾರತ ದೇಶದ ಜನಸಂಖ್ಯೆ ಈಡೀ ಪ್ರಪಂಚದಲ್ಲಿ ಎರಡನೇ ಸ್ಥಾನದಲ್ಲಿದೆ ಮುಂದಿನ ದಿನಗಳಲ್ಲಿ ಜನಸಂಖ್ಯೆ ನಿಯಂತ್ರಣ ಮಾಡಲಿಲ್ಲವಾದರೆ ಮುಂದಿನ ಭವಿಷ್ಯದಲ್ಲಿ ಮಕ್ಕಳು ಶಾಲಾ ಬ್ಯಾಗ್‌ನಲ್ಲಿ ಪುಸ್ತಕಗಳ ಬದಲಾಗಿ ಆಮ್ಲಜನಕದ ಕಿಟ್ ತರಬೇಕಾಗುತ್ತದೆ ಎಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಶುಂಲರಾದ ಎಂ.ರವೀಶ್ ಹೇಳಿದ್ದಾರೆ.
ಅವರು ನಗರದ ಸರಕಾರಿ ಪದವಿ ಪೂರ್ವ ಕಾಳೇಜಿನಲ್ಲಿ ತಾಲೂಕು ಆರೋಗ್ಯ ಇಲಾಖೆ ಆಯೋಜಿಸಿದ್ದ ವಿಶ್ವ ಜನಸಂಖ್ಯೆ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು, ದೇಶದ ಜನಸಂಖ್ಯೆ ನಿಯಂತ್ರಣಕ್ಕೆ ಪ್ರತಿಯೊಬ್ಬರ ಕೈ ಜೋಡಿಸಬೇಕು ಸಂತಾನಹರಣ ಶಸ್ತç ಚಿಕಿತ್ಸೆ ಮಾಡಿಸುವ ಮೂಲಕ ಮನೆಗೊಂದು ಮಗು ಎಂಬ ಸದುದ್ದೆಶದಿಂದ ದೇಶದ ಆರ್ಥಿಕತೆಗೆ ಮುಂದಾಗಬೇಕು, ದೇಶದಲ್ಲಿ ಭೂ ವಿಸ್ತೀರ್ಣ ಇದ್ದಷ್ಟೆ ಇದೆ ಆದರೆ ಜನಸಂಖ್ಯೆ ಮಾತ್ರ ಹೆಚ್ಚಳವಾಗಿದೆ ಇದು ಮುಂದಿನ ದಿನಗಳಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಂದರು.
ಇನ್ನೂ ತಾಲೂಕು ಆರೋಗ್ಯ ಅಧಿಕಾರಿ ಡಾ.ಕಾಶಿ ಮಾತನಾಡಿ, ವಿಶ್ವ ಜನಸಂಖ್ಯೆ ದಿನಾಚರಣೆ ಇಂದು ಆಚರಣೆ ಮಾಡುತ್ತಿರುವುದು ಮುಂದಿನ ಯುವ ಜನತೆಯಲ್ಲಿ ಅರಿವು ಮೂಡಿಸುವ ಮೂಲಕ ಜನಸಂಖ್ಯೆ ನಿಯಂತ್ರಣ ಮಾಡುವ ಮೂಲಕ ಸುಸ್ಥಿರ ದೇಶವನ್ನಾಗಿ ಮಾಡಬಹುದು, ದೇಶದಲ್ಲಿ 2022ರ ಅಂಕಿ ಅಂಶ ಪ್ರಕಾರ140 ಕೋಟಿ,ಅದೇ ರೀತಿಯಲ್ಲಿ ಕರ್ನಾಟಕ ರಾಜ್ಯದ ಜನಸಂಖ್ಯೆ 2021 ರ ಜನಗಣತಿಯ ಪ್ರಕಾರ 6.89ಕೋಟಿ ಇದೆ ಇನ್ನೂ ಚಿತ್ರದುರ್ಗ ಜಿಲ್ಲೆಯಲ್ಲಿ 2021ರ ಜನಗಣತಿ ಪ್ರಕಾರ 18,18,420 ಇದೆ, ಅದೇ ರೀತಿಯಲ್ಲಿ ಚಳ್ಳಕೆರೆ ಜನಸಂಖ್ಯೆ ನೋಡುವುದಾದರೆ 4,06.ಲಕ್ಷ ಜನ ಸಂಖ್ಯೆ ಇದೆ ಇನ್ನೂ 2011ರ ಜನಗಣತಿ ಪ್ರಕಾರ ನಗರದ ಜನಸಂಖ್ಯೆ 55194 ರಷ್ಟು ಇದೆ ಎಂದರು.
ಇನ್ನೂ ತಾಲೂಕು ಆರೋಗ್ಯ ಸಹಾಯಕ ಅಧಿಕಾರಿ ಕುಂದಾಪುರ ತಿಪ್ಪೇಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಈವರೆಗೆ ಜನಸಂಖ್ಯೆ ನಿಯಂತ್ರಣಕ್ಕೆ 615 ಮಹಿಳೆಯರಿಗೆ ಶಶ್ತç ಚಿಕಿತ್ಸೆ ಮಾಡಲಾಗಿದೆ ಇನ್ನೂ 2023 ಈ ಪ್ರಸ್ತುತ ವರ್ಷದಲ್ಲಿ ಯಾವದೇ ಪುರುಷರು ಸಂತಾನಹರಣ ಶಸ್ತç ಚಿಕಿತ್ಸೆ ಮಾಡಿಸದೆ ಇರುವು ಗೋಚರಿಸುತ್ತದೆ, ಈಗೇ ಪ್ರತಿಯೊಬ್ಬರು ಜನಸಂಖ್ಯೆ ನಿಯಂತ್ರಣ ಕಡಿವಾಣ ಹಾಕಬೇಕು ಯುವ ಜನತೆ ಮನಸ್ಸು ಮಾಡಿದರೆ ಅಸಾಧ್ಯವಾದದ್ದರು ಯಾವುದು ಇಲ್ಲ ಆದ್ದರಿಂದ ಜನಸಂಖ್ಯೆ ನಿಯಂತ್ರಣಕ್ಕೆ ಬಾಲ್ಯ ವಿವಾಹವೂ ಕೂಡ ಒಂದಾಗಿದೆ ಎಂದರು.
ಉಪನ್ಯಾಸಕಿ ಲಲಿತಾ ಮಾತನಾಡಿದರು, ಉಪನ್ಯಾಸಕ ಜಬಿವುಲ್ಲಾ, ಅಬಿಬುಲ್ಲಾ, ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಉದಯ್ ಚೌದರಿ, ಶ್ರೂಶಷಕಿ ತಿಪ್ಪಿರಮ್ಮ, ಬಾಸ್ಕರ್, ರಾಜು, ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!